ಮತ್ತೆ ಕುಸಿದ ಗೋಲ್ಡ್ ರೇಟ್, ಚಿನ್ನ ಕೊಳ್ಳೋರಿಗೆ ಬಂಪರ್!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 26ಗೋಲ್ಡ್ ರೇಟ್
ಒಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಗ್ರಾಕರನ್ನು ಕಂಗಾಲುಗೊಳಿಸಿದ್ದರೆ, ಇತ್ತ ಚಿನ್ನದ ದರ ಇಳಿಕೆ ಕೊಂಚ ಸಮಾಧಾನಗೊಳ್ಳುವಂತೆ ಮಾಡಿದೆ.
ಹೌದು ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಜನ ಸಾಮಾನ್ಯರ ನಿದ್ದೆಗೆಡಿಸಿತ್ತು.
ಆದರೀಗ ಚಿನ್ನದ ದರ ಇಳಿಕೆಯಾಗುತ್ತಿರುವುದು ಕೊಂಚ ನೆಮ್ಮದಿ ನೀಡಿದೆ.
ಬಜೆಟ್ ಟಾನಿಕ್ ಬಳಿಕ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ.
ಕೊಂಚ ಏರಿಕೇಯಾಡುತ್ತಿದ್ದ ಚಿನ್ನದ ದರ ಸದ್ಯ ನಾಲ್ಕು ದಿನಗಳಿಂದ ಇಳಿಕೆಯ ಹಾದಿ ಹಿಡಿದಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 550 ರೂ. ಇಳಿಕೆಯಾಗಿ ದರ 42,700 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 600ರೂ. ಇಳಿಕೆಯಾಗಿ 46,580ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 69,600ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