ಮದುವೆ ಕಾರ್ಯಕ್ರಮದಲ್ಲಿ ಸಂಗೀತ: 13 ಜನರನ್ನು ಕೊಂದ ತಾಲಿಬಾನ್‌!

By Suvarna NewsFirst Published Oct 31, 2021, 9:58 AM IST
Highlights

*ಅಫ್ಘಾನಿಸ್ತಾನದಲ್ಲಿ ಸಂಗೀತವನ್ನು ನಿಷೇದಿಸಿದ್ದ ಹೊಸ ಸರ್ಕಾರ
*ಮದುವೆ ಸಮಾರಂಭದಲ್ಲಿ 13 ಜನರನ್ನು ಕೊಂದ ತಾಲಿಬಾನ್‌
*ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ ಎಂದ ವಕ್ತಾರ
 

ಅಫ್ಘಾನಿಸ್ತಾನ(ಅ 31): ಅಫ್ಘಾನಿಸ್ತಾನದ (Afghanistan) ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ವಿವಾಹ ಸಮಾರಂಭವೊಂದರಲ್ಲಿ ಸಂಗೀತ  ಹಾಕಿದ್ದಕ್ಕಾಗಿ ತಾಲಿಬಾನ್ ಹದಿಮೂರು ಜನರನ್ನು ಕೊಂದಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ (Vice President) ಅಮ್ರುಲ್ಲಾ ಸಲೇಹ್ (Amrullah Saleh)  ಟ್ವೀಟ್‌ ಮೂಲಕ  ಹೇಳಿದ್ದಾರೆ.

ಅಫ್ಘಾನಿಸ್ತಾನದ ಅರ್ಧ ಜನತೆಗೆ ಹಸಿವಿನ ಭೀತಿ : ವಿಶ್ವಸಂಸ್ಥೆ ವರದಿ

ನಂಗರ್‌ಹಾರ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಗೀತವನ್ನು (Music) ನಿಶ್ಯಬ್ದಗೊಳಿಸಲು ತಾಲಿಬಾನ್ ಸೇನಾಪಡೆಗಳು 13 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. "ಖಂಡನೆಯಿಂದ ಮಾತ್ರ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. 25 ವರ್ಷಗಳ ಕಾಲ ಪಾಕ್ ಅವರಿಗೆ ಅಫ್ಘನ್ ಸಂಸ್ಕೃತಿಯನ್ನು ನಾಶಮಾಡಲು ತರಬೇತಿ ನೀಡಿತು ಮತ್ತು ನಮ್ಮ ನೆಲವನ್ನು ನಿಯಂತ್ರಿಸಲು ISI ನೀತಿಗಳಿಗುಣವಾಗಿ ಮತಾಂಧತೆಯನ್ನು ಹೇಳಿಕೊಟ್ಟಿತು. ಅದು ಈಗ ಕೆಲಸ ಮಾಡುತ್ತಿದೆ. ಈ ಆಡಳಿತವು ಹೆಚ್ಚು ಕಾಲ ಉಳಿಯುವುದಿಲ್ಲ ಆದರೆ ದುರದೃಷ್ಟವಶಾತ್, ಅದು ಕೊನೆಗೊಳ್ಳುವ ಕ್ಷಣದವರೆಗೂ, ಆಫ್ಘನ್ನರು ಸಂಕಷ್ಟ ಅನುಭವಿಸಬೇಕು" ಎಂದು ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ.

 

Taliban militiamen have massacred 13 persons to silence music in a wedding party in Nengarhar. We can't express our rage only by condemnation. For 25 years Pak trained them to kill Afg culture & replace it with ISI tailored fanaticism to control our soil. It is now in works. 1/2

— Amrullah Saleh (@AmrullahSaleh2)

 

ತಾಲಿಬಾನ್‌ ಮತ್ತು ಸಂಗೀತ!

ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತ್ತು. ಅಫ್ಘಾನಿಸ್ತಾನದ ಮೇಲೆ ತಾಲಿಬಾನ ಹಿಡಿತ ಸಾಧಿಸಿದ ನಂತರ ದೇಶದಲ್ಲಿ ಕಾನೂನು ಸುವವ್ಯಸ್ಥೆ ಹದಗೆಟ್ಟಿದೆ. ತಾಲಿಬಾನ ಹೊರಡಿಸಿರುವ ನೀತಿ-ನಿಯಮಾವಳಿಗಳು ಜನರನ್ನು ಸಂಕಷ್ಟಕ್ಕೀಡು ಮಾಡಿವೆ. ತಾಲಿಬಾನ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಗೀತ ಕಾರ್ಯಕ್ರಮ ಮತ್ತು ಸಂಗೀತಗಾರರ ಮೇಲೆ ದಾಳಿ ನಡೆಸಿದಂತಹ ಹಲವಾರು ಘಟನೆಗಳು ನಡೆದಿವೆ.

ಇಸ್ಲಾಂನಲ್ಲಿ ಸಂಗೀತ ನಿಷೇಧ!

