Asianet Suvarna News Asianet Suvarna News

Zodiac Compatibility: ನಿಮ್ಮ ರಾಶಿಗೆ ಯಾವ ಬಗೆಯ ರೊಮ್ಯಾನ್ಸ್ ಇಷ್ಟವಾಗುತ್ತೆ?

ಒಂದೊಂದು ರಾಶಿಯವರು ಒಂದೊಂದು ಬಗೆಯ ಸೆಕ್ಸ್ ಇಷ್ಟಪಡುತ್ತಾರೆ. ನಿಮ್ಮ ರಾಶಿ, ನಿಮ್ಮ ಪಾರ್ಟನರ್ ರಾಶಿಗೆ ಯಾವ ಬಗೆಯ ಇಷ್ಟವಾಗುತ್ತೆ?

Zodiac sign Compatibility
Author
First Published Jun 30, 2023, 11:18 AM IST

ಪ್ರತಿಯೊಂದು ಜನ್ಮರಾಶಿಗೂ ಅದರದೇ ಆದ ರೊಮ್ಯಾಂಟಿಕ್‌ ಗುಣಗಳಿರುತ್ತವೆ. ಒಂದೊಂದು ರಾಶಿಗೆ ಒಂದೊಂದು ಬಗೆಯ ಸೆಕ್ಸ್‌ ಪ್ರಾಕ್ಟೀಸ್ ಇಷ್ಟವಾಗುತ್ತೆ ಅನ್ನೋದು ಸಖತ್ ಇಂಟರೆಸ್ಟಿಂಗ್. ಇದರಿಂದ ನಿಮ್ಮ ಪಾರ್ಟನರ್‌ನ ಸೆಕ್ಸ್ ಇಂಟರೆಸ್ಟ್ ಅರ್ಥ ಮಾಡಿಕೊಳ್ಳೋದು ಇಷ್ಟವಾಗುತ್ತೆ.

ಮೇಷ (Aries) ರಾಶಿ
ಥಟ್ಟನೆ ನಿಮಗೆ ಯಾರಾದರೂ ಡೇಟಿಂಗ್ ಆಫರ್ ಕೊಟ್ಟರೆ ಅವರು ಮೇಷ ರಾಶಿಯವರೆಂದೇ ತಿಳಿಯಿರಿ. ಇವರು ಎಲ್ಲವನ್ನೂ ನೇರಾನೇರ ಮಾಡಲು ಬಯಸುವವರು. ನೀನಂದ್ರೆ ನನಗಿಷ್ಟ ಅನ್ನುವುದನ್ನೂ, ನಿನ್ನೊಡನೆ ರೊಮ್ಯಾನ್ಸ್ ಮಾಡಲು ಬಯಸುತ್ತೇನೆ ಅನ್ನುವುದನ್ನೂ ಮುಚ್ಚುಮರೆ ಇಲ್ಲದೆ ಹೇಳುವವರು. ಇದರಿಂದ ಮುಖಭಂಗ ಆದರೂ ಇವರು ಅದನ್ನೆಲ್ಲ ಲೆಕ್ಕಿಸುವವರೇ ಅಲ್ಲ.

ವೃಷಭ (Taurus) ರಾಶಿ
ಫೋನ್‌ನಲ್ಲಿ ಸೆಕ್ಸ್ ಚಾಟ್ ಮಾಡುವುದು, ವಿಡಿಯೋ ಮೂಲಕ ಡೇಟಿಂಗ್, ಪರಿಚಿತರ ಜೊತೆಗೆ ಸೆಕ್ಸ್‌ಟಿಂಗ್ ಇವೆಲ್ಲ ಇವರಿಗೆ ಇಷ್ಟ. ಇವರು ವರ್ಚುವಲ್ ರೊಮ್ಯಾನ್ಸ್‌ನಲ್ಲಿ ಹೆಚ್ಚು ಸುಖ ಕಾಣುವವರು. ಯಾವುದೇ ರೊಮ್ಯಾಂಟಿಕ್ ಧಾರಾವಾಹಿ ಅಥವಾ ಸಿನಿಮಾಗಳಿಂದ ಹೆಚ್ಚಿನ ಪ್ರಚೋದನೆ, ಪ್ರೇರಣೆ ಪಡೆಯುತ್ತಾರೆ.

