Monica Bedi Love Story: ಅಂಡರ್ವರ್ಲ್ಡ್ ಡಾನ್ ಮೇಲೆ ಹುಚ್ಚು ಪ್ರೀತಿ, ಫೋನ್ಗಾಗಿ ಗಂಟೆಗಟ್ಟಲೆ ಕಾಯ್ತಿದ್ದ ನಟಿ
ಅಂಡರ್ವರ್ಲ್ಡ್ ಡಾನ್ ಅಬು ಸಲೇಮ್ (Abu Salem) ಜೊತೆಯ ರಿಲೆಷನ್ಶಿಪ್ ಕಾರಣದಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟಿ ಮೋನಿಕಾ ಬೇಡಿಗೆ (Monica Bedi) 46 ವರ್ಷ. ಜನವರಿ 18, 1975ರಂದು ಪಂಜಾಬ್ನಲ್ಲಿ ಜನಿಸಿದ ಈ ಸಿನಿಮಾಗಳಿಗಿಂತ ತಮ್ಮ ಪರ್ಸನಲ್ ಲೈಫ್ನಿಂದ ಹೆಚ್ಚು ಚರ್ಚೆಯಲ್ಲಿದ್ದರು. ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ಮೋನಿಕಾ, ಉದ್ಯಮದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಅಷ್ಷು ಯಶಸ್ವಿಯಾಗಲಿಲ್ಲ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಅಧ್ಯಯನ ಮುಗಿಸಿದ ಮೋನಿಕಾ 1995ರಲ್ಲಿ ತೆಲುಗು ಚಿತ್ರ ತಾಜ್ ಮಹಲ್ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು. ಮತ್ತೆ ಅದೇ ವರ್ಷಮೋನಿಕಾ ಸುನೀಲ್ ಶೆಟ್ಟಿ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ಸುರಕ್ಷಾ ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಡಾನ್ ಅಬು ಸಲೇಂ ಅವರೊಂದಿಗಿನ ಸಂಬಂಧದಿಂದಾಗಿ ಮೋನಿಕಾ ಬೇಡಿ ಅವರ ಚಲನಚಿತ್ರ ವೃತ್ತಿಜೀವನವು ಸಂಪೂರ್ಣವಾಗಿ ನಾಶವಾಯಿತು. ಮೋನಿಕಾ ಅಬು ಸಲೇಂನನ್ನು ಮೊದಲ ಬಾರಿಗೆ ಭೇಟಿಯಾದದ್ದು ಹೇಗೆ ಗೊತ್ತಾ? ಮುಂದೆ ಓದಿ.
ಮೋನಿಕಾ ಬೇಡಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಭೂಗತ ಜಗತ್ತಿನ ಡಾನ್ ಅಬು ಸಲೇಂನೊಂದಿಗೆ ಸಂಬಂಧ ಹೊಂದಿದ್ದರು. ಮೊನಿಕಾ ದುಬೈನಲ್ಲಿದ್ದಾಗ 1998 ರಲ್ಲಿ ಅಬು ಸಲೇಮ್ ಮತ್ತು ಮೋನಿಕಾ ಮೊದಲ ಬಾರಿ ಭೇಟಿಯಾದರು. ಅಬು ಸಲೇಂ ಮೋನಿಕಾಗೆ ಕರೆ ಮಾಡಿ ಫೋನ್ನಲ್ಲಿ ತನ್ನನ್ನು ಉದ್ಯಮಿ ಎಂದು ಪರಿಚಯಿಸಿಕೊಂಡರು. ಇದರೊಂದಿಗೆ ಸೇಲಂ ಮೋನಿಕಾಗೆ ಸ್ಟೇಜ್ ಶೋನ ಆಫರ್ ಸಹ ನೀಡಿದ್ದರು.
ಇದಾದ ನಂತರ ಇಬ್ಬರೂ ಒಳ್ಳೆ ಸ್ನೇಹಿತರಾಗಿ ಮಾತುಕತೆ ಶುರುವಾಯಿತು. ಮೋನಿಕಾ ಬೇಡಿ ಡಾನ್ ಅಬು ಸಲೇಂ ಅವರ ಧ್ವನಿಯನ್ನು ಪ್ರೀತಿಸುತ್ತಿದ್ದರು. ಅನೇಕ ಬಾರಿ ಮೋನಿಕಾ ಅಬು ಸಲೇಂನ ಫೋನ್ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರು.
ನಮ್ಮಿಬ್ಬರ ನಡುವೆ ಎಲ್ಲೋ ಏನೋ ಸಂಪರ್ಕವಿದೆ ಎಂದು ನಾನು ಭಾವಿಸುತ್ತಿದ್ದೆ. ನಾನು ಅವನೊಂದಿಗೆ ಮಾತನಾಡದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂದು ನಾನು ಅವನನ್ನು ಪ್ರೀತಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ, ಮೋನಿಕಾ ಬೇಡಿ ಹೇಳಿದ್ದರು.
