Asianet Suvarna News Asianet Suvarna News

ಮೇರಾ ರಂಗ್ ದೇ ಬಸಂತಿ ಚೋಲಾ.. ಗೀತೆ ಹಾಡಿದ್ದ ಖ್ಯಾತ ಗಾಯಕ ಭೂಪಿಂದರ್‌ ಸಿಂಗ್‌ ನಿಧನ!

ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಅವರು 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಖಚಿತಪಡಿಸಿದ್ದಾರೆ. ಭೂಪಿಂದರ್ ಸಿಂಗ್ ಅವರು ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಮತ್ತು ಗಜಲ್ ಗಾಯಕರಾಗಿದ್ದರು. 23 ಮಾರ್ಚ್ 1931: ಶಹೀದ್‌ ಚಿತ್ರದಲ್ಲಿ ಇವರು ಹಾಡಿದ್ದ "ಮೇರಾ ರಂಗ್ ದೇ ಬಸಂತಿ ಚೋಲಾ...' ಗೀತೆ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ.

Singer Bhupinder Singh of Mera Rang De Basanti dies at the age of 82 Bollywood is in mourning san
Author
Bengaluru, First Published Jul 18, 2022, 11:37 PM IST | Last Updated Jul 19, 2022, 12:11 AM IST

ಮುಂಬೈ (ಜುಲೈ 18): ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ಅವರು 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಹೇಳಿದ್ದಾರೆ. ಜುಲೈ 18 ರ ಸೋಮವಾರ ಸಂಜೆ ಮುಂಬೈನಲ್ಲಿ ಭೂಪಿಂದರ್ ಸಿಂಗ್ ಕೊನೆಯುಸಿರೆಳೆದರು ಎಂದು ಮಿಥಾಲಿ ಹೇಳಿದ್ದಾರೆ. ಭೂಪಿಂದರ್ ಅವರ ನಿಧನಕ್ಕೆ ಬಾಲಿವುಡ್‌ ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭೂಪಿಂದರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಿಥಾಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಮೂತ್ರಕೋಶದಲ್ಲಿನ ಸಮಸ್ಯೆಯೂ ಇದರಲ್ಲಿ ಸೇರಿತ್ತು. ಇದೀಗ ಭೂಪಿಂದರ್ ಸಿಂಗ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಭೂಪಿಂದರ್ ಸಾವಿನ ಸುದ್ದಿಗೆ ಅಭಿಮಾನಿಗಳೂ ಸಂತಾಪ ವ್ಯಕ್ತಪಡಿಸಿದ್ದಾರೆ. ಭೂಪಿಂದರ್ ಸಿಂಗ್ ಅವರು ಮೌಸಂ, ಸತ್ತೆ ಪೆ ಸತ್ತಾ, ಅಹಿಸ್ತಾ ಅಹಿಸ್ತಾ, ದೂರಿಯಾನ್ ಮತ್ತು ಹಕೀಕತ್ ಸೇರಿದಂತೆ ಅನೇಕ ಚಲನಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದರು. ಅವರ ಪ್ರಸಿದ್ಧ ಹಾಡುಗಳು 'ಮೇರಾ ರಂಗ್ ದೇ ಬಸಂತಿ ಚೋಲಾ', 'ಪ್ಯಾರ್ ಹಮೆ ಕಿಸ್‌ ಮೋಡ್‌ ಪೇ ಲೇ ಆಯೆ', 'ಹುಜೂರ್ ಈಸ್‌ಕದರ್', 'ಏಕ್ ಅಕೇಲಾ ಇಸ್ ಶೆಹರ್ ಮೇ', 'ಜಿಂದಗಿ ಮಿಲ್ಕೆ ಬಿತಾಯೇಂಗೆ', 'ಬೀಟಿ ನಾ ಬಿತಾಯೆ ರೈನಾ', 'ನಾಮ್‌ ಗುಮ್‌ ಜಾಯೇಗಾ' ಸೇರಿದಂತೆ ಸಾಕಷ್ಟು ಹಾಡುಗಳನ್ನು ಹಾಡಿದ್ದರು.

ಪ್ರಧಾನಿ ಮೋದಿ ಸಂತಾಪ: ದಶಕಗಳಿಂದ ಸ್ಮರಣೀಯ ಗೀತೆಗಳನ್ನು ನೀಡಿದ ಭೂಪಿಂದರ್ ಸಿಂಗ್ ಜಿ ಅವರ ನಿಧನದಿಂದ ದುಃಖವಾಗಿದೆ. ಅವರ ಗೀತೆಗಳು ಹಲವಾರು ಜನರ ಮನಸೂರೆಗೊಂಡವು. ಈ ದುಃಖದ ಸಮಯದಲ್ಲಿ, ನನ್ನ ಸಂತಾಪಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ (PM Narendra Modi) ಟ್ವೀಟ್‌ ಮಾಡಿದ್ದಾರೆ.