ಆಗಸ್ಟ್ ಅಂತ್ಯದ ವೇಳೆಗೆ, ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ತಾಲಿಬಾನ್ ದೂರದರ್ಶನ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ಸಂಗೀತ ಮತ್ತು ಮಹಿಳೆಯರ ಧ್ವನಿ ಪ್ರಸಾರ ಮಾಡುವುದನ್ನು ನಿಷೇಧಿಸಿತ್ತು. ಸೆಪ್ಟೆಂಬರ್ 4 ರಂದ ಆಫ್ಘಾನಿಸ್ತಾನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ (National Institute of Music)ಅನ್ನು ಮುಚ್ಚಿದ್ದರು. ಅಫ್ಘಾನಿಸ್ತಾನದ ಜಾನಪದ ಗಾಯಕ ಫವಾದ್ ಅಂದ್ರಾಬಿ (Fawad Andarabi) ಅವರನ್ನು ಅಗಸ್ಟ್ ಕೊನೆಯ ವಾರದಲ್ಲಿ ತಾಲಿಬಾನ್ ಹೋರಾಟಗಾರರು ಅಂಡರಾಬಿ ಕಣಿವೆಯಲ್ಲಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಕೂಡ ವರದಿಯಾಗಿತ್ತು.

ಆಫ್ಘನ್‌ ಉಗ್ರರ ತಾಣವಾಗದಂತೆ ತಡೆಯಬೇಕು: ಮೋದಿ

ಸೆಪ್ಟೆಂಬರ್ ಮೊದಲ ವಾರದಲ್ಲಿ, ಅಫ್ಘಾನಿಸ್ತಾನದ ಕಾಬೂಲ್‌ನ ಸ್ಟೇಟ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಎರಡು ಗ್ರ್ಯಾಂಡ್ ಪಿಯಾನೋಗಳು ಮತ್ತು ಇತರ ಸಂಗೀತ ಉಪಕರಣಗಳು ತಾಲಿಬಾನಿಗಳು ನಾಶಪಡಿಸಿದ್ದರು. ಆಗಸ್ಟ್‌ನಲ್ಲಿ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ , "ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ. ಆದರೆ ನಾವು ಜನರ ಮೇಲೆ ಒತ್ತಡ ಹೇರುವ ಬದಲು ಅಂತಹ ಕೆಲಸಗಳನ್ನು ಮಾಡದಂತೆ ಮನವೊಲಿಸಬಹುದು ಎಂದು ನಾವು ಭಾವಿಸುತ್ತೇವೆ." ಎಂದು ಹೇಳಿದ್ದರು.

ಆತ್ಮಾಹುತಿ ಬಾಂಬರ್‌ಗಳಿಗೆ ತಾಲಿಬಾನ್‌ ‘ಹುತಾತ್ಮ’ ಪಟ್ಟ!

ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್‌(Taliban) ಸರ್ಕಾರ ರಚನೆಗೂ ಮುನ್ನ ಅಮೆರಿಕ(US) ಮತ್ತು ಆಫ್ಘನ್‌ ಸೇನೆ ಮೇಲೆ ಆತ್ಮಾಹುತಿ ದಾಳಿ(Suicide Bomb) ನಡೆಸಿದವರನ್ನು ತಾಲಿಬಾನ್‌ ಸರ್ಕಾರ ‘ಹುತಾತ್ಮರು’(Martyrs) ಎಂದು ಘೋಷಣೆ ಮಾಡಿದೆ. ಅಲ್ಲದೆ ಆತ್ಮಾಹುತಿ ದಾಳಿ ಎಸಗಿದ ಕುಟುಂಬ ಸದಸ್ಯರಿಗೆ ಜಮೀನು, ನಿವೇಶನ, ಬಟ್ಟೆ-ಬರೆ ಹಣಕಾಸು ನೆರವು ಸೇರಿದಂತೆ ಇನ್ನಿತರ ನೆರವು ನೀಡುವುದಾಗಿ ತಾಲಿಬಾನ್‌ ಸರ್ಕಾರ ಭರವಸೆ ನೀಡಿದೆ.

ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್

ಅಮೆರಿಕ ಮತ್ತು ಆಫ್ಘನ್‌ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಮುಖಾಂತರ ತಾಲಿಬಾನ್‌(Taliban) ಸರ್ಕಾರ ರಚನೆಗೆ ದಾರಿಮಾಡಿಕೊಟ್ಟಬಾಂಬರ್‌ಗಳ ಕುಟುಂಬಗಳನ್ನು ಹಂಗಾಮಿ ಗೃಹ ಸಚಿವನೂ ಆದ ಕುಖ್ಯಾತ ಭಯೋತ್ಪಾದಕ ಸಿರಾಜುದ್ದೀನ್‌ ಹಕ್ಕಾನಿ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿದ. ಈ ವೇಳೆ ಮಾತನಾಡಿದ ಹಕ್ಕಾನಿ, ‘ಆತ್ಮಾಹುತಿ ದಾಳಿಕೋರರು ಹುತಾತ್ಮರು’ ಎಂದು ಸಂಬೋಧಿಸಿದ. ಅಲ್ಲದೆ ಅವರು ಇಸ್ಲಾಂ(Islam) ಮತ್ತು ದೇಶದ ನಿಜವಾದ ಹೀರೋಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

click me!