ಈ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿದ ಎಣ್ಣೆಯಿಂದ ಸಂಧಿವಾತ ಗುಣವಾಗುತ್ತಂತೆ!

First Published 10, Mar 2020, 1:31 PM IST

ನೀವು ಜಾಯಿಂಟ್‌ ಪೈನ್‌ನಿಂದ ನರಳುತ್ತಿದ್ದೀರಾ? ಹಾಗಾದರೆ ಸಂಧಿವಾತದ ನಿವಾರಣೆಗಾಗಿ ಹಲವು ಡಾಕ್ಟರ್‌, ಮನೆ ಮದ್ದು ಎಲ್ಲವನ್ನೂ ಟ್ರೈ ಮಾಡಿರುತ್ತೀರಿ. ಸಂಧಿವಾತವನ್ನು ಗುಣ ಪಡಿಸುವ ದೇವಸ್ಥಾನಕ್ಕೆ ಹೋದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ಸಂಧಿವಾತದಿಂದ ಮುಕ್ತಗೊಳಿಸುವ ದೇವಸ್ಥಾನ ತಮಿಳುನಾಡಿನ ಮಧುರೈ ಬಳಿ ಇದೆ. ತಿರುಮಾರೈನಾಥಸ್ವಾಮಿಯ ದೇವಸ್ಥಾನವನ್ನು ಮೂಳೆ ಸಂಬಂಧಿತ ಕಾಯಿಲೆಗಳು, ಕೀಲು ನೋವು ಮತ್ತು ಸ್ನಾಯುವಿನ ಸಮಸ್ಯೆಗಳಿಂದ ಭಕ್ತರನ್ನು ಗುಣಪಡಿಸುತ್ತದೆ ಎಂದೇ ನಂಬಲಾಗುತ್ತಿದೆ.

ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪಿದ ತಿರುವತಾವೂರುನಲ್ಲಿರುವ ತಿರುಮರೈನಾಥರ್ ದೇವಸ್ಥಾನದ ಆರಾಧ್ಯ ದೇವ ಶಿವ.

ವೈಗೈ ನದಿಯ ಉತ್ತರ ದಡದಲ್ಲಿ ಸ್ಥಾಪಿತವಾಗಿರುವ ಈ ದೇವಸ್ಥಾನಕ್ಕೆ ಸುಮಾರು 1000 ವರ್ಷಗಳಷ್ಟು  ಪುರಾತನ ಇತಿಹಾಸವಿದೆ.

ಇಲ್ಲಿ ನೆಲೆಸಿರುವ ಶಿವ ತಿರುಮಾರೈನಾಥರ್‌, ವೇದ ನಾಥರ್, ವೇದಪುರೀಶ್ವರರ್ ಎಂಬ ಹೆಸರುಗಳಿಂದ ಪ್ರಸಿದ್ಧ.

ಮಾಂಡವ ಋಷಿಯ ತಪಸ್ಸಿಗೆ ಭಂಗ ತಂದ ಕಾರಣದಿಂದ ಋಷಿ ಶಾಪಕ್ಕೆ ಶನೈಶ್ಚರ ಗುರಿಯಾಗುತ್ತಾನೆ.

ಮುನಿಯ ಶಾಪದ  ಕಾರಣ  ಶನೀಶ್ವರನು  ತೀವ್ರ ಸಂಧಿವಾತದಿಂದ ಬಳಲುತ್ತಾನೆ.

ತಿರುಮಾರೈನಾಥಸ್ವಾಮಿ ಆಶೀರ್ವಾದದಿಂದ ಶನೈಶ್ಚರ ಈ ಸ್ಥಳದಲ್ಲಿ ಶಾಪದಿಂದ ವಿಮೋಚನೆಗೊಂಡನು ಎಂಬುದು ಈ ಸ್ಥಳ ಪುರಾಣ ಹೇಳುತ್ತದೆ.

ಇಲ್ಲಿ ದೇವರಿಗೆ ತೈಲಾಭಿಷೇಕ ಮಾಡಿಸಿ, ಆ ಎಣ್ಣೆಯನ್ನು ಕಾಲಿಗೆ ಹಚ್ಚಿದರೆ  ಸಂಧಿವಾತದಿಂದ ಮುಕ್ತರಾಗುತ್ತಾರೆ ಎಂಬುದು ನಂಬಿಕೆ.

ತಿರುಮಾರೈನಾಥಸ್ವಾಮಿಯ ದೇವಸ್ಥಾನವನ್ನು ಮೂಳೆ, ಸಂಬಂಧಿತ ಕಾಯಿಲೆಗಳು, ಕೀಲು ನೋವು ಮತ್ತು ಸ್ನಾಯುವಿನ ಸಮಸ್ಯೆಗಳಿಂದ ಭಕ್ತರನ್ನು ಗುಣಪಡಿಸುತ್ತದೆ  ಹೇಳಲಾಗುತ್ತದೆ.

ಪಾಂಡ್ಯ ಸಾಮ್ರಾಜ್ಯದ ಸಮಯದಲ್ಲಿ  ಇದು ಪ್ರಸಿದ್ಧವಾದ ದೇವಾಲಯ ಪಟ್ಟಣವಾಗಿತ್ತು .

ತಿರುವತಾವೂರು  ದೇವಾಲಯದ  ಪೂರ್ವದಲ್ಲಿ ದೊಡ್ಡದಾದ ರಾಜಾ ಗೋಪುರವಿದೆ. ಹಾಗೂ ಏಳು ಪವಿತ್ರ ಕೊಳಗಳಿವೆ ಈ ದೇವಸ್ಥಾನದಲ್ಲಿ.

ಹಲವೆಡೆ ಔಷಧಿ ಮಾಡಿಯೂ, ಸಂಧಿವಾತ ಹುಷಾರಾಗಿಲ್ಲವೆಂದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.

loader