ಕಾರಿಗೆ ದಾರಿ ಬಿಡಿ ಎಂದಿದ್ದಕ್ಕೆ ಅಡ್ಡಡ್ಡ ಮಲಗಿಸಿ ಹೊಡೆದ ಕಿಡಿಗೇಡಿ; ಚೈತನ್ಯ ಕಾಲೇಜು ಡೀನ್ ಸಾವು!
ಬೆಂಗಳೂರು ಹೊರವಲಯದಲ್ಲಿ ಹಾರನ್ ಹಾಕಿದ್ದಕ್ಕೆ ಕಾರು ಸವಾರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಜೆಸಿಬಿಗೆ ದಾರಿ ಬಿಡುವಂತೆ ಕೇಳಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ವ್ಯಕ್ತಿಯನ್ನು ಚೈತನ್ಯ ಟೆಕ್ನೋ ಶಾಲೆಯ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ ಎಂದು ಗುರುತಿಸಲಾಗಿದೆ.
ಆನೇಕಲ್ /ಬೆಂಗಳೂರು (ಡಿ.13): ಕಾರು ಹೋಗಲು ದಾರಿಬಿಡಿ ಎಂದು ಹಾರನ್ ಹಾಕಿ ಜೋರಾಗಿ ಹೇಳಿದ್ದಕ್ಕೆ ಕಾರಿನಲ್ಲಿದ್ದವನ್ನು ಎಳೆದುಕೊಂಡು ಅಡ್ಡಡ್ಡ ಮಲಗಿಸಿ ಹಲ್ಲೆ ಮಾಡಲಾಗಿದ್ದು, ಭೀಕರ ಹೊಡೆತಕ್ಕೆ ಕಾರಿನ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಹೊರ ವಲಯ ಎಲೆಕ್ಟ್ರಾನಿಕ್ ಸಿಟಿ ಹೊರ ವಲಯದ ಗೂಳಿಮಂಗಲ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆನೇಕಲ್ ತಾಲೂಕಿನ ಲಕ್ಷ್ಮೀನಾರಾಯಣಪುರದ ಚೈತನ್ಯ ಟೆಕ್ನೋ ಶಾಲೆಯ ಪಿಯು ಕಾಲೇಜಿನ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ (53) ಎಂದು ಗುರುತಿಸಲಾಗಿದೆ. ಪ್ರತಿದಿನ ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕಾರಿನಲ್ಲಿ ಕಾಲೇಜಿಗೆ ಹೋಗುವಾಗ ಮುಂದೆ ನಿಲ್ಲಿಸಿದ್ದ ಜೆಸಿಬಿ ಸೈಡಿಗೆ ಚಲಿಸಿ ನನ್ನ ಕಾರು ಹೋಗಲು ದಾರಿ ಬಿಡಿ ಎಂದು ಶ್ರೀನಿವಾಸ ಮನೋಹರ ರೆಡ್ಡಿ ಅವರು ಹಾರನ್ ಹಾಕಿ, ಜೋರಾಗಿ ಮಾತನಾಡಿದ್ದಾರೆ. ಇಷ್ಟು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಘಟನೆ ನಡೆದಿದ್ದಾರೂ ಹೇಗೆ?
