No Bra! ಬ್ರಾ ಧರಿಸೋಕೆ ಇಷ್ಟವಿಲ್ಲದವರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು!

By Suvarna News  |  First Published Oct 26, 2023, 12:10 PM IST

ನೀವು ಬ್ರಾ ಧರಿಸಲು ಬಯಸುತ್ತೀರೋ ಇಲ್ಲವೋ, ನಿಮ್ಮ ಸ್ವಂತ ಸೌಕರ್ಯ ಮತ್ತು ದೈಹಿಕ ಅಗತ್ಯಗಳ ಆಧಾರದ ಮೇಲೆ ನಿಮ್ಮ ನಿರ್ಧಾರ ಮಾಡಬೇಕು. ಬ್ರಾ ಧರಿಸದಿದ್ದರೆ ಏನು ಪ್ರಯೋಜನ? ಧರಿಸಿದರೆ ಏನು? ಇಲ್ಲಿವೆ ತಿಳಿದುಕೊಳ್ಳಿ.


ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಮತ್ತು ಸ್ತ್ರೀವಾದದಲ್ಲಿ ಕೂಡ `No- Bra' ಎಂಬುದು ತುಂಬಾ ಚಾಲ್ತಿಯಲ್ಲಿದೆ. ತುಂಬಾ ನಟಿಯರು ಬ್ರಾ ಧರಿಸದೆ ಮೇಲಿನ ಉಡುಪು ಮಾತ್ರ ಧರಿಸಿ ಪೋಸ್‌ ಕೊಡುವುದನ್ನು ನೀವು ಗಮನಿಸಿರಬಹುದು. ಬ್ರಾ ಧರಿಸುವುದು ಅಥವಾ ಬಿಡುವುದು ವೈಯಕ್ತಿಕ ಆಯ್ಕೆ. ಇಡೀ ದಿನ ಬ್ರಾ ಧರಿಸಿದ ಬಳಿಕ ರಾತ್ರಿ ತೆಗೆದಿಡುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ.

ಇಲ್ಲಿ ಮುಖ್ಯವಾದುದು ಸ್ವಾತಂತ್ರ್ಯದ ಪ್ರಶ್ನೆ. ನೀವು ಬ್ರಾ ಧರಿಸಲು ಬಯಸುತ್ತೀರೋ ಇಲ್ಲವೋ, ನಿಮ್ಮ ಸ್ವಂತ ಸೌಕರ್ಯ ಮತ್ತು ದೈಹಿಕ ಅಗತ್ಯಗಳ ಆಧಾರದ ಮೇಲೆ ನಿಮ್ಮ ನಿರ್ಧಾರ ಮಾಡಬೇಕು. ಮಹಿಳೆಯನ್ನು ಬ್ರಾ ಧರಿಸಿಯೇ ಇರುವಂತೆ ಮಾಡುವ ಹಲವು ಮಿಥ್‌ಗಳು ಇವೆ. ಬ್ರಾ ಧರಿಸದಿದ್ದರೆ ಏನು ಪ್ರಯೋಜನ? ಧರಿಸಿದರೆ ಏನು? ಇಲ್ಲಿವೆ ತಿಳಿದುಕೊಳ್ಳಿ.

Latest Videos

undefined

ಬ್ರಾ ತೆಗೆದಿಡುವುದರಿಂದ ಪ್ರಯೋಜನಗಳು ಇವು

ಸೌಕರ್ಯ: ಅತ್ಯುತ್ತಮವಾಗಿ ಹೊಂದಿಕೊಳ್ಳುವ ಬ್ರಾ ಕೂಡ ಬಹಳ ದಿನದ ನಂತರ ಅಹಿತಕರವಾಗಿರುತ್ತದೆ. ಅಂಡರ್‌ವೇರ್‌ಗಳು ದುಃಸ್ವಪ್ನ. ಅವು ಚರ್ಮಕ್ಕೆ ಸ್ಟ್ರಾಪ್‌ ಉಂಟುಮಾಡುತ್ತವೆ. ಮನೆಗೆ ಬಂದಾಗ ಸ್ತನಬಂಧವನ್ನು ತೆಗೆದಾಗ ತಕ್ಷಣ ಹಾಯೆನಿಸುತ್ತದೆ. ಅಂದರೆ ಬ್ರಾಲೆಸ್ ಸ್ಥಿತಿ ನಿಮ್ಮನ್ನು ಹಿತವಾಗಿಡುತ್ತದೆ. ಅನೇಕ ಮಹಿಳೆಯರು ಒಮ್ಮೆ ಬ್ರಾ ರಹಿತವಾಗಿ ಹೋಗುವುದರಲ್ಲಿ ಸಂತೋಷ ಕಂಡರೆ, ತಮ್ಮ ದೇಹ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸೌಕರ್ಯವನ್ನು ಕಂಡುಕೊಳ್ಳುತ್ತಾರೆ.

