ಪ್ರತಿಯೊಬ್ಬರೂ ಒಳ ಉಡುಪಿನ ಸ್ವಚ್ಛತೆ ಬಗ್ಗೆ ತಿಳಿದಿರಬೇಕು. ಬ್ರಾ ಖರೀದಿಗೆ ತೆಗೆದುಕೊಳ್ಳುವ ಕಾಳಜಿಯನ್ನೇ ಅದ್ರ ಬಳಕೆ ಹಾಗೂ ಸ್ವಚ್ಛತೆಗೆ ನೀಡ್ಬೇಕು. ಹೇಗೆಲ್ಲ ತೊಳೆದ್ರೆ ಬ್ರಾ ಹಾಳಾಗುತ್ತೆ ಅಂತಾ ನಾವು ಹೇಳ್ತೇವೆ.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಬ್ರಾಗಳು ಲಭ್ಯವಿದೆ. ಪ್ಯಾಡೆಟ್ ಬ್ರಾ ಸೇರಿದಂತೆ ಅಗ್ಗದ, ದುಬಾರಿ ಬ್ರಾಗಳನ್ನು ನೀವು ನೋಡ್ಬಹುದು. ಬ್ರಾಗಳನ್ನು ಖರೀದಿ ಮಾಡುವಾಗ ಅದ್ರ ಕ್ವಾಲಿಟಿ ಹಾಗೂ ಗಾತ್ರದ ಬಗ್ಗೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಅದರಂತೆ ಬ್ರಾಗಳು ತೊಳೆಯುವಾಗ ಕೂಡ ಕೆಲವೊಂದು ಎಚ್ಚರಿಕೆವಹಿಸಬೇಕು.
ಅನೇಕರು ಅದು ಡ್ರೆಸ್ (Dress) ಒಳಗಿರುವ ಬಟ್ಟೆ ಎನ್ನುವ ಕಾರಣಕ್ಕೆ ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಅತ್ಯಂತ ಅಗ್ಗದ ಬ್ರಾ (Bra) ಖರೀದಿ ಮಾಡುವುದಲ್ಲದೆ ಅದನ್ನು ಸರಿಯಾಗಿ ಸ್ವಚ್ಛಗೊಳಿಸೋದಿಲ್ಲ. ನೀವು ಬ್ರಾವನ್ನು ಸರಿಯಾದ ರೀತಿಯಲ್ಲಿ ಕ್ಲೀನ್ (Clean) ಮಾಡದೆ ಹೋದ್ರೆ ಅದು ನಿಮ್ಮ ಸ್ತನದ ಆರೋಗ್ಯ ಹಾಳು ಮಾಡುವ ಜೊತೆಗೆ ಸ್ತನದ ಶೇಪ್ ಕೂಡ ಹದಗೆಡಿಸುತ್ತದೆ. ನಾವಿಂದು ಬ್ರಾ ಕ್ಲೀನ್ ಮಾಡೋದು ಹೇಗೆ ಅಂತಾ ನಿಮಗೆ ಹೇಳ್ತೇವೆ.
undefined
Women Health: ಬಲವಂತದ ಸಂಭೋಗ ಬಿಟ್ಟರೆ ಮತ್ತೇನು ಯೋನಿ ಊತಕ್ಕೆ ಆಗಬಹುದು ಕಾರಣ?
ಬ್ರಾ ಸ್ವಚ್ಛಗೊಳಿಸುವ ವೇಳೆ ಈ ಬಗ್ಗೆ ಗಮನವಿರಲಿ :
ಇತರ ಬಟ್ಟೆ ಜೊತೆ ತೊಳೆಯಬೇಡಿ : ಹೆಚ್ಚಿನ ಮಹಿಳೆಯರು ಎಲ್ಲಾ ಬಟ್ಟೆಗಳ ಜೊತೆಗೆ ತಮ್ಮ ಬ್ರಾಗಳನ್ನು ತೊಳೆಯುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಬಾರದು. ಬೇರೆ ಬಟ್ಟೆಗಳ ಬಣ್ಣ ಇದಕ್ಕೆ ಸೇರುವ ಸಾಧ್ಯತೆಯಿರುತ್ತದೆ. ವಾಷಿಂಗ್ ಮಶಿನ್ ನಲ್ಲಿ ಎಲ್ಲ ಬಟ್ಟೆ ಜೊತೆ ಬ್ರಾ ಹಾಕಿದ್ರೆ ಬ್ರಾ ಆಕಾರ ಹಾಳಾಗುತ್ತದೆ. ಎಲ್ಲ ಬಟ್ಟೆಯನ್ನು ತೊಳೆದ ನಂತ್ರ ಕೊನೆಯಲ್ಲಿ ನೀವು ಅದನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ರಾಸಾಯನಿಕವಿರುವ ಸೋಪ್ ನಿಂದ ಬ್ರಾ ಸ್ವಚ್ಛಗೊಳಿಸಬೇಡಿ.
