20ನೇ ಹುಟ್ಟುಹಬ್ಬದಲ್ಲಿ ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋದವಳಿಗೆ ಹುಟ್ಟಿದ ಮಗು!

By Roopa Hegde  |  First Published Jun 7, 2024, 1:47 PM IST

ಗರ್ಭಾವಸ್ಥೆ ಮತ್ತು ಹೆರಿಗೆ ಕ್ಷಣಗಳು ಬಹಳ ವಿಶೇಷವಾಗಿರುತ್ತವೆ. ಒಂಭತ್ತು ತಿಂಗಳು ಹೊತ್ತು ಮಗುವನ್ನು ಹೆರೋದು ಸುಲಭವಲ್ಲ. ಕೆಲವೊಮ್ಮೆ ಹೊತ್ತಿದ್ದೇ ತಿಳಿಯೋದಿಲ್ಲ. ಕೊನೆ ಕ್ಷಣದಲ್ಲಿ ಮಗು ಹೊರಗೆ ಬಂದಿರುತ್ತೆ. 


ಯಾವುದೇ ಮಹಿಳೆ ತಾನು ಮೊದಲ ಬಾರಿ ತಾಯಿಯಾಗ್ತಿದ್ದೇನೆ ಎಂಬುದು ಗೊತ್ತಾದಾಗ ಖುಷಿಯಿಂದ ಕುಣಿಯುತ್ತಾಳೆ. ಗರ್ಭಾವಸ್ಥೆಯಲ್ಲಿ ಅತಿ ಕಾಳಜಿ ವಹಿಸ್ತಾಳೆ. ಆಹಾರ (Food), ವ್ಯಾಯಾಮ (Exercise), ವಿಶ್ರಾಂತಿ (Rest), ಸಮಯಕ್ಕೆ ಸರಿಯಾಗಿ ವೈದ್ಯರ ಭೇಟಿ ಹಾಗೂ ಔಷಧಿ ಸೇವನೆಯನ್ನು ಗರ್ಭಿಣಿ ಮಾಡ್ತಾಳೆ. ಕೆಲ ಅಪರೂಪದ ಘಟನೆಯಲ್ಲಿ ಮಹಿಳೆಯರಿಗೆ ಕಾಳಜಿವಹಿಸಲು ಸಾಧ್ಯವಾಗೋದಿಲ್ಲ. ಅದಕ್ಕೆ ಕಾರಣ ಮಹಿಳೆಗೆ ತಾನು ಗರ್ಭಿಣಿ ಎನ್ನುವ ವಿಷ್ಯವೇ ತಿಳಿಯೋದಿಲ್ಲ. ಅನೇಕ ಇಂಥ ಘಟನೆಗಳು ನಡೆದಿವೆ. ಮಹಿಳೆಗೆ ಕೊನೆಯ ಎಂಟು ಅಥವಾ ಒಂಭತ್ತನೇ ತಿಂಗಳಲ್ಲಿ ತಾನು ಗರ್ಭಿಣಿ ಅನ್ನೋದು ತಿಳಿಯುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಹೆರಿಗೆ ಆಗುವವರೆಗೂ ತಾನು ಗರ್ಭಿಣಿ ಎನ್ನುವ ವಿಷ್ಯ ಗೊತ್ತಾಗ್ಲಿಲ್ಲ. ಆಕೆಗೆ ಹೊಟ್ಟೆ ಬಂದಿರಲಿಲ್ಲ. ಯಾವುದೇ ಲಕ್ಷಣವಿರಲಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಾತ್ ರೂಮಿಗೆ ಹೋದಾಗ ಮಗು ಹೊರ ಬಂದಿದೆ. 

ಈ ಘಟನೆ ನಡೆದಿರೋದು ಬ್ರಿಟನ್ (Britain) ನಲ್ಲಿ. 20 ವರ್ಷದ ಜೆಸ್ ಡೇವಿಸ್ ಗೆ ಗರ್ಭಾವಸ್ಥೆ (Pregnancy) ಯನ್ನು ಎಂಜಾಯ್ ಮಾಡಲು ಆಗ್ಲಿಲ್ಲ. ಹೆರಿಗೆಯಾದ್ಮೇಲೆ ಆಕೆಗೆ ತಾನು ಗರ್ಭಿಣಿ ಎಂಬ ವಿಷ್ಯ ಗೊತ್ತಾಗಿದೆ. ಜೆಸ್ ಡೇವಿಸ್ ಗೆ ಅಂದು ಹುಟ್ಟುಹಬ್ಬವಾಗಿತ್ತು. ಆ ಖುಷಿಯಲ್ಲಿ ಓಡಾಡುತ್ತಿದ್ದಳು. ಏಕಾಏಕಿ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಪಿರಿಯಡ್ಸ್ (Periods) ನೋವಿರಬೇಕೆಂದು ಆಕೆ ಭಾವಿಸಿದ್ದಾಳೆ. ಆದ್ರೆ ಬಾತ್ ರೂಮಿಗೆ ಹೋದ್ಮೇಲೆ ನೋವು ಹೆಚ್ಚಾಗಿದೆ. ಮಗುವಿನ ತಲೆಯೊಂದು ಹೊರಗೆ ಬಂದ ಅನುಭವವಾಗಿದೆ. ಮಗುವನ್ನು ಜೆಸ್ ಡೇವಿಸ್ ಹೊರ ತೆಗೆದಿದ್ದಾಳೆ. ನಂತ್ರ ಏನು ಮಾಡ್ಬೇಕು ಎಂಬುದು ಆಕೆಗೆ ಗೊತ್ತಾಗ್ಲಿಲ್ಲ. ತಕ್ಷಣ ತನ್ನ ಸ್ನೇಹಿತನಿಗೆ ವಿಷ್ಯ ತಿಳಿಸಿದ್ದಾಳೆ. ಅಲ್ಲಿಗೆ ಬಂದ ಆಕೆ ಸ್ನೇಹಿತ ಮಗು ಹಾಗೂ ಜೆಸ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇಬ್ಬರೂ ಆರೋಗ್ಯವಾಗಿದ್ದಾರೆ.

