ಮುಟ್ಟಿನ ಸಮಯದಲ್ಲಿ ಕಾಡುವ ಬ್ರೌನ್ ಡಿಸ್ಜಾರ್ಜಿಗೇನು ಕಾರಣ?

By Suvarna News  |  First Published Oct 31, 2023, 2:22 PM IST

ಮುಟ್ಟು ನೈಸರ್ಗಿಕ ಕ್ರಿಯೆಯಾದ್ರೂ ಪ್ರತಿ ತಿಂಗಳು ಮಹಿಳೆ ಒಂದೊಂದು ಸವಾಲನ್ನು ಎದುರಿಸಬೇಕಾಗುತ್ತದೆ. ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಬ್ಲೀಡಿಂಗ್ ಕಡಿಮೆ ಆಗೋದು, ಹೆಚ್ಚಾಗೋದು ಹೀಗೆ ಸಾಕಷ್ಟು ಬದಲಾವಣೆಯಲ್ಲಿ ಕಂದು ಡಿಸ್ಜಾರ್ಜ್ ಕೂಡ ಒಂದು. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.
 


ನಮ್ಮ ದೇಹದಲ್ಲೆ ಅಚಾನಕ್ ಬದಲಾವಣೆಗಳಾಗ್ತಿರುತ್ತವೆ. ಬೆಳಿಗ್ಗೆ ಮೂಗಿನಲ್ಲಿ ರಕ್ತ ಬರೋದು, ಬೆಳಿಗ್ಗೆ ಆರಾಮವಾಗಿದ್ದ ನಿಮಗೆ ಮಧ್ಯಾಹ್ನದ ವೇಳೆಗೆ ಜ್ವರ ಬಂದಿರೋದು ಇಲ್ಲವೆ ಕೈ – ಕಾಲು ಸೇರಿದಂತೆ ದೇಹದ ಯಾವುದೋ ಭಾಗ ಊದಿಕೊಳ್ಳೋದು. ಇಂಥ ಬದಲಾವಣೆ ನಿಮಗೆ ಭಯ ಹುಟ್ಟಿಸೋದು ಸಾಮಾನ್ಯ. ಈ ಅಚಾನಕ್ ರೋಗ ಅಥವಾ ಬದಲಾವಣೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಮಹಿಳೆಯರಲ್ಲಿ ಹೆಚ್ಚಿನ ಹಾರ್ಮೋನ್ ಬದಲಾವಣೆಯಾಗುವ ಕಾರಣ ಒಂದಲ್ಲ ಒಂದು ಸಮಸ್ಯೆಯನ್ನು ಅವರು ಎದುರಿಸುತ್ತಿರುತ್ತಾರೆ. ಮುಟ್ಟಿನ ಸಮಯ ಬಂದಾಗ ಈ ಬದಲಾವಣೆಗಳು ಹೆಚ್ಚು. ಈ ಬಾರಿ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಂಡ ಹಾರ್ಮೋನ್ ಏರುಪೇರು ಮುಂದಿನ ಬಾರಿ ಬೇರೆ ರೀತಿ ಕಾಣಿಸಿಕೊಳ್ಳಬಹುದು. ಮುಟ್ಟಿನ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಕೆಲವರಿಗೆ ಕಂದು ಅಥವಾ ಕಪ್ಪು ಬಣ್ಣದ ಡಿಸ್ಜಾರ್ಜ್ ಆಗುತ್ತದೆ. ಇದನ್ನು ನೋಡಿ ಕೆಲ ಮಹಿಳೆಯರು ಭಯಗೊಳ್ತಾರೆ. ಇದಕ್ಕೆ ಕಾರಣವೇನು? ವೈದ್ಯರ ಬಳಿ ತೋರಿಸಬೇಕಾ ಎಂಬ ಗೊಂದಲಕ್ಕೆ ಬೀಳ್ತಾರೆ. ನಾವಿಂದು ಪಿರಿಯಡ್ಸ್ ಸಮಯದಲ್ಲಿ ಆಗುವ ಕಂದು ಬಣ್ಣದ ಡಿಸ್ಜಾರ್ಜ್ ಗೆ ಕಾರಣವೇನು ಎಂಬುದನ್ನು ಹೇಳ್ತೇವೆ.

ಕಂದು (Brown) ಬಣ್ಣದ ಡಿಸ್ಜಾರ್ಜ್ ಅಂದ್ರೇನು? : ಯೋನಿಯಲ್ಲಿ ಉಳಿದಿರುವ ಕೆಲವು ಹಳೆಯ ರಕ್ತ (Blood) ವೇ ಕಂದು ಬಣ್ಣದ ಡಿಸ್ಜಾರ್ಜ್ ಎಂದು ತಜ್ಞರು ಹೇಳ್ತಾರೆ. ಇದು ಆಮ್ಲಜನಕದೊಂದಿಗೆ ಸಂಪರ್ಕಕ್ಕೆ ಬಂದಾಗ ಆಕ್ಸಿಡೀಕರಣಗೊಳ್ಳುತ್ತದೆ. ರಕ್ತದಲ್ಲಿ ಕಬ್ಬಿಣದ ಅಂಶ ಇರುವುದರಿಂದ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಮುಟ್ಟಿನ ಸಮಯದಲ್ಲಿ ಕಾಣುವ ಕೆಂಪು (Red) ರಕ್ತ ತಾಜಾ ರಕ್ತವಾಗಿದ್ದರೆ, ಕಂದು ಬಣ್ಣ ಹಳೆ ಬ್ಲಡ್ ಆಗಿರುತ್ತದೆ.

