ಸಂಗಾತಿಗೆ ಪ್ರೀತಿಯ ಧಾರೆ, ಈ ಚಿಕ್ಕಪುಟ್ಟ ಕೆಲಸ ಅವರಿಗೆ ಇಷ್ಟವಾಗುತ್ತೆ
ಸಂಗಾತಿಗೆ ತಮ್ಮಲ್ಲಿರುವ ಪ್ರೀತಿಯನ್ನು ಹೇಳಿಕೊಳ್ಳಲು ದೊಡ್ಡ ದೊಡ್ಡ ಕೆಲಸಗಳನ್ನೇ ಮಾಡಬೇಕು ಎಂದೇನಿಲ್ಲ. ಬದಲಾಗಿ ಸಣ್ಣ ಸಣ್ಣ ಕೆಲಸ ಮಾಡುವ ಮೂಲಕ, ಅವರಿಗೆ ಪ್ರೀತಿಯನ್ನು ತಿಳಿಸಬಹುದು. ಇದರ ಅರ್ಥ ಅವರಿಗೆ ಖುದ್ಧಾಗಿ ಹೋಗಿ ಐ ಲವ್ ಯೂ ಎಂದು ಹೇಳಬೇಕು ಅಂದಲ್ಲ. ಬದಲಾಗಿ ಅವರಿಗೆ ಇಷ್ಟವಾದ ಕೆಲಸ ಮಾಡುವುದು, ಅವರ ಜೊತೆಯಾಗಿ ಇರುವುದು, ಕೈಹಿಡಿಯುವುದು ಇತ್ಯಾದಿ ಮಾಡುವ ಮೂಲಕ ಅವರಿಗೆ ಪ್ರೀತಿಯ ಧಾರೆ ಎರೆಯಬೇಕು.
ಕೃತಜ್ಞತೆಯನ್ನು ತೋರಿಸಿ: ಧನ್ಯವಾದಗಳು ಎಂದು ಹೇಳಲು ಪ್ರಾರಂಭಿಸಿ ಏಕೆಂದರೆ ಈ ಮಾಂತ್ರಿಕ ಪದಗಳು ಹುರಿದುಂಬಿಸಲು ಮತ್ತು ಅವರ ಪ್ರಯತ್ನವು ಗಮನಕ್ಕೆ ಬರುತ್ತಿದೆ ಎಂದು ತೋರಿಸುವ ಶಕ್ತಿಯನ್ನು ಹೊಂದಿದೆ. ಸಂಗಾತಿ ಮಾಡುವ ಕೆಲಸಗಳನ್ನು ಒಪ್ಪಿ ಮತ್ತು ಸಂಬಂಧದಲ್ಲಿ ಅವರು ಮಾಡಿದ ಪ್ರಯತ್ನಕ್ಕೆ ಕೃತಜ್ಞತೆಯನ್ನು ತೋರಿಸುವುದನ್ನು ನಿಲ್ಲಿಸಬೇಡಿ.
ಸರ್ಪ್ರೈಸಸ್ ಪ್ಲಾನ್ ಮಾಡಿ : ಅಲಂಕಾರಿಕ ರೆಸ್ಟೋರೆಂಟ್ನಲ್ಲಿ ಟೇಬಲ್ ಬುಕ್ ಮಾಡಿ ಅಥವಾ ಸಂಗಾತಿಗೆ ಯಾವುದೇ ಸಮಯದಲ್ಲಿ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಿ. ಅವರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡುವ ಸಂದರ್ಭಕ್ಕಾಗಿ ಕಾಯಬೇಡಿ, ಬದಲಿಗೆ, ಸಾಮಾನ್ಯ ದಿನವನ್ನು ಜೀವನದುದ್ದಕ್ಕೂ ಸ್ಮರಣೀಯ ದಿನವನ್ನಾಗಿ ಮಾಡಿ.
ಕೈ ಹಿಡಿಯಿರಿ: ಸಂಗಾತಿಯ ಕೈ ಹಿಡಿದು ಹೆಜ್ಜೆ ಹಾಕಿ ನಡೆಯುವುದನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಕೈಯನ್ನು ಸಾರ್ವಜನಿಕವಾಗಿ ಹಿಡಿದಿಟ್ಟುಕೊಳ್ಳುವುದರಿಂದ ನಿಮಗೆ ಸರಿಯಾದ ಪ್ರಮಾಣದ ಪೊಸೇಸೀವ್ನೆಸ್ ಜೊತೆಗೆ ಸುರಕ್ಷತೆ ಮತ್ತು ಪ್ರೀತಿಯ ಪ್ರಜ್ಞೆಯನ್ನು ನೀಡುತ್ತದೆ. ಸಂಗಾತಿಯೊಂದಿಗೆ ಹೊರಗೆ ಹೋದರೆ, ಅವರು ಯೋಚಿಸದೇ ಇದ್ದಾಗ ಅವರ ಕೈಯನ್ನು ಹಿಡಿದುಕೊಳ್ಳಿ ಮತ್ತು ಅವರು ಬ್ಲಶ್ ಮಾಡುವುದನ್ನು ನೋಡಿ!
