- Home
- Life
- Relationship
- ಹುಡುಗೀರು ಹೇಳುವುದೇ ಒಂದು, ಅರ್ಥಾನೇ ಮತ್ತೊಂದು, ಹೂವಿನಂಥ ಹುಡುಗಿ ಮನಸ್ಸನ್ನು ಅರಿಯುವುದು ಹೇಗೆ?
ಹುಡುಗೀರು ಹೇಳುವುದೇ ಒಂದು, ಅರ್ಥಾನೇ ಮತ್ತೊಂದು, ಹೂವಿನಂಥ ಹುಡುಗಿ ಮನಸ್ಸನ್ನು ಅರಿಯುವುದು ಹೇಗೆ?
ಅದು ಹೆಂಡ್ತಿ ಆಗಿರ್ಲಿ ಅಥವಾ ಗರ್ಲ್ ಫ್ರೆಂಡ್ ಆಗಿರ್ಲಿ ಹೆಚ್ಚಿನ ಹುಡುಗರು ತಮ್ಮ ಸಂಗಾತಿ ಮಾತಿನ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳೋದೇ ಇಲ್ಲ. ಇದೇ ಕಾರಣಕ್ಕೆ ಸಾಮಾನ್ಯವಾಗಿ ಜಗಳವಾಗುತ್ತೆ. ನಿಮ್ಮ ಕೆಲಸ ಸುಲಭ ಮಾಡೋಕೆ, ಮಹಿಳೆಯರು ಏನ್ ಮಾತಾಡಿದ್ರೆ ಅದರ ಅರ್ಥ ಏನಿರುತ್ತೆ ಅನ್ನೋದನ್ನು ಹೇಳ್ತೀವಿ ಕೇಳಿ.

ಯಾವುದೇ ಹುಡುಗಿ, ಅದು ನಿಮ್ಮ ಸ್ನೇಹಿತೆ, ಗೆಳತಿ ಅಥವಾ ಹೆಂಡತಿಯಾಗಿರಲಿ, ಅವರು ಆಡೋ ಮಾತು ಒಂದಾಗಿರುತ್ತೆ, ಅದರ ಅರ್ಥ ಬೇರೆಯೇ ಆಗಿರುತ್ತೆ. ಯಾವುದೇ ಹುಡುಗಿ ಏನಾದ್ರೂ ಹೇಳಿದ್ರೆ ಹುಡುಗ್ರಿಗೆ ಭಯ ಶುರುವಾಗುತ್ತೆ, ಯಾಕಂದ್ರೆ ಅವರು ಏನೇ ಹೇಳಿದ್ರೂ ಅದನ್ನ ಅರ್ಥ ಮಾಡ್ಕೋಳೋಕೆ ಹುಡುಗರಿಗೆ ನಿಜವಾಗ್ಲೂ ಕಷ್ಟವಾಗುತ್ತೆ. ಇದರಿಂದಲೇ ಜಗಳ ಆರಂಭವಾಗುತ್ತೆ, ಇಷ್ಟು ವರ್ಷಗಳಾದ್ರೂ ನೀನು ನನ್ನ ಅರ್ಥ ಮಾಡ್ಕೊಳ್ಳೆ (understanding girls) ಇಲ್ಲ ಅನ್ನೋದಕ್ಕೆ ಶುರು ಮಾಡ್ತಾರೆ ಹುಡುಗೀರು.
ನೀವು ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ,ಈ ಲೇಖನ ಸ್ಪೆಷಲ್ ಆಗಿ ನಿಮಗಾಗಿ. ಇದರಲ್ಲಿ ಹುಡುಗೀರು ಹೇಳೋ ಕೆಲವು ಮಾತಿನ ಅರ್ಥವೇನು? ಅವರು ಮೆಸೇಜ್ ಮಾಡಿ ಏನಾದ್ರೂ ಹೇಳಿದ್ರೆ, ಅದರ ಅರ್ಥ ಏನು ಅನ್ನೋದನ್ನು ಹೇಳ್ತೀವಿ. ಹಾಗಿದ್ರಿ ಹುಡುಗೀರು ನಿಮ್ ಹತ್ರ ಏನ್ ಹೇಳೋದಕ್ಕೆ ಬಯಸ್ತಾರೆ ಅನ್ನೋದನ್ನ ಈವಾಗ್ಲೇ ನೋಡಿ.
ರಿಲೇಶನ್ ಶಿಪ್ ಗೆ ರೆಡಿ ಇಲ್ಲ (Not ready for relationship)
ಹುಡುಗಿಯರು ತಾವು ಈಗ ರಿಲೇಶನ್ ಶಿಪ್ ನಲ್ಲಿರಲು ಸಿದ್ಧರಿಲ್ಲ ಎಂದು ಹೇಳಿದಾಗ, ಅವರು ನಿಮ್ಮೊಂದಿಗೆ ಸಂಬಂಧ ಹೊಂದಲು ಬಯಸುವುದಿಲ್ಲ ಎಂದರ್ಥ. ಅವಳು ಹುಡುಕುತ್ತಿರುವ ವ್ಯಕ್ತಿ ನೀನಲ್ಲ. ಆದ್ದರಿಂದ ಒಬ್ಬ ಹುಡುಗಿ ಇದನ್ನು ನಿಮಗೆ ಹೇಳಿದರೆ, ಅವಳು ಏನ್ ಹೇಳ್ತಿದ್ದಾರೆ ಅನ್ನೋದನ್ನು ತಿಳಿದು ಅಂತರ ಕಾಪಾಡಿಕೊಂಡ್ರೆ, ಇಬ್ಬರಿಗೂ ಒಳ್ಳೇದು.