Latest Videos

undefined

ಮಕ್ಕಳು ಬಿಕ್ಕಿಳಿಸೋದು, ಅಳೋದು ಕಾಮನ್, ಹಾಗಂಥ ಹಸಿವಾಗಿದೆ ಎಂದರ್ಥವಲ್ಲ!

ಕಂದು ಬಣ್ಣದ ಡಿಸ್ಜಾರ್ಜ್ ಗೆ ಕಾರಣವೇನು? : ಮುಟ್ಟಿನ ನಂತ್ರ ಒಂದೆರಡು ದಿನ ಕಂದು ಬಣ್ಣದ ಡಿಸ್ಜಾರ್ಜ್ ಆಗ್ತಿದ್ದರೆ ಅದು ಒತ್ತಡದಿಂದ ಬರುತ್ತದೆ ಎಂದು ತಜ್ಞರು ಹೇಳ್ತಾರೆ. ಒತ್ತಡದಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಅದ್ರಲ್ಲಿ ಈ ಕಂದು ಬಣ್ಣದ ಡಿಸ್ಜಾರ್ಜ್ ಕೂಡ ಒಂದು. ಒತ್ತಡದಿಂದ ಹಾರ್ಮೋನ್ ನಲ್ಲಿ ಏರುಪೇರಾಗುತ್ತದೆ. ಹಾರ್ಮೋನ್ ಏರುಪೇರಿಗೆ ಪದೇ ಪದೇ ಪ್ರಯಾಣ, ಹವಾಮಾನ ಬದಲಾವಣೆ ಕೂಡ ಕಾರಣವಾಗುತ್ತದೆ.

ಒತ್ತಡದಿಂದ ಕಂದು ಬಣ್ಣದ ಡಿಸ್ಜಾರ್ಜ್ ಆಗ್ತಿದ್ದರೆ ಆತಂಕದ ಬದಲು ಒತ್ತಡದಿಂದ ದೂರವಿರುವ ಪ್ರಯತ್ನ ನಡೆಸಬೇಕು. ಕೆಲವೊಮ್ಮೆ ಒತ್ತಡವಲ್ಲದೆ ಗರ್ಭಾವಸ್ಥೆ, ಎಂಡೊಮೆಟ್ರಿಯೊಮಾ, ಫೈಬ್ರಾಯ್ಡ್, ಥೈರಾಯ್ಡ್ ಬೆಳವಣಿಗೆ, ಶ್ರೋಣಿಯ ಊತ, ಲೈಂಗಿಕವಾಗಿ ಹರಡುವ ಸೋಂಕು, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ, ಮುಟ್ಟು ನಿಲ್ಲುವ ಸಮಯದಲ್ಲೂ ಕಂದು ಬಣ್ಣದ ಡಿಸ್ಜಾರ್ಜ್ ಆಗುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೆ ಮುಟ್ಟಿನ ಸಮಯದಲ್ಲಿ ಹೆಚ್ಚು ಶ್ರಮದ ವ್ಯಾಯಾಮ ಮಾಡಿದ್ರೂ ಈ ಸಮಸ್ಯೆ ಕಾಡಬಹುದು ಎನ್ನುತ್ತಾರೆ ತಜ್ಞರು.

ಕೃಷಿಕರು ಮಾಡೋ ಈ ಕೆಲಸದಿಂದ ಅವರ ಆರೋಗ್ಯದ ಜೊತೆ ಪರಿಸರವೂ ಹಾಳು!

ವೈದ್ಯರನ್ನು ಯಾವಾಗ ಭೇಟಿಯಾಗಬೇಕು? : ಕಂದು ಬಣ್ಣದ ಡಿಸ್ಜಾರ್ಜ್ ಒಂದು ಬಾರಿ ಆಗಿದ್ರೆ ಆತಂಕಪಡಬೇಕಾಗಿಲ್ಲ. ಆದ್ರೆ ನಿರ್ಲಕ್ಷ್ಯ ಮಾಡಬಾರದು. ಎರಡು ಮೂರು ಬಾರಿ ಪಿರಿಯಡ್ಸ್ ಸಂದರ್ಭದಲ್ಲೂ ಕಂದು ಬಣ್ಣದ ಡಿಸ್ಜಾರ್ಜ್ ಆಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಹಾಗೆಯೇ ಅಲ್ಲಿ ತುರಿಕೆ, ಕಿರಿಕಿರಿಯಾಗ್ತಿದ್ದರೆ, ನೋವಾಗುತ್ತಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕಾಗುತ್ತದೆ.

ಮುಟ್ಟು ನಿಲ್ಲುವ ಸಮಯದಲ್ಲಿ ಅನೇಕ ಮಹಿಳೆಯರು ಕಂದು ಬಣ್ಣದ ಡಿಸ್ಜಾರ್ಜ್ ಗೆ ಒಳಗಾಗ್ತಾರೆ. ಹಾಗಂತ ಅದನ್ನೇ ನಂಬಿ ಕುಳಿತುಕೊಳ್ಳುವುದು ಸೂಕ್ತವಲ್ಲ. ಮುಟ್ಟು ನಿಲ್ಲುವ ಇತರ ಲಕ್ಷಣಗಳ ಬಗ್ಗೆ ನೀವು ಗಮನ ಹರಿಸಬೇಕು. ನಿಮಗೆ ೪೫ – ೫೦ ವರ್ಷವಾಗಿದ್ದು ಶುಷ್ಕವಾಗುವ ಯೋನಿ, ಮೂಡ್ ಸ್ವಿಂಗ್, ನಿದ್ರಾಹೀನತೆ ಎಲ್ಲ ಲಕ್ಷಣವಿದ್ರೆ ಅದನ್ನು ನೀವು ಮುಟ್ಟುನಿಲ್ಲುವ ಲಕ್ಷಣ ಎನ್ನಬಹುದು.  
 

click me!