ತುಂಡುಡುಗೆ ತೊಟ್ಟರೆ ರೇಪ್, ಇಮ್ರಾನ್ ಹೇಳಿಕೆಗೆ 'ಅರೆಬೆತ್ತಲೆ' ಉತ್ತರ

By Suvarna NewsFirst Published Jun 23, 2021, 10:26 PM IST
Highlights

* ಹೆಣ್ಣು ಮಕ್ಕಳ ಉಡುಗೆ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿವಾದಾತ್ಮಕ ಹೇಳಿಕೆ
* ಅರೆಬೆತ್ತಲೆ ಫೋಟೊ ಟ್ವೀಟ್‌ ಮಾಡುವ ಮೂಲಕ ಲೇಖಕಿ ತಸ್ಲಿಮಾ ನಸ್ರೀನ್‌ ತಿರುಗೇಟು
* ದೊಡ್ಡ ವಿವಾದದಕ್ಕೆ ಕಾರಣವಾಗಿದ್ದ ಇಮ್ರಾನ್ ಖಾನ್ ಸಂದರ್ಶನ

ನವದೆಹಲಿ(ಜೂ.23):  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿಯೂ ಹೆಣ್ಣು ಮಕ್ಕಳು ಹಾಗೂ ಅವರ ಉಡುಪು ಟಾರ್ಗೆಟ್. ಪಾಕಿಸ್ತಾನದಲ್ಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಹೆಣ್ಣು ಮಕ್ಕಳು ಧರಿಸುವ ತುಂಡುಡುಗೆ ಕಾರಣ ಎಂದು ಇಮ್ರಾನ್ ಖಾನ್ ಹೇಳಿದ್ದರು.

ಪ್ರಧಾನಿ ಇಮ್ರಾನ್‌ ಖಾನ್‌ ಅವರದ್ದೇ ಅರೆಬೆತ್ತಲೆ ಫೋಟೊ ಟ್ವೀಟ್‌ ಮಾಡುವ ಮೂಲಕ ಲೇಖಕಿ ತಸ್ಲಿಮಾ ನಸ್ರೀನ್‌ ತಿರುಗೇಟು ನೀಡಿದ್ದಾರೆ.  ಇಮ್ರಾನ್‌ ಖಾನ್‌ ಅಂಗಿ ಧರಿಸದಿರುವ ಫೋಟೊ ಟ್ವೀಟ್‌ ಮಾಡಿರುವ ನಸ್ರೀನ್‌, 'ಪುರುಷರು ತುಂಡುಡುಗೆ ಧರಿಸಿದರೆ, ಅದು ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮಹಿಳೆಯರೇನು ರೋಬೋಟ್‌ಗಳಲ್ಲ. ' ಎಂದು ಸಾಲುಗಳನ್ನು ಬರೆದಿದ್ದಾರೆ.

ಪಾಕಿಸ್ತಾನದ ಹೊಸ ವರಸೆ, ಹಳೆ ಕ್ಯಾಸೆಟ್ ಮತ್ತೆ ಹಾಕಿ ಭಾರತಕ್ಕೆ ಬೆದರಿಕೆ!.

ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನು ಖಾನ್ ನೀಡಿದ್ದರು.  ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಇಮ್ರಾನ್ ಖಾನ್ ತಮ್ಮ ಎಂದಿನ ಶೈಲಿಯಲ್ಲೇ ಉತ್ತರಿಸಿದ್ದರು.. ಎಲ್ಲಾ ಅತ್ಯಾಚಾರ, ಲೈಂಗಿಕ  ದೌರ್ಜನ್ಯ ಪ್ರಕರಣಕ್ಕೆ ಹೆಣ್ಣು ಮಕ್ಕಳ ಮೇಲಿನ ಕಡಿಮೆ ಬಟ್ಟೆ ಕಾರಣ ಎಂದಿದ್ದಾರೆ.

ಹೆಣ್ಣು ಮಕ್ಕಳು ಕಡಿಮೆ ಬಟ್ಟೆ ಧರಿಸುತ್ತಾರೆ. ಇದು ಪುರುಷರನ್ನು ಪ್ರಚೋಧಿಸುತ್ತದೆ. ಮಹಿಳೆಯರ ತುಂಡುಡುಗೆ ಕಾಮಪ್ರಚೋದನೆ ನೀಡಿದಂತೆ. ಇದು ಸಾಮಾನ್ಯ ಜ್ಞಾನ. ಕಾಮ ಪ್ರಚೋದನೆ ತಡೆದುಕೊಳ್ಳಲಾಗದವರು ಅತ್ಯಾಚಾರ ಮಾಡುತ್ತಾರೆ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಮ್ರಾನ್ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. 

click me!