ವಂಚನೆ ಪ್ರಕರಣ, ಸಂಜಯ್ ಭಂಡಾರಿ ಭಾರತ ಹಸ್ತಾಂತರಕ್ಕೆ ಯುಕೆ ನ್ಯಾಯಾಲಯ ಆದೇಶ

By Gowthami KFirst Published Nov 7, 2022, 8:22 PM IST
Highlights

ವಿವಾದಿತ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್‌ಡಂನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.

ಲಂಡನ್ (ನ.7): ವಿವಾದಿತ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್‌ಡಂನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಆದೇಶಿಸಲಾಗಿದೆ. ಜೊತೆಗೆ ರಕ್ಷಣಾ ವ್ಯವಹಾರಗಳಲ್ಲಿ ಲಂಚ ಪಡೆದ ಆರೋಪ ಕೂಡ ಇವರ ಮೇಲಿದೆ. ಭಾರತ ಸರ್ಕಾರ ಈ ಸಂಬಂಧ ಯುಕೆ ನ್ಯಾಯಾಲಯದಲ್ಲಿ ಪ್ರಕರಣದ ವಿರುದ್ಧ ಹೋರಾಡುತ್ತಿತ್ತು. 2016ರಲ್ಲಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ ಸಂಜಯ್ ಭಂಡಾರಿಯನ್ನು 2020ರಲ್ಲಿ ಲಂಡನ್ ನಲ್ಲಿ ಬಂಧಿಸಲಾಗಿತ್ತು. ಆದರೆ ಸಂಜಯ್ ಗೆ ಸದ್ಯ ಲಂಡನ್ ಹೈಕೋರ್ಟ್ ಮೆಟ್ಟಲು ಹತ್ತುವ ಅವಕಾಶವಿದೆ. ಆದಾಯ ತೆರಿಗೆ ಅಧಿಕಾರಿಗಳು ಆರೋಪಿ ಸಂಜಯ್ ಭಂಡಾರಿ ವಿರುದ್ಧ ನ್ಯಾಯಾಲಯದ ಮುಂದೆ ಕಪ್ಪುಹಣ ಮತ್ತು 2015 ರ ಕಾಯ್ದೆಯ( ಕಪ್ಪುಹಣ ಕಾಯ್ದೆ) ಅಡಿಯಲ್ಲಿ ದೂರು ದಾಖಲಿಸಿದ ನಂತರ ಇಡಿ ತನ್ನ ತನಿಖೆಯನ್ನು ಪ್ರಾರಂಭಿಸಿತ್ತು. ಇದಕ್ಕೂ ಮುನ್ನ ದೆಹಲಿಯ ನಿಯೋಜಿತ ನ್ಯಾಯಾಲಯವು ಸಂಜಯ್ ಭಂಡಾರಿಯನ್ನು ಯುಕೆಯಿಂದ ಹಸ್ತಾಂತರಿಸುವಂತೆ ಇಡಿಗೆ ಸೂಚಿಸಿತ್ತು. 

ಸಂಜಯ್ ಭಂಡಾರಿ ಮತ್ತು ಇತರ ಸಹ-ಸಂಚುಕೋರರ ವಿರುದ್ಧ ED ಜೂನ್ 1, 2020 ರಂದು ಚಾರ್ಜ್‌ಶೀಟ್ ಸಲ್ಲಿಸಿತ್ತು, ಇದರಲ್ಲಿ ಅವರು ಸಾಗರೋತ್ತರದ ವಿವಿಧ ಕಂಪನಿಗಳ ಜೊತೆ ನಡೆಸುತ್ತಿರುವ ವ್ಯವಹಾರ ಕೂಡ ಸೇರಿದೆ.

ಆರೋಪಿ ಸಂಜಯ್ ಭಂಡಾರಿ ತೆರಿಗೆ ವಂಚಿಸಲು ತನ್ನ ಸಹಚರರ ನೆರವಿನೊಂದಿಗೆ ವಿದೇಶದಲ್ಲಿ ಕಪ್ಪುಹಣವನ್ನು ಸಂಗ್ರಹಿಸಿದ್ದು, ಇದರಿಂದ ರಾಷ್ಟ್ರೀಯ ಬೊಕ್ಕಸಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ" ಎಂದು ಇಡಿ ಈ ಹಿಂದೆ ಆರೋಪಿಸಿತ್ತು. ಆದಾಯ ತೆರಿಗೆ ಇಲಾಖೆ ತನಿಖೆ, ಮೂಲಗಳ ಪ್ರಕಾರ, ರಾಬರ್ಟ್ ವಾದ್ರಾ ಮತ್ತು ಸಂಜಯ್ ಭಂಡಾರಿ ನಡುವೆ ಸಂಪರ್ಕವಿದೆ.  

ಏಪ್ರಿಲ್ 30, 2016 ರಂದು ಆದಾಯ ತೆರಿಗೆ ಇಲಾಖೆಯಿಂದ  ಭಂಡಾರಿ ವಿಚಾರಣೆಗೆ ನಡೆದಿತ್ತು. ಆದ ವಿಚವಾರಣೆಯಲ್ಲಿ 2012 ರಲ್ಲಿ ರಾಬರ್ಟ್ ವಾದ್ರಾ ಅವರ ಫ್ರಾನ್ಸ್ ಪ್ರವಾಸದ ಬಗ್ಗೆ ಕೂಡ ವಿಚಾರಣೆ ನಡೆಸಿದ್ದರು.

