ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ವಿರುದ್ಧ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿರಂತರ ಆರೋಪಗಳನ್ನು ಮಾಡಿದ ಬೆನ್ನಲ್ಲೇ, ಈಗ ಭಾರತದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವಂತೆ ತನ್ನ ದೇಶದಲ್ಲಿನ ಸಿಖ್ ಸಮುದಾಯಕ್ಕೆ ಕೆನಡಾ ಪೊಲೀಸರು ಕರೆ ನೀಡಿದ್ದಾರೆ.
ಒಟ್ಟಾವಾ (ಅ.17): ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ವಿರುದ್ಧ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿರಂತರ ಆರೋಪಗಳನ್ನು ಮಾಡಿದ ಬೆನ್ನಲ್ಲೇ, ಈಗ ಭಾರತದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವಂತೆ ತನ್ನ ದೇಶದಲ್ಲಿನ ಸಿಖ್ ಸಮುದಾಯಕ್ಕೆ ಕೆನಡಾ ಪೊಲೀಸರು ಕರೆ ನೀಡಿದ್ದಾರೆ. ತನ್ಮೂಲಕ ಭಾರತದ ವಿರುದ್ಧ ಬಹಿರಂಗವಾಗಿ ಕುಮ್ಮಕ್ಕು ನೀಡಲಾರಂಭಿಸಿದ್ದಾರೆ. ಇದು ಈಗಾಗಲೇ ಉಭಯ ದೇಶಗಳ ನಡುವೆ ಹಳಸಿರುವ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ.
ರೇಡಿಯೋ ಕೆನಡಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಮೈಕ್ಡುಹೆಮೆ, ಭಾರತ ಸರ್ಕಾರದ ಏಜೆಂಟ್‌ಗಳು ಕೆನಡಾದಲ್ಲಿ ವ್ಯಾಪಕ ಹಿಂಸಾ ಕೃತ್ಯಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಸಂಬಂಧ ನಡೆಯುತ್ತಿರುವ ತನಿಖೆ ಬಗ್ಗೆ ಅರಿವು ಹೊಂದಿರುವ ಸಿಖ್ ಸಮುದಾಯದ ಜನರು ಬಹಿರಂಗವಾಗಿ ಹೇಳಿಕೆ ನೀಡಬೇಕು ಎಂದು ಅವರು ಕೋರಿದ್ದಾರೆ. ಭಾರತೀಯ ರಾಜತಾಂತ್ರಿಕ ಹಾಗೂ ದೂತಾವಾಸ ಅಧಿಕಾರಿಗಳು ಕೊಲೆ, ಸುಲಿಗೆ, ಬೆದರಿಕೆಯಂತಹ ಕೃತ್ಯಗಳ ಜತೆನಂಟು ಹೊಂದಿದ್ದಾರೆ.
undefined
ಕೆನಡಿಯನ್ನರು ಹಾಗೂ ಕೆನಡಾದಲ್ಲಿ ನೆಲೆಸಿರುವವರ ವಿರುದ್ದ ಈ ಕೃತ್ಯಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ಕೆನಡಾದ ಸಾರ್ವಜನಿಕ ಭದ್ರತೆಗೆ ಅಪಾಯ ತರುವಂತಿದೆ ಎಂದು ಆಪಾದಿಸಿದ್ದಾರೆ. ಸೋಮವಾರವೂ ಪತ್ರಿಕಾಗೋಷ್ಠಿಯಲ್ಲಿ ಮಾತಾ ಡಿದ್ದ ಮೈಕ್ ಡುಹೆಮೆ ಭಾರತ ಸರ್ಕಾರ ಮತ್ತು ಭಾರತದ ರಾಜತಾಂತ್ರಿಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ಭಾರತ ಸರ್ಕಾರದ ಏಜೆಂಟರು, ಕೆನಡಾದಲ್ಲಿನ ದಕ್ಷಿಣ ಏಷ್ಯರನ್ನು ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಬೆಂಬಲಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ' ಎಂದು ದೂರಿದ್ದರು.
ರಾಯಭಾರಿಗಳ ಬಳಸಿ ನಮ್ಮ ಮೇಲೆ ಭಾರತ ದಾಳಿ ಸಂಚು: ಕೆನಡಾ ಪ್ರಧಾನಿ ಟ್ರುಡೋ
ಜೊತೆಗೆ 'ಕೆನಡಾದಲ್ಲಿ ನಡೆದ ಸಾಕಷ್ಟು ಹಿಂಸಾತ್ಮಕ ದಾಳಿಗಳು ಮತ್ತು ನರಹತ್ಯೆಯಲ್ಲಿ ಈ ಏಜೆಂಟರು ನೇರ ಭಾಗಿಯಾಗಿದ್ದಾರೆ. ಈ ದಾಳಿಕೋರರು ಸಂಘಟಿತ ಅಪರಾಧಿಕ ಶಕ್ತಿಗಳು. ಲಾರೆನ್ಸ್ ಬಿಟ್ಟೋಯಿ ಗ್ಯಾಂಗ್ ಜೊತೆಗೆ ಭಾರತದ ಏಜೆಂಟ್‌ಗಳ ನಂಟಿದೆ ಎಂಬುದು ನಮ್ಮ ನಂಬಿಕೆ' ಎಂದು ಹೇಳಿದ್ದರು. ಈ ಎಲ್ಲಾ ಆರೋಪಗಳನ್ನು ಭಾರತ ಸರ್ಕಾರ ಸಾರಸಗಟಾಗಿ ತಿರಸ್ಕರಿಸಿತ್ತು. ಜತೆಗೆ ಇಂಥ ಆರೋಪ-ಪ್ರತ್ಯಾರೋಪದ ಬೆನ್ನಲ್ಲೇ ಭಾರತ ಮತ್ತು ಕೆನಡಾ ದೇಶಗಳು ಪರಸ್ಪರ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಲಾ 6 ರಾಜತಾಂತ್ರಿಕ ಸಿಬ್ಬಂದಿಗಳನ್ನು ಉಚ್ಚಾಟಿಸಿದ್ದವು.