ಹೆಣ್ಮಕ್ಕಳ ತುಂಡುಡುಗೆಯಿಂದ ಅತ್ಯಾಚಾರ ಹೆಚ್ಚಳ; ಪಾಕ್ ಪ್ರಧಾನಿ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ!

By Suvarna NewsFirst Published Jun 21, 2021, 5:17 PM IST
Highlights
  • ಮತ್ತೆ ಮಹಿಳೆಯರು ಹಾಗೂ ಮಹಿಳೆಯ ಉಡುಪಗಳ ಕುರಿತು ವಿವಾದಾತ್ಮಕ ಹೇಳಿಕೆ
  • ಪಾಕಿಸ್ತಾನ ಪ್ರಧಾನಿ ವಿವಾದಾತ್ಮಕ ಹೇಳಿಕೆಗೆ ಭಾರಿ ಆಕ್ರೋಶ
  • ತುಂಡುಡುಗೆಯಿಂದ ಅತ್ಯಾರ ಪ್ರಕರಣ ಹೆಚ್ಚಳ ಎಂದು ಇಮ್ರಾನ್ ಖಾನ್
     

ಇಸ್ಲಾಮಾಬಾದ್(ಜೂ.21):  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿಯೂ ಹೆಣ್ಣು ಮಕ್ಕಳು ಹಾಗೂ ಅವರ ಉಡುಪು ಟಾರ್ಗೆಟ್. ಪಾಕಿಸ್ತಾನದಲ್ಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಹೆಣ್ಣು ಮಕ್ಕಳು ಧರಿಸುವ ತುಂಡುಡುಗೆ ಕಾರಣ ಎಂದು ಇಮ್ರಾನ್ ಖಾನ್ ಒತ್ತಿ ಹೇಳಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಹೊಸ ವರಸೆ, ಹಳೆ ಕ್ಯಾಸೆಟ್ ಮತ್ತೆ ಹಾಕಿ ಭಾರತಕ್ಕೆ ಬೆದರಿಕೆ!.

ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಇಮ್ರಾನ್ ಖಾನ್ ತಮ್ಮ ಎಂದಿನ ಶೈಲಿಯಲ್ಲೇ ಉತ್ತರಿಸಿದ್ದಾರೆ. ಎಲ್ಲಾ ಅತ್ಯಾಚಾರ, ಲೈಂಕಿಗ ದೌರ್ಜನ್ಯ ಪ್ರಕರಣಕ್ಕೆ ಹೆಣ್ಣು ಮಕ್ಕಳ ಮೇಲಿನ ಕಡಿಮೆ ಬಟ್ಟೆ ಕಾರಣ ಎಂದಿದ್ದಾರೆ.

ಹೆಣ್ಣು ಮಕ್ಕಳು ಕಡಿಮೆ ಬಟ್ಟೆ ಧರಿಸುತ್ತಾರೆ. ಇದು ಪುರುಷರನ್ನು ಪ್ರಚೋಧಿಸುತ್ತದೆ. ಮಹಿಳೆಯರ ತುಂಡುಡುಗೆ ಕಾಮಪ್ರಚೋದನೆ ನೀಡಿದಂತೆ. ಇದು ಸಾಮಾನ್ಯ ಜ್ಞಾನ. ಕಾಮ ಪ್ರಚೋದನೆ ತಡೆದುಕೊಳ್ಳಲಾಗದವರು ಅತ್ಯಾಚಾರ ಮಾಡುತ್ತಾರೆ ಎಂದಿದ್ದಾರೆ. 

ಬಾಲಾಕೋಟ್‌ ವಾಯುದಾಳಿಗೆ 300 ಬಲಿ ನಿಜ: ಇಮ್ರಾನ್‌ ಸರ್ಕಾರದ ಬಣ್ಣ ಬಯಲು!

ಇಮ್ರಾನ್ ಹೇಳಿಕೆ ಪಾಕಿಸ್ತಾನದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಮ್ರಾನ್ ಮಾನ ಹರಾಜಾಗಿದೆ. ಪ್ರಧಾನ ಮಂತ್ರಿ ಇಂತ ಹೇಳಿಕೆ ನೀಡುತ್ತಿರುವುದು ಶೋಚನೀಯ. ಇದು ನಾಚಿಕೆಗೇಡು ಎಂದು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ. 

ಅತ್ಯಾಚಾರ ಹಾಗೂ ಲೈಂಗಿಕ ಪ್ರಕರಣ ಕುರಿತು ಮಾತನಾಡುವಾಗ ಪ್ರತಿ ಭಾರಿ ಇಮ್ರಾನ್ ಖಾನ್ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿದ್ದಾರೆ. ಕಳೆದ ಬಾರಿ ಅತ್ಯಾಚಾರ ಪ್ರಕರಣ ಕುರಿತು ಮಾತನಾಡುವಾಗ ಇಮ್ರಾನ್ ಖಾನ್,  ಮಹಿಳೆಯ ಮಸುಕು, ಬುರ್ಖಾ ವಸ್ತ್ರಗಳು ಜಾರಿಗೆ ಬಂದಿದ್ದೇ ಲೈಂಗಿಕ ದೌರ್ಜನ್ಯ ತಡೆಯುವ ಕಾರಣಕ್ಕೆ. ಈ ರೀತಿ ಉಡುಪುಗಳಿಂದ ಪುರುಷರಿಗೆ ಪ್ರಚೋದನೆ ಸಿಗುವುದಿಲ್ಲ ಎಂದಿದ್ದರೂ. ಜೊತೆಗೆ ಮಹಿಳೆಯರನ್ನು ಅತ್ಯಾಚಾರ ಪ್ರಕರಣಗಳಿಂದ ಕಾಪಾಡುತ್ತದೆ ಎಂದಿದ್ದರು.  ಇಲ್ಲೂ ಕೂಡ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರೇ ಕಾರಣ ಎಂದಿದ್ದರು.

click me!