91ರ ಪತ್ನಿ, 23ರ ಪತಿ, ಹನಿಮೂನ್‌ಗೆ ಹೋದಾಗ ಆಗಿದ್ದೇನು? ಸತ್ಯ ತಿಳಿದು ಪೊಲೀಸ್‌ ಶಾಕ್‌

By Roopa Hegde  |  First Published Nov 22, 2024, 6:10 PM IST

ಅರ್ಜೆಂಟೀನಾದಲ್ಲಿ ವಿಚಿತ್ರ ಪ್ರೇಮ ಕಥೆಯೊಂದು ನಡೆದಿತ್ತು. 91 ವರ್ಷದ ವೃದ್ಧೆ 23 ವರ್ಷದ ಯುವಕನ ಜೊತೆ ಮದುವೆ ಆಗಿದ್ದಳು. ಅದಕ್ಕೆ ನೀಡಿದ್ದ ಕಾರಣ ಅಚ್ಚರಿ ಹುಟ್ಟಿಸುವಂತಿದೆ. 
 


ಮದುವೆ (Marriage) ಹಾಗೂ ವಯಸ್ಸು (age) ಈ ಎರಡಕ್ಕೂ ಈಗ ಸಂಬಂಧವಿಲ್ಲ. 10 -12 ವರ್ಷ ವಯಸ್ಸಿನ ಅಂತರ ಇರೋರು ಮದುವೆ ಆಗ್ತಿದ್ದ ಕಾಲ ಈಗಿಲ್ಲ. ಈಗೇನಿದ್ರೂ 30, 50 ವರ್ಷ ಅಂತರವಿರುವ ಜೋಡಿ ಮದುವೆ ಆಗ್ತಿದ್ದಾರೆ. ಇಲ್ಲೊಂದು ದಂಪತಿ ಮಧ್ಯೆ ಬರೋಬ್ಬರಿ 68 ವರ್ಷ ಅಂತರವಿತ್ತು. ಪತ್ನಿ ವಯಸ್ಸು 91 ವರ್ಷವಾದ್ರೆ ಪತಿ ವಯಸ್ಸು 23. ಇಬ್ಬರೂ ಒಪ್ಪಿಗೆ ಮೇರೆಗೆ ಮದುವೆ ಆದ್ರು. ಆದ್ರೆ ಹನಿಮೂನ್ ನಲ್ಲಿ ಎಲ್ಲವೂ ಬದಲಾಯ್ತು. ಹನಿಮೂನ್ (honeymoon)ಗೆ ಹೋಗಿದ್ದ ಮಹಿಳೆ ಸಾವನ್ನಪ್ಪಿದ್ಲು. ಇದಕ್ಕೆ ಪತಿ ಕಾರಣ ಅಂತ ಪೊಲೀಸರು ಅನುಮಾನಿಸಿದ್ರು. ಆದ್ರೆ ಪತಿ ಹೇಳಿದ ಮಾತು ಕೇಳಿ ಎಲ್ಲರೂ ದಂಗಾಗಿದ್ದಾರೆ. 

ಸ್ನೇಹಿತೆ ಮಗನನ್ನೇ ಮದುವೆಯಾಗಿದ್ದ ಅಜ್ಜಿ : ಘಟನೆ ನಡೆದಿರೋದು ಅರ್ಜೆಂಟೀನಾ (Argentina)ದಲ್ಲಿ. ಇಲ್ಲಿನ 91 ವರ್ಷದ ಮಹಿಳೆ ತನ್ನ ಸ್ನೇಹಿತೆ ಮನೆಯಲ್ಲಿ ವಾಸವಾಗಿದ್ದಳು. ಸ್ನೇಹಿತೆ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಹಾಗಾಗಿ ಸ್ನೇಹಿತೆಗೆ ತನ್ನ ಪಿಂಚಣಿಯ ಸ್ವಲ್ಪ ಹಣವನ್ನು ಕೂಡ ಕೊಡ್ತಾ ಇದ್ಲು. ಕಣ್ಣೆದುರಲ್ಲೇ ಬೆಳೆಯುತ್ತಿದ್ದ ಸ್ನೇಹಿತೆ ಮಗನನ್ನು  ವೃದ್ಧೆ ಮದುವೆ ಆದ್ಲು. 

Tap to resize

Latest Videos

ಬ್ರೇಕ್ಅಪ್ ನಂತ್ರ ಪ್ರತಿ ನಿಮಿಷಕ್ಕೆ 1 ರೂ. ಗೂಗಲ್ ಪೇ ಮಾಡ್ತಿದ್ದಾನೆ ಎಕ್ಸ್ !