ಬ್ರಾ ಹಿಂಡಬೇಡಿ : ಎಲ್ಲ ಬಟ್ಟೆಗಳನ್ನು ವಾಶ್ ಮಾಡಿದ ಮೇಲೆ ಹಿಂಡಿ ನೀರನ್ನು ತೆಗೆಯುತ್ತೇವೆ. ಆದ್ರೆ ಬ್ರಾ ಸ್ವಚ್ಛಗೊಳಿಸುವಾಗ ಹಿಂಡಬಾರದು. ಹೀಗೆ ಮಾಡಿದ್ರೆ ಬ್ರಾ ಫ್ಯಾಬ್ರಿಕ್‌ನಿಂದ ಆಕಾರದವರೆಗೆ ಎಲ್ಲವೂ ಹಾಳಾಗುತ್ತವೆ. ನೀವು ಬ್ರಾ ತೊಳೆದು ಹಿಂಡದೆ ಗಾಳಿಯಲ್ಲಿ ಒಣಗಿಸಬೇಕು. ಬ್ರಾವನ್ನು ತಂತಿಯ ಮೇಲೆ ಹಾಕಿ ನೀವು ಒಣಗಿಸಿದ್ರೂ ಅದ್ರ ಆಕಾರ ಹಾಳಾಗುವ ಸಾಧ್ಯತೆಯಿರುತ್ತದೆ. ನೀವು ಬ್ರಾವನ್ನು ಕ್ಲಿಪ್ ಮೂಲಕ ಒಣಗಿಸಬೇಕು. ಬಿಸಿಲಿನಲ್ಲಿ ನೀವು ಬ್ರಾ ಒಣಗಿಸಿದ್ರೆ ಬ್ರಾ ಬಣ್ಣ ಮಾಸುವ ಸಾಧ್ಯತೆಯಿರುತ್ತದೆ.
Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು
ಕೈನಲ್ಲೇ ಸ್ವಚ್ಛಗೊಳಿಸಿ : ಮೊದಲೇ ಹೇಳಿದಂತೆ ಬ್ರಾವನ್ನು ಯಾವುದೇ ಕಾರಣಕ್ಕೂ ವಾಶಿಂಗ್ ಮಶಿನ್ ಗೆ ಹಾಕ್ಬೇಡಿ. ನೀವದನ್ನು ಕೈನಲ್ಲಿ ತೊಳೆಯಿರಿ. ತಣ್ಣನೆ ನೀರಿಗೆ ಸೋಪ್ ಪುಡಿ ಹಾಕಿ ನೀವು ಸ್ವಲ್ಪ ಸಮಯ ನೆನೆಹಾಕಿ. ನಂತ್ರ ಅದನ್ನು ಶುದ್ಧ ನೀರಿನಲ್ಲಿ ಕ್ಲೀನ್ ಮಾಡಿ. ನೀವು ಬ್ರಾ ಕ್ಲೀನ್ ಮಾಡಲು ಬ್ರೆಷ್ ಕೂಡ ಬಳಸಬೇಡಿ. ಬ್ರಾ ಸ್ವಚ್ಛವಾಗಿಲ್ಲವೆಂದಾಗ, ಅದ್ರಲ್ಲಿ ಕೊಳೆ ಅಥವಾ ಸೋಪಿನ ಅಂಶವಿದ್ದಾಗ ಅದು ನಿಮ್ಮ ಸ್ತನದ ಆರೋಗ್ಯ ಹದಗೆಡಿಸುತ್ತದೆ. ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಸ್ತನದಲ್ಲಿ ಕೆಂಪು ದುದ್ದು, ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗಾಗಿ ನೀವು ಬ್ರಾ ಕ್ಲೀನ್ ಮಾಡುವ ವೇಳೆ ಸೋಪ್ ಸಂಪೂರ್ಣ ಕ್ಲೀನ್ ಆಗುವಂತೆ ನೋಡಿಕೊಳ್ಳಿ.
ಬ್ರಾವನ್ನು ಪದೇ ಪದೇ ತೊಳೆಯಲು ಇಷ್ಟವಿಲ್ಲ, ಸಮಯವಿಲ್ಲ ಎನ್ನುವವರು ಲಾಂಜರಿ ಬ್ಯಾಗ್ ಬಳಕೆ ಮಾಡ್ಬೇಕು. ಇದು ಬ್ರಾ ಆಕಾರ ಹಾಳಾಗದಂತೆ ನೋಡಿಕೊಳ್ಳುತ್ತದೆ. ಹಾಗೆಯೇ ಬ್ರಾ ಬಟ್ಟೆ ಹಾಳಾಗದಂತೆ ತಡೆಯುತ್ತದೆ. ನೀವು ಒಳ ಉಡುಪು ಚೀಲ ಖರೀದಿ ಮಾಡಿದ ನಂತ್ರ ಅದರ ಬಳಕೆ ಹೇಗೆ ಎಂಬುದನ್ನು ಕೂಡ ತಿಳಿದಿರಬೇಕು. ನೀವು ಬ್ರಾ ತೊಳದೆ ನಂತ್ರ ಅದನ್ನು ಎಲ್ಲ ಬಟ್ಟೆಗಳ ಮಧ್ಯೆ ಇಡಬೇಡಿ. ಬ್ರಾ ಇಡಲು ಒಂದು ಪ್ರತ್ಯೇಕ ಜಾಗವನ್ನು ಫಿಕ್ಸ್ ಮಾಡಿ. ಅಲ್ಲಿ, ಸರಿಯಾಗಿ ಜೋಡಿಸಿಟ್ಟರೆ ಬ್ರಾ ಆಕಾರ ಹಾಳಾಗುವುದಿಲ್ಲ.