Disease And Planets: ಯಾವ ಗ್ರಹದಿಂದ ಯಾವ ರೋಗ, ನಿಮಗಿದೆಯಾ ಬಿಪಿ, ಆ್ಯಸಿಡಿಟಿ?
ಜಾತಕವನ್ನು ಕಾಲ ಕಾಲಕ್ಕೆ ಪರೀಕ್ಷಿಸಿಕೊಳ್ಳುತ್ತಿದ್ದರೆ ಗ್ರಹಗತಿಗಳು, ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು. ಯಾವ ಗ್ರಹದಿಂದ ಯಾವ ರೋಗ ಬರುತ್ತದೆ ಎಂದು ಮೊದಲೇ ಅರಿತರೆ ಅದಕ್ಕೆ ಪರಿಹಾರವನ್ನೂ ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಯಾವ ಗ್ರಹದಿಂದ ಯಾವ ಯಾವ ರೋಗಗಳು ಬರಬಹುದು ಎಂಬುದನ್ನು ನೋಡೋಣವೇ?
ಆರೋಗ್ಯ (Health) ಮೊದಲು, ಉಳಿದವುಗಳು ನಂತರ. ಆದರೆ, ಆರೋಗ್ಯದ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ ಅನಾರೋಗ್ಯವು (disease) ಬೆನ್ನು ಹತ್ತಿಕೊಂಡೇ ಬರುತ್ತಿರುತ್ತದೆ. ಸದಾ ಒಂದಿಲ್ಲೊಂದು ರೋಗ.. ವೈದ್ಯರ (Doctor) ಬಳಿ ತೋರಿಸಿದರೂ ಪರಿಣಾಮ ಇಲ್ಲ. ಒಮ್ಮೆ ಕಡಿಮೆಯಾಯಿತೆಂದು ಭಾವಿಸಿದರೂ ಮತ್ತೆ ಅದೇ ರಾಗ, ಅದೇ ರೋಗ ಎನ್ನುವಂತಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಕಡಿಮೆಯಾಗಿದ್ದಕ್ಕೂ ಇದು ಕಾರಣ ಇರಬಹುದು. ಆದರೆ, ಗ್ರಹಗತಿಗಳು ಪ್ರಮುಖ ಕಾರಣವನ್ನು ವಹಿಸುತ್ತವೆ ಎನ್ನುವುದನ್ನು ಮಾತ್ರ ಮರೆಯಬಾರದು. ಒಂದೊಂದು ರೋಗಕ್ಕೆ ಒಂದೊಂದು ಗ್ರಹಗಳು (Planet) ಕಾರಣ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಸೂರ್ಯ ಕಣ್ಣಿಗೆ, ಚಂದ್ರ ಮನಸ್ಸಿಗೆ, ಮಂಗಳ ರಕ್ತ ಸಂಚಾರಕ್ಕೆ, ಬುಧ ಹೃದಯಕ್ಕೆ, ಗುರು ಬುದ್ಧಿಗೆ, ಶುಕ್ರವು ಪಿತ್ತ ವ್ಯಾಧಿಗೆ ಹಾಗೂ ಶನಿ, ರಾಹು, ಕೇತು ಗ್ರಹಗಳು ಹೊಟ್ಟೆಗೆ (Stomach) ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಉಲ್ಲೇಖಿಸಲಾಗಿದೆ. ನಮ್ಮ ಶರೀರ ಮತ್ತು ಆರೋಗ್ಯದ ಮೇಲೆ ಯಾವ ಗ್ರಹಗಳ ಪ್ರಭಾವದಿಂದ ಯಾವ ರೋಗಗಳು ಬರುತ್ತವೆ ಎಂಬುದನ್ನು ತಿಳಿಯೋಣ.