ಮಿಥುನ (Gemini) ರಾಶಿ
ಇವರು ಏಕಕಾಲಕ್ಕೆ ಹಲವು ಮಂದಿಯ ಜೊತೆಗೆ ರೊಮ್ಯಾನ್ಸ್ ನಡೆಸಬಲ್ಲರು. ಫೋನ್‌ನಲ್ಲಿ ನಿಮ್ಮೊಂದಿಗೆ ಸೆಕ್ಸ್ ಚಾಟ್ ನಡೆಸುತ್ತಿದ್ದರೆ, ಇನ್ನೊಬ್ಬರೊಂದಿಗೂ ಚಾಟ್ ನಿರತರಾಗಿದ್ದರೂ ಆಶ್ಚರ್ಯವಿಲ್ಲ. ಇವರು ಲೈಂಗಿಕ ವಂಚನೆಯಲ್ಲಿಯೂ ರೊಮ್ಯಾಂಟಿಕ್ ಸುಖ ಕಾಣುತ್ತಾರೆ. ಅದರಿಂದಲೇ ಹೆಚ್ಚಿನ ಥ್ರಿಲ್ ಅನುಭವಿಸುತ್ತಾರೆ.

ಕಟಕ (Cancer) ರಾಶಿ
ಇವರು ಕಟಕರಲ್ಲ, ಕಟುಕರೇ ಸರಿ. ಅಂದರೆ ಇವರಿಗೆ ನೋಯಿಸುವುದೇ ಹೆಚ್ಚು ರೊಮ್ಯಾಂಟಿಕ್. ಸಂಗಾತಿಯನ್ನು ಹಾಸಿಗೆಯ ಮೇಲೆ ದೈಹಿಕವಾಗಿಯೂ ನೋಯಿಸಬಹುದು; ಹಾಗೇ ಮಾನಸಿಕವಾಗಿಯೂ ನೋಯಿಸಬಹುದು. ಇವರಿಗೆ ಒಪ್ಪುವ ಸಂಗಾತಿಯಾಗಿದ್ದರೆ ಇಬ್ಬರಿಗೂ ಸುಖ. ಇಲ್ಲವಾದರೆ ತುಸು ಕಷ್ಟವೇ ಸರಿ.

ಇವರು ತಮ್ಮ ಗುಟ್ಟನ್ನು ಎಂದಿಗೂ ರಟ್ಟು ಮಾಡಲ್ಲ: ನೀವು ಕೂಡ ಅವರಲ್ಲಿ ಒಬ್ಬರಾ?

ಸಿಂಹ (Leo) ರಾಶಿ
ಇವರೊಂದಿಗೆ ರೊಮ್ಯಾನ್ಸ್ ಮಾಡುವುದು ಕಷ್ಟವೇ ಸರಿ. ಆದರೂ ಅದು ತುಂಬಾ ಇಷ್ಟದಾಯಕವಾದ ಕಷ್ಟ ಆಗಬಹುದು. ಈ ಜನ್ಮರಾಶಿಯ ಹೆಣ್ಣುಮಕ್ಕಳು ತಮಗೆ ತೃಪ್ತಿಯಾಗುವವರೆಗೂ ಗಂಡಸನ್ನು ಬಿಡುವುದಿಲ್ಲ. ಇವರು ಸಿಂಹದಂತೆ ರೊಮ್ಯಾನ್ಸ್‌ನಲ್ಲೂ ಗಾಂಭೀರ್ಯ ಪ್ರಿಯರು. ಯಾವುದೇ ಅಲ್ಪತೃಪ್ತಿಯನ್ನು ಒಪ್ಪುವವರಲ್ಲ.

