ಕಾಬೂಲ್(ಆ.26): ಆಫ್ಘಾನಿಸ್ತಾನ ಇದೀಗ ಅಕ್ಷರಶಃ ನಕರ ದೇಶವಾಗಿ ಮಾರ್ಪಟ್ಟಿದೆ. ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲ, ಆದಾಯದ ಮೂಲ ಹೊಂದಿರುವ ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಕಣಿವೆ, ನದಿ, ಸರೋವರ ಸೇರಿದಂತೆ ಅತ್ಯಂತ ಸುಂದರ ದೇಶವೊಂದು ಉಗ್ರರ ಅಧಿಪತ್ಯದಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೀರು, ಆಹಾರ ತಿನಿಸುಗಳ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿದೆ.
ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!
undefined
ಆಫ್ಘಾನಿಸ್ತಾನ ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರರು ಸರ್ಕಾರವನ್ನೇ ಕಿತ್ತೊಗೆದಿದ್ದಾರೆ. ಆಡಳಿತವಿಲ್ಲ, ಜನರಿಗೆ ಆಹಾರ, ನೀರೂ ಇಲ್ಲ. ಜನ ಆಫ್ಘಾನಿಸ್ತಾನ ತೊರೆಯಲು ಹಾತೊರೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಯತ್ನ ಮಾಡುತ್ತಿದ್ದಾರೆ. ಉಗ್ರರ ಆಡಳಿತದಲ್ಲಿ ಬಂದೂಕಿನ ಸದ್ದು ಹೊರತು ಪಡಿಸಿದರೆ ಆಡಳಿತ, ದೇಶದ ಪರಿಸ್ಥಿತಿ ಸುಧಾರಿಸುವ ಯಾವುದೇ ನಿರ್ಧಾರಗಳಿಲ್ಲ. ಶರಿಯಾ ಕಾನೂನು ಪಾಲನೆಯೇ ಪ್ರಮುಖ ಗುರಿಯಾಗಿದೆ. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲಿ ನೀರಿನ ಬೆಲೆ 3,000 ರೂಪಾಯಿ ಆಗಿದ್ದರೆ, ಒಂದು ಪ್ಲೇಟ್ ಊಟದ ಬೆಲೆ 7,400 ರೂಪಾಯಿ ಆಗಿದೆ.
ರಾಯಟರ್ಸ್ ಸುದ್ದಿ ಸಂಸ್ಥೆ ಅಫ್ಘಾನಿಸ್ತಾನದಲ್ಲಿನ ನೈಜ ಪರಿಸ್ಥಿತಿ ಕುರಿತು ವರದಿ ಮಾಡಿದೆ. ಈ ವರದಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ತಿನಿಸುಗಳ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿರುವುದನ್ನು ಹೇಳಿದೆ. ಇಷ್ಟೇ ಅಲ್ಲ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರಕ್ಕೆ ಆಫ್ಘಾನ್ ಹಣ ಸ್ವೀಕರಿಸುತ್ತಿಲ್ಲ. ಕೇವಲ ಅಮೆರಿಕ ಡಾಲರ್ ಮಾತ್ರ ಸ್ವೀಕರಿಸಲಾಗುತ್ತಿದೆ.
ಮನೆ ಮನೆಗೆ ತೆರಳಿ ಹೆಣ್ಣು ಮಕ್ಕಳ ಹೊತ್ತೊಯ್ದು ಮದುವೆ; ತಾಲಿಬಾನ್ ಕ್ರೌರ್ಯ ಬಿಚ್ಚಿಟ್ಟ ಪತ್ರಕರ್ತ!
ಸಾಮಾನ್ಯ ಜನ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಅಮೆರಿಕ ಸೈನಿಕರ ಬಳಿಕ ನೀರು ಪಡೆಯುತ್ತಿದ್ದಾರೆ. ಆಹಾರಕ್ಕೆ ಅಂಗಲಾಚುತ್ತಿದ್ದಾರೆ. ಮಕ್ಕಳು ಹಸಿವಿನಿಂದ ಕುಸಿದು ಬೀಳುತ್ತಿರುವ ದೃಶ್ಯಗಳು ಘನಘೋರ ಎಂದು ರಾಯಟರ್ಸ್ ಸುದ್ಧಿ ಸಂಸ್ಥೆ ವರದಿ ಮಾಡಿದೆ. ಹಲವರು ಬಳಲಿದ್ದಾರೆ. ಒಂದೆಡೆ ಉಗ್ರರ ಗುಂಡೇಟಿನಿಂದ ಆಫ್ಘಾನಿಸ್ತಾನ ಜನ ಸಾಯುತ್ತಿದ್ದಾರೆ, ಮತ್ತೊಂದೊಂಡೆ ಆಹಾರ, ನೀರಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Afghan Fazl-ur-Rehman said food and water were sold at exorbitant prices at Kabul airport. ‘One bottle of water is selling for $40 and plate of rice for $100, and not Afghani (currency) but dollars. That is out of reach for common people,’ he said https://t.co/KczQEMm2nB pic.twitter.com/UBmaAQumXP
— Reuters (@Reuters)ದೇಶ ತೊರೆಯಲು ಹಾತೊರೆಯುತ್ತಿರುವ ಬರೋಬ್ಬರಿ 2.5 ಲಕ್ಷ ಮಂದಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಶೇಕಡಾ 4 ರಿಂದ 6 ಮಂದಿಗೆ ಮಾತ್ರ ಆಹಾರ, ನೀರು ಖರೀದಿಸುವ ಆರ್ಥಿಕ ಶಕ್ತಿ ಇದೆ. ಇನ್ನುಳಿದ ಮಂದಿ ಹಸಿವಿನಿಂದಲೇ ಬಳಲಿ ಬೆಂಡಾಗಿದ್ದಾರೆ.