ನಾನು ಬ್ಯುಸಿಯಾಗಿದ್ದೆ (Busy)
ಒಬ್ಬ ಹುಡುಗಿ ದಿನವಿಡೀ ನಿಮ್ಮ ಮೆಸೇಜ್ ಗಳಿಗೆ ಉತ್ತರಿಸದಿದ್ದರೆ ಮತ್ತು ಕೊನೆಯದಾಗಿ 'ನಾನು ಬ್ಯುಸಿಯಾಗಿದ್ದೆ ಎಂದು ಹೇಳುವ ಮೂಲಕ ಸಾರಿ ಕೇಳಿದ್ರೆ, ತನ್ನ ಕೆಲಸದ ಮಧ್ಯದಲ್ಲಿ ನಿಮ್ಮ ಮೆಸೇಜ್ ಗೆ ಉತ್ತರಿಸೋವಷ್ಟು ನೀವು ಇಂಪಾರ್ಟಂಟ್ ಅಲ್ವೇ ಅಲ್ಲ ಎಂದರ್ಥ. ಹೌದು, ಹುಡುಗಿ ಬ್ಯುಸಿ ಎಂದು ಹೇಳಿ, ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳಬಹುದು, ಇದರರ್ಥ ಅವರಿಗೆ ನಿಮ್ಮ ಬಳಿ ಮಾತನಾಡೋಕೆ ಇಷ್ಟ ಇಲ್ಲ. ಹಾಗಾಗಿ ಸುಮ್ಮನಿರೋದೆ ಬೆಸ್ಟ್.
ಹಳೆ ದಿನ ನೆನಪಿಸಿಕೊಂಡರೆ (Remembering Old Days)
'ನಾನು ಆ ದಿನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನಾವು ಎಷ್ಟು ಎಂಜಾಯ್ ಮಾಡಿದ್ದೇವೆ' ಎಂದು ಒಬ್ಬ ಹುಡುಗಿ ನಿಮಗೆ ಹೇಳಿದಾಗ, ಅವಳು ನಿಮ್ಮೊಂದಿಗೆ ಸಮಯ ಕಳೆಯಲು ಬಯಸುತ್ತಾಳೆ, ಅವಳು ನಿಮ್ಮನ್ನು ಭೇಟಿಯಾಗಲು ಬಯಸುತ್ತಾಳೆ ಎಂದರ್ಥ. ಆದ್ದರಿಂದ ನಿಮ್ಮ ಸಂಗಾತಿ ಎಂದಾದರೂ ಇದನ್ನು ಹೇಳಿದ್ರೆ, ಅವರನ್ನು ಮೀಟ್ ಮಾಡಲು ಪ್ಲ್ಯಾನ್ ಮಾಡಿ. ಅವರಿಗೆ ಸರ್ಪ್ರೈಸ್ ನೀಡಿದ್ರೆ ಇನ್ನೂ ಖುಷಿಯಾಗ್ತಾರೆ.
ಮುಂದಿನ ಬಾರಿ ನೋಡೋಣ (May be next Time)
ಹುಡುಗಿಯರು 'ಮೆ ಬಿ ನೆಕ್ಸ್ಟ್ ಟೈಮ್’ ಅಥವಾ 'ಮುಂದಿನ ಬಾರಿ ನೋಡೋಣ' ಎಂದು ಹೇಳಿದ್ರೆ, ಅವರಿಗೆ ನಿಮ್ಮ ಮೇಲೇ ಯಾವುದೇ ಇಂಟ್ರೆಸ್ಟ್ ಇಲ್ಲ. ಅವಳು ಅದನ್ನು ನೇರವಾಗಿ ಹೇಳಲು ಸಾಧ್ಯವಿಲ್ಲದ ಕಾರಣ, ತನಗೆ ಕೆಲಸ ಇದೆ, ಟೈಮ್ ಇಲ್ಲ, ಮೆ ಬಿ ನೆಕ್ಸ್ಟ್ ಟೈಮ್ ಎನ್ನುತ್ತಾರೆ.
ಹುಡುಗಿ ಸಹಾಯ ಕೇಳಿದಾಗ
'ಈ ಕೆಲಸದಲ್ಲಿ ನೀವು ನನಗೆ ಸಹಾಯ ಮಾಡಬಹುದೇ' ಎಂದು ಒಬ್ಬ ಹುಡುಗಿ ನಿಮ್ಮನ್ನು ಕೇಳಿದರೆ, ಅವಳು ನಿಮ್ಮನ್ನು ಉತ್ತಮ ವ್ಯಕ್ತಿ ಎಂದು ಪರಿಗಣಿಸುತ್ತಾಳೆ, ಹಾಗಾಗಿ ನಿಮ್ಮ ಬಳಿ ಸಹಾಯ ಕೇಳ್ತಿದ್ದಾಳೆ ಎಂದರ್ಥ. ಯಾವುದೇ ಹುಡುಗಿ ನಿಮ್ಮ ಬಳಿ ಸಹಾಯ ಕೇಳಿದ್ರೆ ಆಕೆಗೆ ನಿಮ್ಮ ಮೇಲೆ ಇಂಟ್ರೆಸ್ಟ್ ಇದೆ ಎಂದರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.