ಕನ್ಯಾ (Leo) ರಾಶಿ
ಇವರು ಡೇಟಿಂಗ್ ಮಾಡಿದ್ದೂ ಗೊತ್ತಾಗುವುದಿಲ್ಲ. ರೊಮ್ಯಾನ್ಸ್ ನಡೆಸಿದ್ದೂ ಗೊತ್ತಾಗುವುದಿಲ್ಲ. ಆದರೆ ಎಲ್ಲವೂ ಒಳಗಿಂದೊಳಗೇ ನಡೆದಿರುತ್ತದೆ. ಇವರು ಒಂಥರಾ ತಂಗಾಳಿಯ ಹಾಗೆ. ಎಲ್ಲವೂ ಮುಗಿದ ಮೇಲೇ ಓಹೋ ಹೀಗೆಲ್ಲ ಆಯಿತೇ ಎಂದು ನಿಮಗೆ ಅರಿವುಗೆ ಬರುತ್ತದೆ. ಅಷ್ಟರಲ್ಲಿ ನೀವು ಕಳೆದುಹೋಗಿರುತ್ತೀರಿ.

ತುಲಾ (Virgo) ರಾಶಿ
ಇವರು ಅವಸರದವರು, ಇವರಿಗೆ ಚೂರೂ ತಾಳ್ಮೆ ಎಂಬುದೇ ಇಲ್ಲ. ಈ ಜನ್ಮರಾಶಿಯ ಗಂಡಸರು ಹೆಣ್ಣನ್ನು ಒಲಿಸಿಕೊಂಡು, ಸಿದ್ಧಪಡಿಸಿ ನಂತರ ಕೂಡಬೇಕು ಎಂಬ ಅರಿವನ್ನು ಹೊಂದಿರುವುದಿಲ್ಲ. ಆದ್ದರಿಂದ ಇವರ ಅವಸರ ಸ್ತ್ರೀಯರಿಗೆ ಕಷ್ಟವಾಗುತ್ತದೆ. ಈ ಜನ್ಮರಾಶಿಯ ಹೆಣ್ಣುಮಕ್ಕಳ ಅವಸರ ಗಂಡಸರಿಗೆ ಇಷ್ಟವಾಗಬಹುದು.

ವೃಶ್ಚಿಕ (Virgo) ರಾಶಿ
ಇವರೊಂಥರಾ ಪ್ಲೆಟೋನಿಕ್ ಲವ್ ಅನ್ನುತ್ತಾರಲ್ಲ. ಆ ಜಾತಿಗೆ ಸೇರಿದವರು. ಇವರು ಪ್ರೀತಿ ಪರಿಪೂರ್ಣವಾಗಿ ಬೇರೂರದೆ ರೊಮ್ಯಾನ್ಸ್‌ನಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ಅಂದರೆ ಇವರಿಗೆ ಕಾಮಕ್ಕಿಂತಲೂ ಪ್ರೇಮವೇ ಮುಖ್ಯ. ಆದರೆ ಪ್ರೇಮಪೂರ್ಣ ಸಂಬಂಧಗಳಲ್ಲಿ ಮುಂದುವರಿದಾಗ ಸ್ವರ್ಗವನ್ನೇ ಧರೆಗಿಳಿಸುತ್ತಾರೆ.

ಧನು (Virgo) ರಾಶಿ
ಇವರು ಹೆದೆಯೇರಿದ ಬಿಲ್ಲಿನ ಹಾಗೆ ಸದಾ ರೊಮ್ಯಾನ್ಸ್ ನಡೆಸುವುದಕ್ಕೆ ಕಾಯುತ್ತಿರುತ್ತಾರೆ. ಡೈಲಿ ರೊಟೀನ್, ಸ್ಟ್ರೆಸ್ ಎಲ್ಲಾ ಇವರಿಗೆಲ್ಲ ಒಂದು ಸಮಸ್ಯೆ ಆಗುವುದೇ ಇಲ್ಲ. ಎದುರಿಗೆ ತಮಗೆ ಒಪ್ಪುವ ಒಂದು ಜೀವಿ ಇದ್ದರಾಯಿತು. ಯಾರೂ ಸಿಗದಿದ್ದರೆ ತಮ್ಮ ಹಳೇ ಸಂಗಾತಿಯನ್ನಾದರೂ ಕಾಲು ಕೆರೆದು ರೊಮ್ಯಾನ್ಸ್‌ಗೆ ಕರೆಯುತ್ತಾರೆ.