ಸೂರ್ಯ ಗ್ರಹದಿಂದ ಆ್ಯಸಿಡಿಟಿ (Acidity from the sun planet)
ಸೂರ್ಯ ಗ್ರಹ (Sun Planet) ಪರಿಣಾಮ ಬೀರಿದರೆ ಪಿತ್ತರಸ ಆ್ಯಸಿಡಿಟಿ, ಉದರ ಸಂಬಂಧಿತ ಕಾಯಿಲೆಗಳು, ರೋಗ ನಿರೋಧಕ ಶಕ್ತಿಗಳ ಕೊರತೆ, ಕಣ್ಣಿನ ಕಾಯಿಲೆಗಳು (Eye diseases), ಹೃದ್ರೋಗ (Heart disease), ಮೂಳೆಗಳಿಗೆ (Bone) ಸಂಬಂಧಿಸಿದ ರೋಗಗಳು ಬರುತ್ತವೆ.
ಚಂದ್ರ ಗ್ರಹದಿಂದ ಚರ್ಮ ಕಾಯಿಲೆ (Skin disease from the moon planet)
ಚಂದ್ರ ಗ್ರಹದ ಕೆಟ್ಟ ದೃಷ್ಟಿ ನಿಮ್ಮ ಜಾತಕದಲ್ಲಿದ್ದರೆ (Horoscope) ಗೊಂದಲ ಸ್ವಭಾವ, ಮಾನಸಿಕ ಅಸ್ವಸ್ಥತೆ (Mental illness), ಎದೆಗೆ ಸಂಬಂಧಿತ ಕಾಯಿಲೆಗಳು, ಪುರುಷರ ಎಡಗಣ್ಣು, ಹಾಗೂ ಮಹಿಳೆಯರ ಬಲಗಣ್ಣು ಸಮಸ್ಯೆ, ಶ್ವಾಸಕೋಶ, ರಕ್ತ ಹೀನತೆ, ಬಾಯಿಗೆ ಸಂಬಂಧಪಟ್ಟ ಕಾಯಿಲೆಗಳು, ರಕ್ತಸ್ರಾವ, ಗರ್ಭಾಶಯ, (Bleeding, uterus) ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ, ಚರ್ಮ ಸಂಬಂಧಿತ ಕಾಯಿಲೆಗಳು ಮತ್ತು ನೋವುಗಳು ಉಂಟಾಗುತ್ತದೆ. ಅಲ್ಲದೇ ಈತನ ಕೆಟ್ಟ ಪ್ರಭಾವವಿದ್ದರೆ ತುಂಬಾ ದುರ್ಬಲರಾಗಿದ್ದು ಯಾವಾಗಲೂ ಬಳಲುತ್ತಲೇ ಇರುತ್ತಾರೆ.
ಮಂಗಳ ಗ್ರಹದಿಂದ ಬಿಪಿ (BP from Mars)
ಮಂಗಳ ಗ್ರಹದ ದೋಷವಿದ್ದರೆ ಪಿತ್ತ ಜ್ವರ, ಬಾಯಾರಿಕೆ, ಪ್ರಾಣಿಗಳಿಂದ ಕಡಿತ, ಅಪಘಾತ (Accident), ರಕ್ತದೊತ್ತಡ (BP), ಗರ್ಭಪಾತ, ರಕ್ತಸ್ರಾವ, ಮಾನಸಿಕ ವಿಕೋಪ, ಮಲಬದ್ಧತೆ, ತುರಿಕೆ, ಗಡ್ಡೆ ಬೆಳೆಯುವಿಕೆ, ಪಾರ್ಶ್ವವಾಯು (Paralysis), ನೋವುಗಳು (Pain) ಉಂಟಾಗುತ್ತವೆ.
ಇದನ್ನು ಓದಿ : Astro Mantra: ಶುಕ್ರವಾರ ಲಲಿತಾ ಸಹಸ್ರನಾಮವ ಜಪಿಸಿದರೆ ಫಲ ಹೆಚ್ಚು!