ಉತ್ತಮ ರಕ್ತಪರಿಚಲನೆ (Blood Circulation): ಹೆಚ್ಚಿನ ಮಹಿಳೆಯರು ಗಂಟೆಗಳ ಕಾಲ ಬ್ರಾ ಧರಿಸಿದರೆ ಅವರ ಎದೆ ಮತ್ತು ಬೆನ್ನಿನ ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು. ಇದು ಬೆನ್ನು ಸ್ನಾಯುಗಳಿಗೆ ನೋವುಂಟುಮಾಡುತ್ತದೆ.

ಉತ್ತಮ ನಿದ್ರೆ: ಹಾಸಿಗೆಯಲ್ಲಿ ಬ್ರಾ ಧರಿಸುವ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಆ ಹೊರೆಯಿಂದ ನಿಮ್ಮನ್ನು ನೀವು ಬಿಡುಗಡೆ ಮಾಡಿಕೊಳ್ಳಿ. ನಂತರ ನೀವು ಉತ್ತಮ ರಾತ್ರಿಯ ನಿದ್ರೆಯನ್ನು ಪಡೆಯುತ್ತೀರಿ! ಹಾಲೆ ಬೆರ್ರಿ ಒಮ್ಮೆ ಸಂದರ್ಶನವೊಂದರಲ್ಲಿ ತಾನು 16 ವರ್ಷ ವಯಸ್ಸಿನಿಂದಲೂ ಪ್ರತಿ ರಾತ್ರಿ ಮಲಗುವಾಗ ಬ್ರಾ ಧರಿಸುತ್ತೇನೆ ಎಂದು ಒಪ್ಪಿಕೊಂಡಳು. ನಂಬಲು ಸಾಧ್ಯವೇ?

ಕಡಿಮೆ ಸ್ತನ ಬೆವರು: ಚರ್ಮದ ಮೇಲೆ ಚರ್ಮ ಸ್ಪರ್ಶಿಸುವಲ್ಲಿ ಬೆವರು ಉತ್ಪತ್ತಿಯಾಗುತ್ತದೆ. ಬ್ರಾದ ಕೆಳಭಾಗ ಕೂಡ ಅಂಥ ಜಾಗ. ಬ್ರಾ ಇಲ್ಲದಿದ್ದರೆ ಎಂದರೆ ನೀವು ಕಡಿಮೆ ಬೆವರಬಹುದು.

ಚರ್ಮದ ಆರೋಗ್ಯ (Skin Health): ಬ್ರಾಗಳು ಚರ್ಮದಿಂದ ಬೆವರು ಮತ್ತು ಕೊಳೆಯನ್ನು ಹೀರಿಕೊಳ್ಳುವುದರಿಂದ ಅವು ಚರ್ಮದ ಕಿರಿಕಿರಿ ಉಂಟುಮಾಡಬಹುದು. ಮೊಡವೆಗಳಿಗೂ ಕಾರಣವಾಗಬಹುದು. ಆ ಪ್ರದೇಶದಲ್ಲಿ ರಂದ್ರಗಳು ಮುಚ್ಚಿಹೋಗುತ್ತವೆ.

ಅಶ್ಲೀಲ ಅಲ್ಲ: ಸ್ತನಗಳು ಮೂಲತಃ ಲೈಂಗಿಕ ಪ್ರಚೋದಕಗಳಲ್ಲ. ಹಾಲುಣಿಸಲು ಹಾಲು ಉತ್ಪಾದಿಸುವುದು ಅವರ ಮುಖ್ಯ ಕಾರ್ಯ. ವಿಕ್ಟೋರಿಯನ್ ಬ್ರಿಟನ್‌ನಲ್ಲಿ ಮಹಿಳೆಯ ಪಾದಗಳು ಲೈಂಗಿಕ ಆಕರ್ಷಣೆಯಾಗಿದ್ದವಂತೆ. ಹಾಗೆ ಈಗ ಸ್ತನಗಳು. ಮಹಿಳೆಯ ಎದೆ ತುಂಬಾ ಕಾಣಿಸಿದರೆ ಅದರಲ್ಲಿ ಅಶ್ಲೀಲ, ಅಸಭ್ಯ ಎಂದು ತಿಳಿಯುವುದು ಸಾಂಸ್ಕೃತಿಕ ಸಂಗತಿ, ಇದನ್ನು ಸತತ ಪ್ರಯತ್ನದ ಮೂಲಕ ಮೀರಬೇಕು. ಬ್ರಾ ರಹಿತವಾಗಿ ಹೋಗುವುದು ಈ ದಾರಿಯಲ್ಲಿ ಒಂದು ಸಣ್ಣ ಹೆಜ್ಜೆ.

