ಸ್ಟಾರ್‌ಬಕ್ಸ್‌ ಮುಂದೆ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಂದ ಭಾರತೀಯ

By Anusha KbFirst Published Mar 29, 2023, 5:32 PM IST
Highlights

ಇಷ್ಟು ದಿನ ವಿದೇಶಗಳಲ್ಲಿ ಭಾರತೀಯರು ಗುಂಡಿನ ದಾಳಿಗೆ ಬಲಿಯಾದ, ಹಲ್ಲೆಗೊಳಗಾದ ಪ್ರಕರಣಗಳು ಕೇಳಿ ಬಂದಿದ್ದವು. ಆದರೆ ಈಗ ವಿದೇಶದಲ್ಲಿ ಭಾರತೀಯನೋರ್ವ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ವ್ಯಾಂಕೋವರ್‌: ಇಷ್ಟು ದಿನ ವಿದೇಶಗಳಲ್ಲಿ ಭಾರತೀಯರು ಗುಂಡಿನ ದಾಳಿಗೆ ಬಲಿಯಾದ, ಹಲ್ಲೆಗೊಳಗಾದ ಪ್ರಕರಣಗಳು ಕೇಳಿ ಬಂದಿದ್ದವು. ಆದರೆ ಈಗ ವಿದೇಶದಲ್ಲಿ ಭಾರತೀಯನೋರ್ವ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕೆನಡಾದ ವ್ಯಾಂಕೋವರ್‌ನಲ್ಲಿ  ಭಾರತೀಯನೋರ್ವ 37 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈತನ ವಿರುದ್ಧ 2ನೇ ಹಂತದ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಯುವಕನನ್ನು 32 ವರ್ಷದ ಇಂದ್ರದೀಪ್ ಸಿಂಗ್ ಘೋಷಲ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. 

37 ವರ್ಷದ ಪಾಲ್ ಸ್ಟಾನ್ಲಿ ಸ್ಮಿತ್ ಕೊಲೆಯಾದ ವ್ಯಕ್ತಿ  ಭಾನುವಾರ ಸಂಜೆ 5:40 ರ ಸುಮಾರಿಗೆ ಈ ಘಟನೆ ನಡೆದಿದೆ. ಗ್ರಾನ್‌ವಿಲ್ಲೆ ಮತ್ತು ವೆಸ್ಟ್ ಪೆಂಡರ್ ಬೀದಿಗಳ ಮೂಲೆಯಲ್ಲಿರುವ ಕೆಫೆಯ ಹೊರಗೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಇಂದ್ರದೀಪ್ ಸಿಂಗ್ ಘೋಷಲ್  ಕೆನಡಾ ಪ್ರಜೆ   ಪಾಲ್ ಸ್ಟಾನ್ಲಿ ಸ್ಮಿತ್‌ನನ್ನು ಇರಿದು ಕೊಂದಿದ್ದಾನೆ. ಚೂರಿ ಇರಿತಕ್ಕೊಳಗಾದ ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 

ಅಮೆರಿಕಾದ ಗುರುದ್ವಾರದಲ್ಲಿ ಗುಂಡಿನ ದಾಳಿ: NRI ಸೇರಿ ಇಬ್ಬರಿಗೆ ಗಾಯ

ಘಟನೆಗೆ ಸಂಬಂಧಿಸಿದಂತೆ ಸ್ಮಿತ್ ತಾಯಿ  ಕ್ಯಾಥಿ (Kathy) ಪ್ರತಿಕ್ರಿಯಿಸಿದ್ದು, ಆತ ತನ್ನ ಪತ್ನಿ ಹಾಗೂ ಪುಟ್ಟ ಮಗಳೊಂದಿಗೆ ಸ್ಟಾರ್‌ಬಕ್ಸ್‌ಗೆ ತೆರಳಿದ್ದ, ಆತ ತನ್ನ ಪತ್ನಿ ಹಾಗೂ ಮಗಳಿಗಾಗಿಯೇ ಜೀವಿಸುತ್ತಿದ್ದ ಆತನ ಪಾಲಿಗೆ ಅವರೇ ಪ್ರಪಂಚವಾಗಿದ್ದರು. ಆದರೆ ಈ ಕೊಲೆಗಡುಕನಿಂದ ಹಲವರ ಬದುಕು ಸರ್ವನಾಶವಾಗಿದೆ ಎಂದು ಕ್ಯಾಥಿ ಹೇಳಿದ್ದಾರೆ.  ಕೊಲೆಗೆ ಕಾರಣವಾದ ಅಂಶಗಳ ಬಗ್ಗೆ ತಿಳಿಯಲು ಪೊಲೀಸರು ಹೆಚ್ಚಿನ ಸಾಕ್ಷ್ಯ (witnesses) ಸಂಗ್ರಹಿಸುತ್ತಿದ್ದಾರೆ. ಅಲ್ಲಿ ಏನಾಯಿತು ಎಂದು ಹೇಳಲು ಗಮನಾರ್ಹ ಸಾಕ್ಷ್ಯಗಳಿವೆ. ಆದರೆ ಏಕೆ ಆಯಿತು ಎಂಬ ಬಗ್ಗೆ ನಾವು ಗಮನ ಕೇಂದ್ರಿಕರಿಸುತ್ತಿದ್ದೇವೆ ಎಂದು ವ್ಯಾಂಕೋವರ್ ಪೊಲೀಸ್ ವಕ್ತಾರ ಸಾರ್ಜೆಂಟ್  ಸ್ಟೀವ್ ಅಡಿಸನ್ (Steve Addison) ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ವಿಮಾನ ಪತನ: ಭಾರತೀಯ ಮೂಲದ ಮಹಿಳೆ ಸಾವು, ಮಗಳ ಸ್ಥಿತಿ ಗಂಭೀರ

ಪತ್ನಿ ಮಕ್ಕಳನ್ನು ಕೊಲ್ಲಲು ಹೋಗಿ ತಾನೇ 300 ಅಡಿ ಪ್ರಪಾತಕ್ಕೆ ಬಿದ್ದ NRI

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಐಷಾರಾಮಿ ಟೆಸ್ಲಾ ಕಾರಿನಲ್ಲಿ ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಕಾರನ್ನು ರಭಸವಾಗಿ ಚಲಾಯಿಸಿ ಎತ್ತರದ ಪ್ರದೇಶದಿಂದ 250-300 ಅಡಿ ಕೆಳಗೆ ಬೀಳಿಸಿದ್ದಾನೆ. ಆದರೆ ಘಟನೆಯಲ್ಲಿ ಎಲ್ಲರೂ ಸುದೈವವಶಾತ್‌ ಪಾರಾಗಿದ್ದಾರೆ. ಇದೆ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕೊಲೆ ಯತ್ನ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದಡಿ ಕಾರು ಚಾಲನೆ ಮಾಡುತ್ತಿದ್ದ ಧರ್ಮೇಶ್‌ ಎ ಪಟೇಲ್‌ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ಕೂಡಲೇ ಕಾರಿನಲ್ಲಿದ್ದ 4 ವರ್ಷದ ಹೆಣ್ಣು ಮತ್ತು 9 ವರ್ಷದ ಗಂಡು ಮಕ್ಕಳು ಸೇರಿ ದಂಪತಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗಿದೆ. ಇಷ್ಟುಎತ್ತರದಿಂದ ಕಾರು ಬಿದ್ದರೂ ಪ್ರಾಣಾಪಾಯದಿಂದಾಗಿ ಪಾರಾಗಿದ್ದು ಆಶ್ಚರ್ಯವೆಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಧರ್ಮೇಶ್‌ ವರ್ತನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

click me!