Asianet Suvarna News Asianet Suvarna News

ಎಣ್ಣೆ ಪಾರ್ಟಿಯಲ್ಲಿ ನೀರು ಕೊಡದಿದ್ದಕ್ಕೆ ಸ್ನೇಹಿತರ ನಡುವೆ ಗಲಾಟೆ; ಚೂರಿ ಇರಿದು ಕೊಂದ ಕ್ರೂರಿಗಳು!

ಮದ್ಯ ಸೇವನೆ ವೇಳೆ ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ  ಸ್ನೇಹಿತರ ನಡುವೆ ಗಲಾಟೆಯಾಗಿ ಚೂರಿಯಿಂದ ಹಿರಿದು ಕೊಂದ ಘಟನೆ ಹಾಸನ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ. ವಡ್ಡರಹಟ್ಟಿ ಗ್ರಾಮದ ನಾಗೇಶ್ (30) ಕೊಲೆಯಾದ ಯುವಕ. ಘಟನೆಯಲ್ಲಿ ಮೂವರಿಗೆ ಚೂರಿಯಿಂದ ಹಿರಿದಿದ್ದು, ಮೋಹನ್, ಮಂಜು ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

Drunkens quarrel over a trivial cause One killed by stabbing at hassan rav
Author
First Published Dec 24, 2023, 2:21 PM IST

ಹಾಸನ (ಡಿ.24) : ಮದ್ಯ ಸೇವನೆ ವೇಳೆ ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ  ಸ್ನೇಹಿತರ ನಡುವೆ ಗಲಾಟೆಯಾಗಿ ಚೂರಿಯಿಂದ ಹಿರಿದು ಕೊಂದ ಘಟನೆ ಹಾಸನ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ.

ವಡ್ಡರಹಟ್ಟಿ ಗ್ರಾಮದ ನಾಗೇಶ್ (30) ಕೊಲೆಯಾದ ಯುವಕ. ಘಟನೆಯಲ್ಲಿ ಮೂವರಿಗೆ ಚೂರಿಯಿಂದ ಹಿರಿದಿದ್ದು, ಮೋಹನ್, ಮಂಜು ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಏಷ್ಯಾ ಮಾಲ್‌ಗೆ ನುಗ್ಗಿ ಗಲಾಟೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಅರ್!

ಏನಿದು ಗಲಾಟೆ?

ನಿನ್ನೆ ಸಂಜೆ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದ ವಡ್ಡರಹಟ್ಟಿಯ ನಾಗೇಶ್, ಸಾಣೇನಹಳ್ಳಿಯ ರಾಮಚಂದ್ರ ಹಾಗೂ ಮಂಜು, ಚೇತು, ಸ್ವಾಮಿ ಮತ್ತು ಶಿವು ಎಂಬುವವರು. ಕುಡಿದು ಮತ್ತೇರುತ್ತಲೆ ಎಣ್ಣೆ ಕುಡಿಯಲು ಮಿಕ್ಸ್ ಮಾಡೋ ಸಲುವಾಗಿ ನಾಗೇಶ್ ಕಡೆಯವರಿಂದ ನೀರು ಕೇಳಿದ ಚೇತು ಗೆಳೆಯರು. ನಾವು ಹಣ ಕೊಟ್ಟು ತಂದಿದ್ದೇವೆ ಕೊಡಲ್ಲ ಎಂದಿರುವ ನಾಗೇಶ್.

ಕೆಆರ್‌ಎಸ್ ಹಿನ್ನೀರಿನಲ್ಲಿ ಇಬ್ಬರ ಮೃತದೇಹ ಪತ್ತೆ; ಹತ್ಯೆಗೈದು ನದಿಗೆಸೆದಿರೋ ಶಂಕೆ!

ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಎರಡು ತಂಡಗಳಿಂದ ಜಗಳ. ಜಗಳವಾಗುತ್ತಲೇ ಫೋನ್ ಮಾಡಿ ಬೇರೆ ಹುಡುಗರನ್ನ ಕರೆಸಿದ್ದ ಶಿವು ಮತ್ತು ಸ್ವಾಮಿ. ಸ್ಥಳಕ್ಕೆ ಬಂದ ನಾಲ್ಲೈದು ಯುವಕರಿಂದ ಏಕಾ ಏಕಿ ದಾಳಿ. ಚಾಕುವಿನಿಂದ ಮೂವರಿಗೆ ಇರಿದ ಕ್ರೂರಿಗಳು. ಚೂರಿ ಇರಿತದಿಂದ ನಾಗೇಶ್(30) ಸ್ಥಳದಲ್ಲೆ ಸಾವು. ಇನ್ನುಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಸದ್ಯ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.

ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Follow Us:
Download App:
  • android
  • ios