user
user icon
Sign in with GoogleSign in with Google

kannada News

Kannada Entertainment Live 3rd April 2025 sandalwood bollywood kollywood and OTT MOvies Updates mrq

Kannada Entertainment Live: ಕಾಂತಾರಾ ಫ್ಯಾನ್ಸ್‌ಗೆ ಬೇಸರದ ಸಂಗತಿ, ಹೊಸ ಸೀರಿಯಲ್ಸ್‌ ಎಂಟ್ರಿ

ಇಡೀ ದೇಶವೇ ಕಾಂತಾರಾ ಚಾಪ್ಟರ್ 1ಗಾಗಿ ಕಾಯುತ್ತಿದೆ.  ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ 1 ಸಿನಿಮಾ ಬಿಡುಗಡೆ ಕೂಡ ಮುಂದೂಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತ ಕೆಲ ಪೋಸ್ಟ್‌ಗಳು ವೈರಲ್ ಆಗಿತ್ತು. ಈ ಸಂಬಂಧ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ. ಮತ್ತೊಂದೆಡೆ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಎಂಟ್ರಿ ಆಗುತ್ತಿದೆ. ಲಕ್ಷೀ ಬಾರಮ್ಮ ಸೀರಿಯಲ್ ಮುದ್ದುಸೊಸೆಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ ಕರ್ಣ ಸೀರಿಯಲ್ ಪ್ರೋಮೋ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಆದ್ರೆ ಕರ್ಣನಿಗಾಗಿ ಯಾವ ಧಾರಾವಾಹಿ ಕೊನೆಯಾಗುತ್ತೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಕೊನೆಯಾಗಲಿದೆ ಎಂದು ಹೇಳಲಾಗುತ್ತಿದೆ.

Chikkamagaluru Triple murder Father kills daughter mother-in-law and sister-in-law sat

ಚಿಕ್ಕಮಗಳೂರು ಹಸಿರ ಕಾನನದಲ್ಲಿ ರಕ್ತದೋಕುಳಿ! ಮೂರು ಕೊಲೆ, ಒಂದು ಆತ್ಮಹತ್ಯೆಗೆ ಕಾರಣವಾದ ಹೆಂಡತಿ!

ಚಿಕ್ಕಮಗಳೂರಿನಲ್ಲಿ ರತ್ನಾಕರ್ ಎಂಬಾತ ತನ್ನ ಅತ್ತೆ, ಮಗಳು ಮತ್ತು ನಾದಿನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹೆಂಡತಿ ಬಿಟ್ಟು ಹೋದ ನೋವಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.