ಹನಿಮೂನಲ್ಲಿ ನಡೀತು ದುರ್ಘಟನೆ : ಮದುವೆಯಾದ ಜೋಡಿ ಹನಿಮೂನ್ಗೆ ಹೋಗಿದ್ದರು. ಈ ಸಮಯದಲ್ಲಿ ವೃದ್ಧ ಮಹಿಳೆ ಸಾವನ್ನಪ್ಪಿದ್ದಾಳೆ. ಆಕೆ  ನಿಧನದ ನಂತ್ರ ಪತಿ, ಪಿಂಚಣಿ (pension) ಹಣ ಪಡೆಯಲು ಬಂದಿದ್ದಾನೆ. ಆಗ ಅನುಮಾನಗೊಂಡ ಪೊಲೀಸರು, ಯುವಕನ ವಿರುದ್ಧ ದೂರು ದಾಖಲಿಸಿದ್ರು. ಯುವಕನ ವಿಚಾರಣೆ ಶುರು ಮಾಡಿದ್ರು. ವೃದ್ಧ ಮಹಿಳೆ ಪಿಂಚಣಿ ಆಸೆಗೆ ಯುವಕ ಆಕೆಯನ್ನು ಮದುವೆಯಾಗಿದ್ದ. ಹನಿಮೂನ್ನಲ್ಲಿ ಹತ್ಯೆ ಮಾಡಿದ್ದಾನೆ ಎಂಬೆಲ್ಲ ಆರೋಪ ಯುವಕನ ಮೇಲೆ ಬಂತು. ಪೊಲೀಸರು ಯುವಕನನ್ನು ಜೈಲಿ (prison)ಗೆ ಕಳುಹಿಸಲು ಎಲ್ಲ ತಯಾರಿ ಮಾಡಿದ್ದರು. ಇನ್ನೇನು ಜೈಲು ಸಮೀಪವಾಗ್ತಿದೆ ಎಂದಾಗ ಯುವಕ ಸತ್ಯ ಹೇಳಿದ್ದಾನೆ.

ಹೇಗೆ ಶುರುವಾಯ್ತು ಲವ್ ಸ್ಟೋರಿ (Love Story) : ಪೊಲೀಸ್ ಮುಂದೆ ಯುವಕ ಎಲ್ಲ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಮೊದಲೇ ಹೇಳಿದಂತೆ ಯುವಕನ ಕುಟುಂಬ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಅದೇ ಮನೆಯಲ್ಲಿದ್ದ ವೃದ್ಧೆಗೆ ಎಲ್ಲವೂ ತಿಳಿದಿತ್ತು. ಸ್ನೇಹಿತೆ ಮನೆ ಖರ್ಚಿಗೆ ಮಾತ್ರವಲ್ಲದೆ ಈ ಯುವಕನ ಶಿಕ್ಷಣಕ್ಕೂ ವೃದ್ಧೆ ಹಣ ನೀಡಿದ್ದಳು. ತಾನು ಸಾವನ್ನಪ್ಪಿದ್ರೆ ಪಿಂಚಣಿ ಬರೋದು ನಿಲ್ಲುತ್ತದೆ. ಇದ್ರಿಂದ ಯಾರಿಗೂ ಪ್ರಯೋಜನವಿಲ್ಲ. ಅದೇ ನಾನು ಮದುವೆಯಾದ್ರೆ ಈ ಹಣ, ಅಗತ್ಯವಿರುವವರಿಗೆ ಸೇರುತ್ತದೆ ಎಂದು ವೃದ್ಧೆ ಆಲೋಚನೆ ಮಾಡಿದ್ದಳು. ಇದೇ ಉದ್ದೇಶದಿಂದ ಆಕೆ ಯುವಕನಿಗೆ ಮದುವೆ ಪ್ರಪೋಸಲ್ ಇಟ್ಟಿದ್ದಳಂತೆ. ಯುವಕ ಇದಕ್ಕೆ ಒಪ್ಪಿದ್ದ. ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಮದುವೆ ನಡೆದಿತ್ತು. 

ಬಾಲ್ಯ ಸ್ನೇಹಿತರನ್ನೇ ಜೀವನ ಸಂಗಾತಿ ಮಾಡ್ಕೊಳೋದು ಬೆಸ್ಟ್… ಯಾಕ್ ಗೊತ್ತಾ?

ಕೊನೆಗೂ ಸಿಗಲಿಲ್ಲ ಹಣ : ವೃದ್ಧೆ, ಸ್ನೇಹಿತೆ ಮನೆಗೆ ಸಹಾಯ ಮಾಡುವ ಉದ್ದೇಶದಿಂದ ಯುವಕನನ್ನು ಮದುವೆ ಆಗಿದ್ದಳು. ಆದ್ರೆ ಹನಿಮೂನ್ಗೆ ಹೋಗಿದ್ದ ವೇಳೆ ಸಹಜವಾಗಿ ಸಾವನ್ನಪ್ಪಿದ್ದಾಳೆ. ಪೊಲೀಸರು ಮಾತ್ರ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದು ಯುವಕ ಹೇಳ್ತಿದ್ದಾನೆ. ಕಾನೂನು ಹೋರಾಟದ ನಂತ್ರ ಯುವಕನಿಗೆ ಜೈಲಿನಿಂದ ಮುಕ್ತಿ ಏನೋ ಸಿಕ್ಕಿದೆ. ಆದ್ರೆ ವೃದ್ಧ ಮಹಿಳೆ ಆಸೆ ಈಡೇರಿಲ್ಲ. ಯುವಕನಿಗೆ ಪಿಂಚಣಿ ಹಣ ನೀಡಲು ಸರ್ಕಾರ ನಿರಾಕರಿಸಿದೆ. ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಇಂಥ ಮದುವೆ ಕಾಮನ್ ಆಗಿದೆ. ಹಣವಿರುವ ಹಿರಿಯ ವ್ಯಕ್ತಿ ಜೊತೆ ಮದುವೆ ಆಗಲು ಯುವಕರು ಮುಂದೆ ಬರ್ತಿದ್ದಾರೆ. ಇಲ್ಲಿ ಮಾತ್ರ ವೃದ್ಧೆಯೇ  ಮದುವೆಗೆ ಮುಂದಾಗಿದ್ದು ವಿಶೇಷ. 
 

click me!