ಬುಧ ಗ್ರಹದಿಂದ ಕಿವುಡು (Deaf from Mercury)
ಗೊಂದಲ, ಅತಿಯಾಗಿ ಬೆವರುವುದು, ನರದೌರ್ಬಲ್ಯ (Nervous breakdown), ಕಿವುಡುತನ, ದುರ್ಬಲತೆ, ನಾಲಿಗೆ-ಬಾಯಿ-ಗಂಟಲು ಮತ್ತು ಮೂಗಿಗೆ ಸಂಬಂಧಿಸಿದ ಕಾಯಿಲೆಗಳು, ಚರ್ಮರೋಗ (Dermatology), ಮೆದುಳು (Brain) ಮತ್ತು ನರ ಅಸ್ವಸ್ಥತೆ, ಅಸ್ತಮಾ (Asthma), ಉಸಿರಾಟದಲ್ಲಿ ತೊಂದರೆಯಂತವು ಬರುವ ಸಾಧ್ಯತೆ ಇರುತ್ತದೆ.
ಗುರು ಗ್ರಹದಿಂದ ಜ್ವರ (Fever from Jupiter)
ಈ ಗ್ರಹದ ಲೋಪದಿಂದ ಅತಿಸಾರ, ನೆನಪಿನ ಶಕ್ತಿ ಕುಂದುವಿಕೆ, ಹಲ್ಲು ನೋವು, ಜ್ವರ, ಕಾಮಾಲೆ, ಯಕೃತ್ತಿನ ಕಾಯಿಲೆ, ಪಿತ್ತಕೋಶದ ತೊಂದರೆ, ರಕ್ತಹೀನತೆ (Anaemia), ನಿದ್ರಾಹೀನತೆಗಳಂತಹ ತೊಂದರೆಗಳಾಗುತ್ತವೆ.
ಶುಕ್ರ ಗ್ರಹದಿಂದ ಮಧುಮೇಹ (Diabetes from Venus)
ಈ ಗ್ರಹದ ದೋಷವಿದ್ದರೆ ಮಧುಮೇಹ (Diabetes), ಪಿತ್ತಕೋಶ ಅಥವಾ ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದಲ್ಲಿ ತೊಂದರೆ, ಕಣ್ಣಿನ ಪೊರೆ ಇತ್ಯಾದಿ ಸಮಸ್ಯೆಗಳನ್ನು (Problems) ಎದುರಿಸಬೇಕಾಗುತ್ತದೆ.
ಶನಿ ಗ್ರಹದಿಂದ ಟಿಬಿ (TB from Saturn)
ಈ ಗ್ರಹದ ಕೆಟ್ಟಕಣ್ಣು ನಿಮ್ಮ ಮೇಲೆ ಬಿದ್ದರೆ ಕಾಲು ನೋವು, ಕುಷ್ಠರೋಗ (Leprosy), ಪಾರ್ಶ್ವವಾಯು (Paralysis), ಸಂದಿವಾತ, ಅಸ್ತಮಾ, ಕ್ಷಯ, ಹುಚ್ಚುತನ, ಶೀತಪ್ರಕೃತಿ, ಆ್ಯಸಿಡಿಟಿ, ಕಿರಿಕಿರಿ, ದೀರ್ಘಕಾಲೀನ ರೋಗಗಳಿಂದ ಬಳಲುವ ಸಾಧ್ಯತೆ ಇರುತ್ತದೆ.
ಇದನ್ನು ಓದಿ : Rahu Kaal: ಈ ಕೆಲಸಗಳನ್ನು ರಾಹು ಕಾಲದಲ್ಲಿಯೇ ಮಾಡಿ!
ರಾಹು-ಕೇತುವಿನಿಂದ ಕಾಲು ನೋವು (Leg pain from Rahu-Ketu)
ಈ ಗ್ರಹದ ದುಷ್ಪರಿಣಾಮವೆಂದರೆ ಬಿಪಿ, ಅಶಾಂತಿ ಭಾವ, ಕೃತಕ ವಿಷದ ಭಯ, ಕಾಲು ನೋವು, ಅಶುಭ ಬುದ್ಧಿ, ಕುಷ್ಠರೋಗ, ಹಾವು ಕಡಿಯುವ ಭಯ (Fear of snake bites) ಇತ್ಯಾದಿ ಸಮಸ್ಯೆ ಉಂಟಾಗಬಹುದು.