ಪಂಜಾಬ್‌ನಲ್ಲಿ ಜನನ: ಭೂಪೇಂದರ್‌ ಸಿಂಗ್ (Bhupinder Singh) ಅವರು ಪಂಜಾಬ್‌ನ ಅಮೃತಸರದಲ್ಲಿ 6 ಫೆಬ್ರವರಿ 1940 ರಂದು ಜನಿಸಿದರು. ಅವರ ತಂದೆ ಪ್ರೊಫೆಸರ್ ನಾಥ ಸಿಂಗ್ ಕೂಡ ಶ್ರೇಷ್ಠ ಸಂಗೀತಗಾರರಾಗಿದ್ದರು. ಅವರು 1978 ರಲ್ಲಿ ಬಿಡುಗಡೆಯಾದ ಚಲನಚಿತ್ರದಿಂದ ಗುಲ್ಜಾರ್ ಬರೆದ 'ವೋ ಜೋ ಶಹರ್ ಥಾ' ಹಾಡಿನ ಮೂಲಕ ಖ್ಯಾತಿಯನ್ನು ಪಡೆದರು.

ಇದನ್ನೂ ಓದಿ: ವಿವಾಹಿತೆಗೆ ಫಿದಾ, ಆಕೆಯ ಪತಿ ಮುಂದೆಯೇ ಪ್ರಪೋಸಲ್ ಇಟ್ಟ ಗಜಲ್ ಗಾಯಕ!

1980 ರ ದಶಕದ ಮಧ್ಯಭಾಗದಲ್ಲಿ, ಭೂಪಿಂದರ್ ಸಿಂಗ್ ಮಿಥಾಲಿ ಮುಖರ್ಜಿ ಅವರನ್ನು ವಿವಾಹವಾದರು. ಮಿಥಾಲಿ ಬಾಂಗ್ಲಾದೇಶದ ಗಾಯಕಿ. ದಂಪತಿಗಳು ಒಟ್ಟಿಗೆ ಅನೇಕ ಗಜಲ್‌ಗಳನ್ನು ಹಾಡಿದ್ದರು ಮತ್ತು ಲೈವ್ ಪ್ರದರ್ಶನ ನೀಡಿದರು. ಇಬ್ಬರಿಗೂ ಒಬ್ಬ ಮಗನಿದ್ದು, ಅವರ ಹೆಸರು ನಿಹಾಲ್ ಸಿಂಗ್. ನಿಹಾಲ್ ಕೂಡ ಸಂಗೀತಗಾರ.

ಇದನ್ನೂ ಓದಿ:  ಕೊಲ್ಕತ್ತಾದಲ್ಲಿ ಮುಂದುವರೆದ ಸರಣಿ ಆತ್ಮಹತ್ಯೆ: 19 ವರ್ಷದ ಮಾಡೆಲ್ ಪೂಜಾ ಸರ್ಕಾರ್ ಶವವಾಗಿ ಪತ್ತೆ

ಪ್ರತಿಭೆ ಗುರುತಿಸಿದ್ದ ಮದನ್‌ ಮೋಹನ್: ತಮ್ಮ ವೃತ್ತಿಜೀವನದ ಆರಂಭದಲ್ಲಿ, ಭೂಪಿಂದರ್ ಸಿಂಗ್ ದೆಹಲಿಯ ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರದರ್ಶನ ನೀಡುತ್ತಿದ್ದರು. ಅವರು ಗಿಟಾರ್ ಮತ್ತು ಪಿಟೀಲು ನುಡಿಸಲು ಸಹ ಕಲಿತರು. 1962 ರಲ್ಲಿ, ಸಂಗೀತ ನಿರ್ದೇಶಕ ಮದನ್ ಮೋಹನ್ ಅವರು ಆಲ್‌ ಇಂಡಿಯಾ ರೆಡಿಯೋ ನಿರ್ಮಾಪಕ ಸತೀಶ್ ಭಾಟಿಯಾ ಅವರ ಡಿನ್ನರ್ ಪಾರ್ಟಿಯಲ್ಲಿ ಭೂಪಿಂದರ್ ಹಾಡುವುದನ್ನು ಕೇಳಿದರು. ಇದಾದ ನಂತರ ಭೂಪಿಂದರ್ ಅವರನ್ನು ಮುಂಬೈಗೆ ಕರೆಸಿ ಮೊಹಮ್ಮದ್ ರಫಿ, ತಲತ್ ಮೆಹಮೂದ್ ಮತ್ತು ಮನ್ನಾ ಡೇ ಅವರೊಂದಿಗೆ ‘ಹೊಕೆ ಮಜ್ಬೂರ್ ಉನೆ ಮುಜೆ ಬುಲಾಯ್ ಹೋಗಾ’ ಹಾಡನ್ನು ಹಾಡಲು ಅವಕಾಶ ನೀಡಿದರು. ಹಕೀಕತ್ ಚಿತ್ರದ ಈ ಹಾಡು ಜನಮನ ಗೆದ್ದಿತ್ತು. 
 

Latest Videos
Follow Us:
Download App:
  • android
  • ios