ಮಕರ (Capricorn) ರಾಶಿ
ಇವರ ರೊಮ್ಯಾನ್ಸ್‌ ಪೂರ್ತಿ ದೈಹಿಕವಾದುದು.(Physical) ರೊಮ್ಯಾನ್ಸ್‌ನಲ್ಲಿ ಮನಸ್ಸಿನ ಪಾತ್ರವಿದೆ ಎಂಬುದನ್ನು ಇವರು ಒಪ್ಪುವುದಿಲ್ಲ. ಅಂದರೆ ಏಕಕಾಲಕ್ಕೆ ಹಲವು ಸಂಗಾತಿಗಳ ಜೊತೆಗೆ ರೊಮ್ಯಾನ್ಸ್- ಸೆಕ್ಸ್‌ನಲ್ಲಿ ತೊಡಗಲು ಇವರು ಸಿದ್ಧರಿರುತ್ತಾರೆ. ಒಂದು ಹಂತದ ಬಳಿಕ ಊಟ ನಿದ್ರೆಯಂತೆ(sleep) ಇದೂ ಅವರಿಗೆ ಸಾಮಾನ್ಯವೆನಿಸಿಬಿಡುತ್ತದೆ.

ಕುಂಭ (Aquarius) ರಾಶಿ
ಇವರು ರೊಮ್ಯಾನ್ಸ್ ವಿಚಾರದಲ್ಲಿ ಬಹಳ ಸಲ ಮೋಸ ಹೋಗುತ್ತಾರೆ. ಯಾಕೆಂದರೆ ಇವರಿಗೆ ತಪ್ಪು ಕಲ್ಪನೆಗಳು(Myths) ಹೆಚ್ಚು. ಕೆಲವೊಮ್ಮೆ ಪರಿಚಿತ ಹೆಣ್ಣು - ಗಂಡಿನ ಸನ್ನೆ ಸಂದೇಶಗಳನ್ನು ತಪ್ಪು ಕಲ್ಪನೆ ಮಾಡಿಕೊಂಡು ರೊಮ್ಯಾನ್ಸ್‌ಗೆ ಇಳಿದು ಪೆಟ್ಟು ತಿನ್ನಬಲ್ಲರು. ಹೀಗೆ ಹಲವು ಸಲ ಆದಾಗ ಅದರ ಕಹಿ ಇವರಲ್ಲಿ ಉಳಿದುಕೊಳ್ಳುತ್ತದೆ.

ಮೀನ (pisces) ರಾಶಿ
ಇವರದು ಒಂಥರಾ ವಿರೋಧಾರ್ಥಕ ಪ್ರೀತಿ. ತನಗೆ ಯಾರೊಂದಿಗೆ ರೊಮ್ಯಾನ್ಸ್(Romance) ಇಷ್ಟವಿಲ್ಲ ಎನ್ನುತ್ತಾರೋ ಅವರೊಂದಿಗೇ ಸೆಕ್ಸ್ ನಡೆಸಲು ಇಷ್ಟಪಡುತ್ತಾರೆ. ಇವರು ಸಂಗಾತಿಗಳ ಜೊತೆಗೆ ಜೋರಾಗಿ ಜಗಳ ನಡೆಸಲು ಮುಂದಾದರೆ ರೊಮ್ಯಾನ್ಸ್ ನಡೆಸಲು ಇಷ್ಟಪಟ್ಟಿದ್ದಾರೆ ಎಂದುಕೊಳ್ಳಬಹುದು.

Daily Horoscope: ನಂಬಿಕೆಗೆ ಚೂರಿ ಹಾಕುವ ಸ್ನೇಹಿತ, ಈ ರಾಶಿಗೆ ಆಘಾತ

Follow Us:
Download App:
  • android
  • ios