Latest Videos

undefined

ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ

ಜೆಸ್ ಡೆವಿಸ್ ಗೆ ಈ ವಿಷ್ಯ ತಿಳಿಯದಿರಲು ಕಾರಣ ಆಕೆ ಹಾರ್ಮೋನ್ ಬದಲಾವಣೆ. ಜೆಸ್ ಹಾರ್ಮೋನ್ ವ್ಯತ್ಯಾಸದಿಂದ ಬಳಲುತ್ತಿದ್ದಳು. ಹಾಗಾಗಿ ಆಕೆಗೆ ತಿಂಗಳು ತಿಂಗಳು ಪಿರಿಯಡ್ಸ್ ಆಗ್ತಿರಲಿಲ್ಲ. ಜೆಸ್, ಸೌತಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಳು. ಹಾರ್ಮೋನ್ ಮಾತ್ರೆಯನ್ನೂ ಆಕೆ ಸೇವಿಸುತ್ತಿದ್ದಳು. ಜೆಸ್ ಹೆರಿಗೆಗೆ ಕೆಲವು ದಿನಗಳ ಮೊದಲಷ್ಟೆ ಹಾರ್ಮೋನ್ ಮಾತ್ರೆ ಬದಲಿಸಿದ್ದಳು. ಆಕೆ ಹೊಟ್ಟೆ ದೊಡ್ಡದಾಗಿರಲಿಲ್ಲ. ಸ್ವಲ್ಪ ಬಂದ ಹೊಟ್ಟೆಯನ್ನು ಬೊಜ್ಜು ಎಂದು ಭಾವಿಸಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸದ ಜೆಸ್, ವೈದ್ಯರನ್ನು ಭೇಟಿಯಾಗಿರಲಿಲ್ಲ. ಆರಾಮವಾಗಿ ಪ್ರತಿ ದಿನ ಕಾಲೇಜಿಗೆ ಹೋಗ್ತಿದ್ದಳು ಜೆಸ್. 

ಅಂದು ರಾತ್ರಿ ಜೆಸ್ ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಾತ್ ರೂಮಿಗೆ ಹೋದಾಗ ಮಗು ಹೊರಗೆ ಬರ್ತಿದ್ದಂತೆ ಜೆಸ್ ಅಚ್ಚರಿಗೊಳಗಾಗಿದ್ದಾಳೆ. ಒಂದ್ಕಡೆ ಏನು ಮಾಡ್ಬೇಕು ಎಂಬುದು ಆಕೆಗೆ ಗೊತ್ತಾಗ್ಲಿಲ್ಲ. ಇನ್ನೊಂದು ಕಡೆ ಖುಷಿ ತಡೆಯಲು ಸಾಧ್ಯವಾಗ್ಲಿಲ್ಲ. ಜೆಸ್ ಪ್ರಕಾರ ಆಕೆ ಮಗುವಿನ ತೂಕ ಎರಡೂವರೆ ಕಿಲೋ ಇತ್ತು. 

ಗರ್ಭಕಂಠ ಕ್ಯಾನ್ಸರ್‌ಗೆ ಲೇಜರ್‌ ಥೆರಪಿ ಚಿಕಿತ್ಸೆ

ಗರ್ಭಿಣಿಯಾಗಿರೋದನ್ನು ಪತ್ತೆ ಮಾಡೋದು ಹೇಗೆ? : ಗರ್ಭಾವಸ್ಥೆಯಲ್ಲಿ ಪ್ರತಿಯೊಬ್ಬ ಮಹಿಳೆಯ ಅನುಭವವು ವಿಶೇಷವಾಗಿರುತ್ತದೆ. ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯ ಮೊದಲ ಕೆಲವು ವಾರಗಳಲ್ಲಿ ಗರ್ಭಿಣಿಯಾಗಿರೋದನ್ನು ಪತ್ತೆ ಮಾಡ್ತಾರೆ. ಆದರೆ ಮತ್ತೆ ಕೆಲವರಿಗೆ ತಿಂಗಳು, ಎರಡು ತಿಂಗಳಾದ್ರೂ ತಿಳಿಯೋದಿಲ್ಲ. ಅಪರೂಪಕ್ಕೆ ಕೆಲ ಮಹಿಳೆಯರಿಗೆ ಕೊನೆಯ ವಾರದಲ್ಲಿ ಗರ್ಭಿಣಿಯಾಗಿರೋದು ಪತ್ತೆಯಾಗುತ್ತದೆ. ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗದಿರೋದೇ ಇದಕ್ಕೆ ಕಾರಣವಾಗಿರುತ್ತೆ. ಅಪರೂಪಕ್ಕೆ ಪಿರಿಯಡ್ಸ್ ಆಗ್ತಿದ್ದರೂ ಗರ್ಭಧರಿಸುವ ಮಹಿಳೆಯರಿದ್ದಾರೆ. ಸಾಮಾನ್ಯವಾಗಿ ಪಿರಿಯಡ್ಸ್ ಮಿಸ್ ಆಗೋದು, ವಾಕರಿಗೆ, ತಲೆಸುತ್ತು ಗರ್ಭಿಣಿಯ ಆರಂಭದ ಲಕ್ಷಣವಾಗಿದೆ. 
 

click me!