ಗ್ರಹಣ ಹಿನ್ನೆಲೆ ಉಡುಪಿ ಕೃಷ್ಣಮಠದಲ್ಲಿ ಜಪ ತರ್ಪಣ: ಇಲ್ಲಿವೆ ಫೋಟೋಸ್
ಉಡುಪಿ ಕೃಷ್ಣಮಠದಲ್ಲಿ ಭಾನುವಾರ ಸೂರ್ಯಗ್ರಹಣದ ಪ್ರಯುಕ್ತ ವಿಶೇಷ ಜಪ-ತಪಾದಿಗಳನ್ನು ನಡೆಸಲಾಯಿತು. ಇಲ್ಲಿವೆ ಫೋಟೋಸ್

ಗ್ರಹಣದ ಮಧ್ಯಕಾಲದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮತ್ತು ಇತರ ಮಠಾಧೀಶರು ಸೇರಿ ಶ್ರೀಕೃಷ್ಣ - ಮುಖ್ಯಪ್ರಾಣರಿಗೆ ವಿಶೇಷ ಮಂಗಳಾರತಿ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 5.30ಕ್ಕೆ ಕೃಷ್ಣನಿಗೆ ನಡೆಯಬೇಕಾಗಿದ್ದ ಪಂಚಾಮೃತ ಅಭಿಷೇಕವನ್ನು ಪರ್ಯಾಯ ಶ್ರೀಗಳು ಗೃಹಣ ಮೋಕ್ಷದ ನಂತರ ನೆರವೇರಿಸಿದರು.

ಅಪರಾಹ್ನ 2 ಗಂಟೆಗೆ ನಡೆಯಬೇಕಾಗಿದ್ದ ಮಹಾಪೂಜೆಯನ್ನು ಸಂಜೆ 5 ಗಂಟೆಗೆ ನಡೆಸಲಾಯಿತು.

ಗ್ರಹಣ ಕಾಲದಲ್ಲಿ ಪರ್ಯಾಯ ಶ್ರೀಗಳು ಮಧ್ವಸರೋವರದಲ್ಲಿ ನಿಂತ ಜಲಜಪವನ್ನು ನೆರವೇರಿಸಿದರು.

ನಂತರ ಪರ್ಯಾಯ ಶ್ರೀಗಳು, ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮತ್ತು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಕೃಷ್ಣಮಠದಲ್ಲಿ ಜೊತೆಯಾಗಿ ಜಪತರ್ಪಣಾದಿಗಳನ್ನು ನೆರವೇರಿಸಿದರು.

ಉಡುಪಿಯಲ್ಲಿ ಗ್ರಹಣವು ಬೆಳಗ್ಗೆ ಸರಿಯಾಗಿ 10.04ಕ್ಕೆ ಪ್ರಾರಂಭವಾಯಿತು ಮತ್ತು 11.27ಕ್ಕೆ ಚಂದ್ರನು ಶೇ.40.38ರಷ್ಟುಸೂರ್ಯನನ್ನು ಆವರಿಸಿದ್ದು ಸ್ಪಷ್ಟವಾಗಿ ಗೋಚರಿಸಿತು.

ಆದರೆ ಗ್ರಹಣ ಮೋಕ್ಷದ ಸಮಯ 1.22ಕ್ಕೆ ಮಾತ್ರ ಮೋಡ ಕವಿದು ಅಂತಿಮ ಕ್ಷಣದ ಗ್ರಹಣ ವೀಕ್ಷಣೆ ಸಾಧ್ಯವಾಗಿಲ್ಲ ಎಂದು ಸಂಯೋಜಕ ಅತುಲ್ ಭಟ್ ಹೇಳಿದ್ದಾರೆ.