ಪ್ರತಿನಿತ್ಯ ಕಾಲೇಜಿಗೆ ಹೋಗುತ್ತಿದ್ದಂತೆ ಕಾಲೇಜಿಗೆ ಕಾರಿನಲ್ಲಿ ಹೋಗುತ್ತಿದ್ದ ಚೈತನ್ಯ ಕಾಲೇಜಿನ ಡೀನ್ ಅವಸರವಸರವಾಗಿ ಹೋಗಿದ್ದಾರೆ. ಆದರೆ, ಅವರು ಹೋಗುವ ರಸ್ತೆಯಲ್ಲಿ ಒಂದು ಜೆಸಿಬಿ ರಸ್ತೆಯ ಪಕ್ಕದಲ್ಲಿ ಪೈಪ್‌ಲೈನ್ ಕಾಮಗಾರಿಯನ್ನು ಮಾಡಲು ಇಡೀ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಇನ್ನು ತನಗೆ ಕಾಲೇಜಿಗೆ ತಡವಾಗುತ್ತಿರುವುದಕ್ಕೆ ಹಾರನ್ ಹಾಕುತ್ತಾ, ನಿಮ್ಮ ಜೆಸಿಬಿ ಪಕ್ಕಕ್ಕೆ ಸರಿಸಿ ದಾರಿ ಬಿಡಿ ಎಂದು ಕೇಳಿದ್ದಾರೆ. ಆದರೆ, ಕಾರಿನಲ್ಲಿದ್ದ ರೆಡ್ಡಿ ಅವರಿಗೆ ಯಾವುದೇ ಸೊಪ್ಪು ಹಾಕದಿದ್ದಾಗ ಒಂದಷ್ಟು ಜೋರು ಧ್ವನಿಯಲ್ಲಿ ದಾರಿ ಬಿಡುವಂತೆ ಕೇಳಿದ್ದಾರೆ.
ಇದನ್ನೂ ಓದಿ: ಫುಷ್ಪ-2 ಕಾಲ್ತುಳಿತ ದುರಂತ: ಪುಷ್ಪರಾಜ್ @ ಅಲ್ಲು ಅರ್ಜುನ್ ಜೈಲುಪಾಲು, 10 ವರ್ಷ ಜೈಲು ಶಿಕ್ಷೆ ಸಾಧ್ಯತೆ!
ಇಷ್ಟಕ್ಕೆ ನವೀನ್ ಎಂಬಾತ ನಾವು ದಾರಿ ಬಿಡುವುದಿಲ್ಲ ಎಂದು ಜೋರಾಗಿ ಅವಾಜ್ ಹಾಕುತ್ತಾ ರೆಡ್ಡಿ ಅವರ ಬಳಿಗೆ ಬಂದಿದ್ದಾನೆ. ಆಗ ಕೋಪಗೊಂಡ ರೆಡ್ಡಿ ಅವರೂ ದಾರಿ ಸಾರ್ವಜನಿಕರ ಸಂಚಾರಕ್ಕೆ ಇರುವ ದಾರಿ ಬಿಟ್ಟು ಮಾತನಾಡಿ. ಇಲ್ಲವಾದರೆ ಪೊಲೀಸರಿಗೆ ಹೇಳಿ ಬಾಲ ಕಟ್ ಮಾಡಿಸುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ನವೀನ್ ರೆಡ್ಡಿ ಎಂಬಾತ ಕಾರಿನಲ್ಲಿದ್ದ ಶ್ರೀನಿವಾಸ ಮನೋಹರ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಕೂಡಲೇ ಕಾಲೇಜು ಪ್ರಾಚಾರ್ಯರು ಹಾಗೂ ಇತರೆ ಸಿಬ್ಬಂದಿಗೆ ಮಾಹಿತಿ ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಿದ್ದಾರೆ.
ಆಗ ನವೀನ್ ನೀನು ನಿನ್ನ ಕಡೆಯವರನ್ನು ಕರೆಸಿ ನನ್ನನ್ನು ಹೊಡೆಸುತ್ತೀಯಾ ಎಂದು ಮತ್ತಷ್ಟು ಕುಪಿತಗೊಂಡು ಮನೋಹರ ರೆಡ್ಡಿಯನ್ನು ಕಾರಿನಿಂದ ಹೊರಗೆಳೆದುಕೊಂಡು ಹಲ್ಲೆ ಮಾಡಿದ್ದಾನೆ. ಆಗ ಕಾಲೇಜು ಸಿಬ್ಬಂದಿ ಬರುವಷ್ಟರಲ್ಲಿ ಡೀನ್ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಈ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಪವಿತ್ರಾಗೌಡಗೆ ಜಾಮೀನು ಸಿಕ್ಕಿದರೂ ಜೈಲಿಂದ ಹೊರಗೆ ಬರೋದು ಡೌಟು!