Asianet Suvarna News Asianet Suvarna News

Sex Abuse Allegations: ಗೋವಾ ನಗರಾಭಿವೃದ್ಧಿ ಸಚಿವ ಮಿಲಿಂದ್‌ ನಾಯಕ್‌ ರಾಜೀನಾಮೆ

  • ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ
  • ಗೋವಾ ನಗರಾಭಿವೃದ್ಧಿ ಸಚಿವ ಮಿಲಿಂದ್‌ ನಾಯಕ್‌ ರಾಜೀನಾಮೆ
  • ಗೋವಾ ಚುನಾವಣೆಗೂ ಮೊದಲು ಬಿಜೆಪಿಗೆ ತಟ್ಟಿದ ಕಳಂಕ
Ahead of Assembly polls sex abuse allegations against Goa minister Milind Naik resigns akb
Author
Bangalore, First Published Dec 16, 2021, 11:51 AM IST

ಪಣಜಿ(ಡಿ.16): ಗೋವಾ ನಗರಾಭಿವೃದ್ಧಿ ಸಚಿವ ಮಿಲಿಂದ್‌ ನಾಯ್ಕ್‌(Milind Naik) ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ( ಡಿ15) ರಂದು ಕಾಂಗ್ರೆಸ್‌ ನಾಯಕರು, ಮಿಲಿಂದದ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಒಂದು ಗಂಟೆಯ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಗೋವಾದಲ್ಲಿ ಇನ್ನೆರಡು ತಿಂಗಳಲ್ಲಿ ವಿಧಾನಸಭೆಗೆ  ಚುನಾವಣೆ ನಡೆಯಲಿದೆ. ಈ ಮಧ್ಯೆ ಸಚಿವ ವಿರುದ್ಧದ ಈ  ಆರೋಪದಿಂದ ಆಡಳಿತರೂಢ ಬಿಜೆಪಿಗೆ ಕಳಂಕ ಬಂದಂತಾಗಿದೆ. 

ಈ ಮಧ್ಯೆ, ಪ್ರಕರಣದ ಮುಕ್ತ ತನಿಖೆಯನ್ನು ನಡೆಸುವ ಸಲುವಾಗಿ ಮಿಲಿಂದ್ ನಾಯ್ಕ್‌ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ. ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ನಡೆಸುವ ಸಲುವಾಗಿ ಮಿಲಿಂದ್ ನಾಯ್ಕ್‌ ಗೋವಾ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಅದನ್ನು ಅಂಗೀಕರಿಸಲಾಗಿದೆ ಮತ್ತು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಸಿಎಂಒ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್(Pramod Sawant), ನಾಯಕ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಮತ್ತು ಅದನ್ನು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ (Sreedharan Pillai) ಅವರಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

Congress Leader Ravi Naik: ಕಾಂಗ್ರೆಸ್‌ಗೆ ಬಿಗ್ ಶಾಕ್‌ : ಮಾಜಿ ಸಿಎಂ ಬಿಜೆಪಿಗೆ

ನಿನ್ನೆ ಗೋವಾ ಕಾಂಗ್ರೆಸ್‌ನ ಮುಖ್ಯಸ್ಥ ಗಿರೀಶ್ ಚೋಡಂಕರ್ (Girish Chodankar) ಅವರು ನಾಯ್ಕ್ ಅವರು ಕ್ಯಾಬಿನೆಟ್ ಸದಸ್ಯರಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಸಚಿವರನ್ನು ವಜಾಗೊಳಿಸಬೇಕು ಮತ್ತು ಅವರ ಮೇಲಿನ ಆರೋಪದ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದರು. ಹದಿನೈದು ದಿನಗಳ ಹಿಂದೆಯೇ, ಗಿರೀಶ್ ಚೋಡಂಕರ್ ಅವರು ಈ ವಿಷಯವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು, ಆದರೆ ಆ ಸಮಯದಲ್ಲಿ ಸಚಿವರ ಹೆಸರನ್ನು ಅವರು ಹೇಳಿರಲಿಲ್ಲ.

ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳಿಗೆ 15 ದಿನಗಳ ಕಾಲಾವಕಾಶವನ್ನು ಅವರು ನೀಡಿದ್ದರು. ಸಚಿವರ ವಿರುದ್ಧ ಕ್ರಮಕೈಗೊಳ್ಳಲು ಸಿಎಂ ಸಾವಂತ್ 15 ದಿನಗಳ ಕಾಲಾವಕಾಶ ನೀಡಿದರೂ ವಿಫಲರಾಗಿದ್ದಾರೆ. ಸಂತ್ರಸ್ತೆಯನ್ನು ಲೈಂಗಿಕವಾಗಿ ಶೋಷಿಸುವಲ್ಲಿ ಮಿಲಿಂದ್ ನಾಯ್ಕ್ ನೇರ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. (ಲೈಂಗಿಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ). ಬಿಜೆಪಿ ಸರ್ಕಾರ ಈ ವಿಕೃತ ಮನಸ್ಥಿತಿಯ ಸಚಿವನನ್ನು ಹೊರ ಹಾಕಬೇಕು(@BJP4Goa Govt and with its ministers/MLAs must be kicked out) ಎಂದು ಗೋವಾ ಕಾಂಗ್ರೆಸ್ ಸುದ್ದಿಗೋಷ್ಠಿಯ ವಿಡಿಯೋ ಜೊತೆಗೆ ಟ್ವೀಟ್ ಮಾಡಿದೆ.

 

ಪತ್ರಿಕಾಗೋಷ್ಠಿಯಲ್ಲಿ, ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸಂಕಲ್ಪ್ ಅಮೋನ್ಕರ್(Sankalp Amonkar) ಅವರು ಸಂತ್ರಸ್ತೆ ಹಾಗೂ ಸಚಿವರ ನಡುವೆ ನಡೆದ ಆಡಿಯೋ ಸಂಭಾಷಣೆಯನ್ನು ಬಿಡುಗಡೆ ಮಾಡಿದರು.

ರಾಜಕಾರಣಿಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಇದೇ ಮೊದಲಲ್ಲ. ರಾಜಕಾರಣಿಗಳ ಸಡಿಲ ವರ್ತನೆ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದ ಹಲವು ಉದಾಹರಣೆಗಳು ಈಗಾಗಲೇ ನಮ್ಮಲ್ಲಿವೆ. ಈ ಹಿಂದೆ ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. 2013 ರಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಸಿ.ಡಿ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು.

Mamata In Goa: ಕಾಂಗ್ರೆಸ್‌ಗೆ ಆಫರ್ ಕೊಟ್ಟ ದೀದೀ, ಒಪ್ಕೋತಾರಾ ರಾಹುಲ್?

ಶಾಸಕ ರೇಣುಕಾಚಾರ್ಯ ಅವರು ಮಹಿಳೆಯೊಬ್ಬರ ಜೊತೆಗಿದ್ದ ಫೋಟೋ ಕೂಡ ರೇಣುಕಾಚಾರ್ಯ ಅವರನ್ನು ರಾಜಕಾರಣದಲ್ಲಿ ಕೆಳಗಿಳಿಯುವಂತೆ ಮಾಡಿತ್ತು. ಇಂದಿಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಲೈಂಗಿಕ ಹಗರಣದ ಉದಾಹರಣೆ ನೀಡುವಾಗ ರೇಣುಕಾಚಾರ್ಯ ಉದಾಹರಣೆಯನ್ನು ನೀಡುತ್ತಾರೆ. ಅದರ ಜೊತೆಗೆ ಹಾಲಪ್ಪ ಅವರ ಉದಾಹರಣೆಯನ್ನು ನೀಡುತ್ತಾರೆ. ಒಮ್ಮೆ ಇಂತಹ ಕಳಂಕ ಬಂದರೆ ಅದೂ ಎಂದಿಗೂ ಹೋಗುವುದಿಲ್ಲ. ಇಂದಿಗೂ ಆ ಪ್ರಕರಣ ರೇಣುಕಾಚಾರ್ಯ ಅವರನ್ನು ಕಾಡುತ್ತಿದೆ.

Follow Us:
Download App:
  • android
  • ios