ಮೋನಿಕಾ ಬೇಡಿ ಪ್ರಕಾರ, ಅಬು ಸಲೇಂ ಮೊದಲ ಭೇಟಿಯಲ್ಲಿ ತನ್ನ ನಿಜವಾದ ಹೆಸರನ್ನು ಹೇಳಲಿಲ್ಲ. ಅಬು ಮೊನಿಕಾ ಅವರನ್ನು ಅರ್ಸ್ಲಾನ್ ಅಲಿ ಎಂಬ ಹೆಸರಿನಲ್ಲಿ ಭೇಟಿಯಾದರು. ದುಬೈನಿಂದ ಹಿಂದಿರುಗಿದ ನಂತರ ಮೋನಿಕಾ ಬೇಡಿ ಸೇಲಂ ಅವರನ್ನು ಮುಂಬೈಗೆ ಹಲವಾರು ಬಾರಿ ಕರೆದರು. ಆದರೆ ಸೇಲಂ ಪ್ರತಿ ಬಾರಿಯೂ ವಿಷಯವನ್ನು ಬದಲಾಯಿಸುತ್ತಿದ್ದರು. ನಂತರ ಮತ್ತೆ ಮೋನಿಕಾ ದುಬೈಗೆ ಹೋದಾಗ ಆಕೆಯನ್ನು ಮುಂಬೈಗೆ ಹಿಂತಿರುಗಲು ಸೇಲಂ ಬಿಡಲಿಲ್ಲ.
ಕ್ರಮೇಣ ಮೋನಿಕಾ ಬೇಡಿ ಅಬು ಸಲೇಂ ಅವರೊಂದಿಗಿನ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿತು. ಆದರೆ ಸೇಲಂ ಮೋನಿಕಾರನ್ನು ಯಾವುದೇ ಕಾರಣಕ್ಕೂ ಬಿಡಲು ರೆಡಿ ಇರಲಿಲ್ಲ.
ಇದರ ನಂತರ, 18 ಸೆಪ್ಟೆಂಬರ್ 2002 ರಂದು ಮೋನಿಕಾ ಬೇಡಿ ಅವರನ್ನು ಪೋರ್ಚುಗಲ್ನಲ್ಲಿ ನಕಲಿ ಪಾಸ್ಪೋರ್ಟ್ ಕಾರಣದಿಂದ ಬಂಧಿಸಲಾಯಿತು. ಇದರ ನಂತರ ಅವರಿಗೆ 4 ವರ್ಷಗಳ ಶಿಕ್ಷೆ ವಿಧಿಸಲಾಯಿತು.
ಅಬು ಸಲೇಂ ಮತ್ತು ಮೋನಿಕಾ ಬೇಡಿ ಇಬ್ಬರೂ ಚಲಿಸುವ ರೈಲಿನಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇತ್ತು. ಈ ಬಗ್ಗೆ ಮೋನಿಕಾ ನಾನು ಅಬು ಸಲೇಂನನ್ನು ಪ್ರೀತಿಸುತ್ತಿದ್ದೆ. ಆದರೆ ನಾನು ಅವನನ್ನು ಮದುವೆಯಾಗಲಿಲ್ಲ ಎಂದು ಹೇಳಿದ್ದರು. ರೈಲಿನಲ್ಲಿ ಮದುವೆ ಆಗಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸೇಲಂ ಸಹ ಹೇಳಿದ್ದರು.
ಮೋನಿಕಾ ಬೇಡಿ ಸೇಲಂನೊಂದಿಗೆ ಸಂಬಂಧದಲ್ಲಿದ್ದಾಗ ಅವರು ಚಲನಚಿತ್ರಗಳಿಂದ ದೂರವಿದ್ದರು. ಆದರ ನಂತರ ಹಳೆ ವಿಷಯಗಳನ್ನು ಮರೆತು, ಮೋನಿಕಾ ಮತ್ತೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. 2008 ರಲ್ಲಿ ಅವರು ಬಿಗ್ ಬಾಸ್ ಸೀಸನ್ 2 ರಲ್ಲಿ ಕಾಣಿಸಿಕೊಂಡರು.
ಇದರ ನಂತರ ಅವರು ಝಲಕ್ ದಿಖ್ಲಾ ಜಾ ಸೀಸನ್ 3 ನಲ್ಲಿಯೂ ಕೆಲಸ ಮಾಡಿದರು. ಮೋನಿಕಾ ಟಿವಿ ಧಾರಾವಾಹಿಗಳಾದ ದಿಲ್ ಜೀತೇಗಿ ದೇಸಿ ಗರ್ಲ್, ಸರಸ್ವತಿಚಂದ್ರ ಮತ್ತು ಬಂಧನದಲ್ಲೂ ಕಾಣಿಸಿಕೊಂಡರು.
ಮೋನಿಕಾ ಬಾಲಿವುಡ್ ಸಿನಿಮಾಗಳಾದ ಏಕ್ ಫೂಲ್ ತೀನ್ ಕಾಂತೆ, ತಿರ್ಖಿ ಟೋಪಿವಾಲೆ, ಜಂಜೀರ್, ಜಾನಮ್ ಸಂಜಾ ಕರೋ, ಪ್ಯಾರ್ ಇಷ್ಕ್ ಮತ್ತು ಮೊಹಬ್ಬತ್, ಜೋಡಿ ನಂ ಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಅನೇಕ ತೆಲುಗು, ತಮಿಳು ಮತ್ತು ಪಂಜಾಬಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.