ಬ್ರಾ ಧಾರಣೆಯ ಮಿಥ್ಯೆಗಳು

ಬ್ರಾ ಕ್ಯಾನ್ಸರ್‌ಗೆ ಕಾರಣ: ಬ್ರಾ ದುಗ್ಧರಸವನ್ನು ನಿರ್ಬಂಧಿಸಿ ಕ್ಯಾನ್ಸರ್‌ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ಭಾವನೆ ಇದೆ. ಇದು ನಿಜ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸ್ತನ ಕ್ಯಾನ್ಸರ್ ಮತ್ತು ಬ್ರಾ ಧರಿಸುವುದರ ನಡುವೆ ಯಾವುದೇ ಅಧ್ಯಯನಗಳು ಯಾವುದೇ ಸಂಬಂಧವನ್ನು ತೋರಿಸಿಲ್ಲ.

ಬ್ರಾ ಇಲ್ಲದಿದ್ದರೆ ಸ್ತನಗಳು ಜೋತುಬೀಳುತ್ತವೆ: ಬ್ರಾಗಳು ವಯಸ್ಸಿನಿಂದಾಗಿ ಸಂಭವಿಸುವ ನೈಸರ್ಗಿಕ ಬದಲಾವಣೆಗಳನ್ನು ತಡೆಯಲು ಸಾಧ್ಯವಿಲ್ಲ.

ಬಟನ್ ಹಾಕದ ಪ್ರಿಯಾ ವಾರಿಯರ್, ಈಗ ಅರ್ಧ ಬ್ಲೌಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ!

ಬ್ರಾ ರಹಿತವಾಗಿ ಹೋಗುವುದು ಅಶ್ಲೀಲ: ಮೊದಲ ಬಾರಿಗೆ ಬ್ರಾಲೆಸ್ ಆಗಿ ಹೋಗುವವರಿಗೆ ಇದು ಸಾಮಾನ್ಯ ಆತಂಕ. ಪ್ರತಿಯೊಬ್ಬರೂ ತಕ್ಷಣವೇ ಗಮನಿಸುತ್ತಾರೆ ಮತ್ತು ನೀವು ಗಮನ ಸೆಳೆಯಲು ಆಶಿಸುತ್ತಿರುವಿರಿ ಎಂದು ಭಾವಿಸಬಹುದು. ಇದು ಸರಿಯಲ್ಲ. ಇದರಿಂದಾಗಿಯೇ ಅನೇಕ ಮಹಿಳೆಯರಿಗೆ ಬ್ರಾ ರಹಿತವಾಗಿ ಹಾಯಾಗಿರಲು ಕಷ್ಟವಾಗುತ್ತದೆ. ಸತ್ಯವೆಂದರೆ ಬ್ರಾ ಧರಿಸದ ಮಹಿಳೆ ಬ್ರಾ ಧರಿಸದ ಪುರುಷನಂತೆಯೇ ಇರುತ್ತಾಳೆ.

ಇದನ್ನು ಮರೆಯಬೇಡಿ
- ಬ್ರಾಲೆಸ್‌ (Braless) ಆಗಲು ಆರಂಭಿಸುವವರು ಮೊದಲು ಮನೆಯಲ್ಲಿ ಇದನ್ನು ಪ್ರಯತ್ನಿಸಿ. ನಂತರ ವಾಕಿಂಗ್‌, ಇತ್ಯಾದಿ.
- ನಿಲುವ ಹಾಗೂ ಕೂರುವುದರಲ್ಲಿ ಉತ್ತಮ ಭಂಗಿಯು ಬೆನ್ನು ನೋವನ್ನು ನಿವಾರಿಸುತ್ತದೆ ಮತ್ತು ಬ್ರಾದ ಬೆಂಬಲದ ಅಗತ್ಯವನ್ನು ಕಡಿಮೆ ಮಾಡುತ್ತದೆ.
- ವ್ಯಾಯಾಮ (Exercise) ಮಾಡುವಾಗ ಬ್ರಾಲೆಸ್ ಆಗಿರಬೇಡಿ. ಸ್ತನದ ಆಂತರಿಕ ರಚನೆಗೆ ಹಾನಿಯಾಗದಂತೆ ತಡೆಯಲು ಬ್ರಾ ಬೆಂಬಲ ಬೇಕು.
- ದೊಡ್ಡ ಸ್ತನಗಳನ್ನು ಹೊಂದಿರುವವರು ಬ್ರಾ ಧರಿಸುವುದೇ ಹೆಚ್ಚು ಆರಾಮದಾಯಕವಾಗಬಹುದು.

ದುಡ್ಡು ಮಾಡಲು ಹೆಣ್ಣಿಗೆ ಹಲವು ಹಾದಿ ಇದೀಗ ಭೂತಗಳಿಂದ ಉದ್ಯೋಗ ಶುರು ಹಚ್ಕೊಂಡು ನಾರಿ!

click me!