ತನಿಖಾ ಸಂಸ್ಥೆಯ ಪ್ರಕಾರ, ತನಿಖೆಯ ಸಂದರ್ಭದಲ್ಲಿ, ಸಂಜಯ್ ಭಂಡಾರಿ ಅವರು ವಿವಿಧ ವಿದೇಶಿ ನ್ಯಾಯವ್ಯಾಪ್ತಿಯಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ, ಯುಎಇಯಲ್ಲಿ ವಿವಿಧ ಘಟಕಗಳನ್ನು ಲಾಭದಾಯಕ ಮಾಲೀಕರಾಗಿ ಸಂಯೋಜಿಸಿದ್ದಾರೆ ಮತ್ತು ವಿವಿಧ ಘಟಕದಲ್ಲಿ ಆರ್ಥಿಕ ಆಸಕ್ತಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಆ ಎಲ್ಲಾ ವಿದೇಶಿ ಆಸ್ತಿಗಳು ಮತ್ತು ಘಟಕಗಳನ್ನು ಸಂಜಯ್ ಭಂಡಾರಿ ಅವರು ಭಾರತದಲ್ಲಿನ ಆದಾಯ ತೆರಿಗೆ ಅಧಿಕಾರಿಗಳಿಗೆ ಬಹಿರಂಗಪಡಿಸಿಲ್ಲ ಎಂದು ಇಡಿ ಆರೋಪಿಸಿದೆ.  ಅಕ್ಟೋಬರ್ 15, 2020 ರಂದು ರೌಸ್ ಅವೆನ್ಯೂ ನ್ಯಾಯಾಲಯವು ಸಂಜಯ್ ಭಂಡಾರಿ ಮತ್ತು ಇತರ ಸಹ-ಪಿತೂರಿದಾರರ ವಿರುದ್ಧ ಇಡಿ ಸಲ್ಲಿಸಿದ ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸಿತು. 

 

 'ರಫೇಲ್ ಒಪ್ಪಂದದ ಮೇಲೆ ಕಣ್ಣಿಟ್ಟಿದ್ದ ವಾದ್ರಾ'

2009 ರಲ್ಲಿ, ಯುಪಿಎ ಸರಕಾರದ ಅವಧಿಯಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಟೆಂಟರ್ ಮೂಲಕ 75 ತರಬೇತಿ ವಿಮಾನಗಳನ್ನು  ಪೈಲಾಟಸ್  ಏರ್‌ಕ್ರಾಫ್ಟ್‌ ಎಂಬ ಸ್ವಿಸ್ ಮೂಲದ ಕಂಪೆನಿಯಿಂದ  2,895 ಕೋಟಿ ರೂಪಾಯಿಗಳ ಡೀಲ್‌ನಲ್ಲಿನ  ಖರೀದಿಸಲಾಗಿತ್ತು. ಇದಕ್ಕಾಗಿ ಕಂಪನಿಯಿಂದ ಸಂಜಯ್ 350 ಕೋಟಿ ಲಂಚ ಪಡೆದಿರುವ ಆರೋಪ ಕೂಡ ಇದೆ.  ಇದಕ್ಕೆ ಸಂಬಂಧಿಸಿದಂತೆ  ಸಿಬಿಐ 2019ರಲ್ಲಿ ಕೇಸ್ ದಾಖಲಿಸಿತ್ತು.

ಕಾಂಗ್ರೆಸ್‌ಗೆ ಮಧ್ಯವರ್ತಿ Sanjay Bhandari ಡೀಲ್‌ ಶಾಕ್‌: ಯುಪಿಎ ಅವಧಿಯಲ್ಲೇ ರಕ್ಷಣಾ ಹಗರಣ: ಬಿಜೆಪಿ

ಆಫ್‌ಸೆಟ್ ಇಂಡಿಯಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಭಂಡಾರಿ ಮತ್ತು ಬಿಮಲ್ ಸರೀನ್ ಅವರೊಂದಿಗೆ ಸ್ವಿಟ್ಜರ್ಲೆಂಡ್ ಮೂಲದ ಪಿಲಾಟಸ್ ಏರ್‌ಕ್ರಾಫ್ಟ್ ಲಿಮಿಟೆಡ್ ಕ್ರಿಮಿನಲ್ ಪಿತೂರಿ ನಡೆಸಿದೆ ಮತ್ತು ಜೂನ್ 2010 ರಲ್ಲಿ ಭಂಡಾರಿಯೊಂದಿಗೆ ಸೇವಾ ಪೂರೈಕೆದಾರರ ಒಪ್ಪಂದಕ್ಕೆ ಅಪ್ರಾಮಾಣಿಕವಾಗಿ ಮತ್ತು ಮೋಸದಿಂದ ಸಹಿ ಹಾಕಿದೆ ಎಂದು ಸಿಬಿಐ  ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಭಾರತೀಯ ವಾಯುಪಡೆಗೆ 75 ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್‌ಗಳ ಪೂರೈಕೆಯ ಗುತ್ತಿಗೆಯನ್ನು ಪಡೆಯಲು ಇದನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

click me!