ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ, ಕೊನೆಗೂ ಅಪರಾಧಿಗಳು ದೋಷಿ ಎಂದು ಘೋಷಿಸಿದ ಕೋರ್ಟ್
ಯುವ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆಯಾಗಿ 15 ವರ್ಷಗಳ ನಂತರ ಪ್ರಕರಣದ ನಾಲ್ವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆಗೆ ಅರ್ಹರು ಎಂದಿದೆ.

ಯುವ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆಯಾಗಿ 15 ವರ್ಷಗಳ ನಂತರ ಪ್ರಕರಣದ ನಾಲ್ವರು ಆರೋಪಿಗಳಿಗೆ ದೆಹಲಿಯ ಸಾಕೇತ್ ನ್ಯಾಯಾಲಯ ಶಿಕ್ಷೆಗೆ ಅರ್ಹರು ಎಂದಿದೆ. ಕಟ್ಟುನಿಟ್ಟಾದ MCOCA ಕಾನೂನಿನ ಅಡಿಯಲ್ಲಿ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದೆ.
ಆಕೆಯನ್ನು ದರೋಡೆ ಮಾಡುವ ಉದ್ದೇಶದಿಂದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್ ಮತ್ತು ಬಲ್ಜೀತ್ ಮಲಿಕ್ ಕೊಲೆ ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ಹೇಳಿದೆ. ಅವರನ್ನು 302 ಮತ್ತು 34 ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪಣೆ ಮಾಡಲಾಗಿದೆ. MCOCA ಯ ಸೆಕ್ಷನ್ 3(1) (i) ಅಡಿಯಲ್ಲಿಯೂ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.
6 ಲಕ್ಷದ ಸಿಂಗಲ್ ಟೀ ಕಪ್ ನಿಂದ ಹಿಡಿದು ನೀತಾ ಅಂಬಾನಿ ಬಳಿ
ಐದನೇ ಆರೋಪಿ ಅಜಯ್ ಸೇಥಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 411 ರ ಅಡಿಯಲ್ಲಿ ಅಪರಾಧ ವಾಹನವನ್ನು ಉಳಿಸಿಕೊಂಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ. ಕದ್ದ ಆಸ್ತಿಯನ್ನು ಹೊಂದಿದ್ದಾರೆ ಮತ್ತು MCOCA ಯ ಸೆಕ್ಷನ್ 3(2) ಮತ್ತು 3(5) ಅಡಿಯಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ಆರೋಪಿಗಳು ಸೌಮ್ಯ ವಿಶ್ವನಾಥನ್ ಅವರನ್ನು ದರೋಡೆ ಮಾಡುವ ಉದ್ದೇಶದಿಂದಲೇ ಹತ್ಯೆಗೈದಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತೀರ್ಪು ಘೋಷಣೆಯ ಸಂದರ್ಭದಲ್ಲಿ ನ್ಯಾಯಾಲಯವು ಒತ್ತಿ ಹೇಳಿದೆ.
ಪ್ರಕರಣ ಸಂಬಂಧ ಮುಂದಿನ ವಾರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ. ಮೃತ ಪತ್ರಕರ್ತೆಯ ತಾಯಿ ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಆದರೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹದಿನೈದು ವರ್ಷಗಳ ಹಿಂದೆ, ಸೆಪ್ಟೆಂಬರ್ 30, 2008 ರಂದು, ಖಾಸಗಿ ಸಂಸ್ಥೆ ಇಂಡಿಯಾ ಟುಡೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ದಕ್ಷಿಣ ದೆಹಲಿಯವಸಂತ್ ಕುಂಜ್‌ನ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಚೆನ್ನಾಗಿ ಅಡುಗೆ ಮಾಡಲು ಹೆಂಡತಿಗೆ ಬರೋದಿಲ್ಲ ಎನ್ನುವುದು ಕ್ರೌರ್ಯವ
ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆಕೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೊಲೆಗಾರರನ್ನು ಗುರುತಿಸಲು ಪೊಲೀಸರು ಆರಂಭದಲ್ಲಿ ಹೆಣಗಾಡಿದರು, ಆದರೆ 2009 ರಲ್ಲಿ ಬಿಪಿಒ ಉದ್ಯೋಗಿ ಜಿಗೀಶಾ ಘೋಷ್ ಅವರ ಹತ್ಯೆಯ ತನಿಖೆಯ ಸಮಯದಲ್ಲಿ ಒಂದು ಮಹತ್ವದ ಸುಳಿವು ಸಿಕ್ಕಿತು. ಆರೋಪಿಗಳಲ್ಲಿ ಒಬ್ಬಾತ ವಿಶ್ವನಾಥನ್ ಅವರ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡರು.
ನಂತರ, ಜಿಗಿಶಾ ಘೋಷ್ ಹತ್ಯೆ ಪ್ರಕರಣ ಸೇರಿದಂತೆ ಇತರ ಘೋರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ದೆಹಲಿ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಯನ್ನು ಜಾರಿಗೊಳಿಸಿ ಕೇಸ್ ಹಾಕಲಾಯಿತು.
15 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಸಾಕ್ಷ್ಯಗಳನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ 13 ವರ್ಷಗಳನ್ನು ತೆಗೆದುಕೊಂಡಿತು. ಇದಲ್ಲದೆ, ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ಕೂಡ ಕೆಲವು ವಿಚಾರಣೆಗಳಲ್ಲಿ ಗೈರು ಹಾಜರಾಗಿದ್ದರು.