ಕೆಲವೊಮ್ಮೆ, ಅವರು ವಾದವನ್ನು ಗೆಲ್ಲಲಿ: ಕೆಲವೊಂದು ವಿಷಯಗಳ ಬಗ್ಗೆ ವಾದಿಸುವಾಗ ದಂಪತಿಗಳು ಪ್ರಬುದ್ಧರಾಗಿ ಯೋಚಿಸಬೇಕು. ನಂತರ ಸರಿಯಾದ ನಿರ್ಧಾರಕ್ಕೆ ಬರುವುದು ಬಹಳ ಮುಖ್ಯ, ಅಂದರೆ ಪ್ರತಿ ಬಾರಿ ತಪ್ಪು ಸರಿ ಏನೆ ಇರಲಿ, ವಾದ ಮಾಡಿ ತಾನೇ ಗೆಲ್ಲಬೇಕು ಎಂದು ಯೋಚಿಸಬೇಡಿ. ಬದಲಾಗಿ ಸಂಗಾತಿಗೆ ಗೆಲ್ಲಲು ಬಿಡಿ. ಅವರ ಗೆಲುವಲ್ಲಿ ನಿಮ್ಮ ಪ್ರೀತಿ ಅಡಗಿರುವುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.
ಜೊತೆಯಾಗಿ ಅವರಿಗೆ ಇಷ್ಟವಾದ ಟಿವಿ ಶೋ ನೋಡಿ: ಇದು ಗಾಸಿಪ್ ಗರ್ಲ್ ಅಥವಾ ಕೆಲವು ಕ್ರೈಂ ಶೋ ಯಾವುದೇ ಆಗಿರಲಿ, ಸಂಗಾತಿ ಟಿವಿ ನೋಡುವಾಗ ಜೊತೆಯಾಗಿ ಸಂಗಾತಿಯ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಆಸಕ್ತಿ ವಹಿಸುವ ಮೂಲಕ ಅವರಿಗೆ ಸಂತಸ ನೀಡಿ. ಹೀಗೆ ಮಾಡಿದರೆ ಮುಂದಿನ ಬಾರಿ ನೀವು ಇಷ್ಟಪಡುವ ಶೋ ನೋಡುವಾಗ ನಿಮ್ಮ ಸಂಗಾತಿ ನಿಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಾಣುತ್ತೀರಿ. ಇದೆ ಅಲ್ವಾ ಪ್ರೀತಿಯ ರೀತಿ.
ಅವರಿಗೆ ಇಷ್ಟವಾದ ಅಡುಗೆ ಮಾಡಿ ಸರ್ಪ್ರೈಸ್ ನೀಡಿ: ಯಾವಾಗಲೂ ಬೋರಿಂಗ್ ಅದೇ ಅಡುಗೆ ಮಾಡುವ ಬದಲು ಈ ಬಾರಿಗೆ ಅವರಿಗೆ ಇಷ್ಟವಾಗುವಂತೆ ಸ್ಪೆಷಲ್ ಏನಾದರು ಮಾಡಿ ಅವರಿಗೆ ಸರ್ಪ್ರೈಸ್ ನೀಡಿ. ಇದನ್ನು ಬಡಿಸುವಾಗ ಉತ್ತಮ ವಾತಾವರಣವನ್ನು ಸೃಷ್ಟಿಸಿ ನಂತರ ಅವರಿಗೆ ಬಡಿಸಿ. ಇದರಿಂದ ಅವರಿಗೆ ತುಂಬಾನೆ ಖುಷಿಯಾಗುತ್ತದೆ. ಜೊತೆಗೆ ನೀವೆಷ್ಟೂ ಪ್ರೀತಿಸುತ್ತೀರಿ ಅನ್ನೋದು ತಿಳಿಯುತ್ತದೆ.
‘ಐ ಲವ್ ಯು’ ನೋಟ್: ಹತ್ತಿರದ ಸ್ಟೇಷನರಿ ಅಂಗಡಿಯಿಂದ ಕೆಲವು ಸ್ಟಿಕ್ಕಿ ನೋಟ್ ಗಳನ್ನು ಖರೀದಿಸಿ ಮತ್ತು ಐ ಲವ್ ಯು ಬರೆದು ಅವರು ನೋಡುವ ಸ್ಥಳಗಳಲ್ಲಿ ಎಲ್ಲಿಯಾದರೂ ಈ ನೋಟ್ಗಳನ್ನು ಅಂಟಿಸಲು ಪ್ರಾರಂಭಿಸಿ. ನೀವು ಎಲ್ಲ ಸಮಯದಲ್ಲೂ ಅವರೊಂದಿಗೆ ಇರುತ್ತೀರಿ ಎಂಬುದು ಇಂತಹ ನೋಟ್ ಗಳ ಮೂಲಕ ತಿಳಿಯುತ್ತದೆ.
ಮಿಸ್ ಯೂ ಎಂದು ಮೆಸೇಜ್ ಮಾಡಿ : ಅವರು ಕಚೇರಿಯಲ್ಲಿ ಇದ್ದಾಗ, ತುಂಬಾ ಕೆಲಸ ಒತ್ತಡ ಎಲ್ಲವೂ ಅವರನ್ನು ಭಾಧಿಸಬಹುದು. ಇಂತಹ ಸಮಯದಲ್ಲಿ ಅವರಿಗೆ ಮಿಸ್ ಯೂ ಎಂದು ಮೆಸೇಜ್ ಮಾಡಿ. ಈ ಒಂದು ಮೆಸೇಜ್ ಅವರ ಹೃದಯ ಅರಳುವಂತೆ ಮಾಡುತ್ತದೆ ಮೂಡ್ ಫ್ರೆಷ್ ಆಗುತ್ತದೆ.