1949ರಲ್ಲಿ ನಡೆದಿತ್ತು ಇಸ್ರೇಲ್‌ನ ಮೊದಲ ಯುದ್ಧ! 2023ರ ಈ ಯುದ್ಧವೇ ಅಂತಿಮ ಸಮರನಾ..?

Oct 9, 2023, 1:52 PM IST

ಇಸ್ರೇಲ್‌ಗೆ ಯುದ್ಧ ಅನ್ನೋದು ಹೊಸದೇನೂ ಅಲ್ಲ.. ಯುದ್ಧದಿಂದಲೇ ಹುಟ್ಟಿದ ದೇಶಕ್ಕೆ, ಯುದ್ಧವೇ ಜೀವನವಾದ ಹಾಗೆ ಕಾಣ್ತಾ ಇದೆ. ಯುದ್ಧವಿಲ್ಲದೇ ಒಂದೇ ಒಂದು ವರ್ಷವೂ ಬದುಕಿಲ್ಲ ಇಸ್ರೇಲ್(Israel). ಜಗತ್ತಲ್ಲೇ ವಿಶಿಷ್ಟವಾದ, ಸಂಘರ್ಷಮಯ ಇತಿಹಾಸ ಹೊಂದಿದ ದೇಶ ಅಂತ ಯಾವ್ದಾದ್ರೂ ಇದ್ರೆ, ಅದು ಇಸ್ರೇಲ್.  ಹೆಜ್ಜೆ ಹೆಜ್ಜೆಗೂ ಸಂಘರ್ಷ. ವರ್ಷ ವರ್ಷವೂ ಆಗುಂತಕರ ದಾಳಿ.. ದಶಮಾನದಲ್ಲೆರಡು ಯುದ್ಧ. ಹೀಗೆ ಹುಟ್ಟಿನಿಂದ ಈ ತನಕ ಬರೀ ಯುದ್ಧವನ್ನೇ ಇಸ್ರೇಲ್ ನೋಡಿಬಿಟ್ಟಿದೆ . 1949ರಲ್ಲಿ ಇಸ್ರೇಲ್ ಸ್ಥಾಪನೆಯಾದ ಆರಂಭದಲ್ಲೇ ಕದನ ವಿರಾಮ ಉಲ್ಲಂಘಿಸಿ ಯುದ್ಧ ಸಾರಿದ್ದವು ಅರಬ್ ದೇಶಗಳು(Arab countries). 1956ರಲ್ಲಿ ಸುಯೆಜ್ ಕಾಲುವೆಯ ಮೇಲೆ ಇಸ್ರೇಲ್ ಆಧಿಪತ್ಯ ಇಲ್ಲ ಅಂತ ಈಜಿಪ್ಟ್ ಪ್ರಧಾನಿ ಹೇಳಿದ್ದರು. ಈಜಿಪ್ಟ್ ಮಾತಿಗೆ ಉತ್ತರವಾಗಿ ಸಿನೈ, ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. 1956ರ ನವಂಬರ್ ತಿಂಗಳಲ್ಲಿ ಬ್ರಿಟನ್, ಫ್ರಾನ್ಸ್, ಇಸ್ರೇಲ್ ದೇಶಗಳನ್ನ ಆಹ್ವಾನಿಸಿದ ವಿಶ್ವಸಂಸ್ಥೆ ಈಜಿಪ್ಟ್ ಮೇಲಿನ ಯುದ್ಧ ನಿಲ್ಲಿಸುವಂತೆ ಸೂಚನೆ ನೀಡಿತ್ತು. 1957ರ ಜನವರಿಯಲ್ಲಿ ಗಾಜಾ ಪಟ್ಟಿ ಮೇಲೆ ಯುದ್ಧ ಮಾಡಿದ ಇಸ್ರೇಲ್ ತನ್ನ ಪಟ್ಟು ಸಡಲಿಸದೇ ಟಕ್ಕರ್ ಕೊಟ್ಟಿತ್ತು. 1967 ಜೂನ್ ನಲ್ಲಿ 6 ದಿನಗಳ ಯುದ್ಧ ನಡೆದಿತ್ತು. ಆ ಯುದ್ಧ ಗೆದ್ದು ಗಾಜಾ ಪಟ್ಟಿ, ಸಿನೈ ವಶ ಪಡೆದಿತ್ತು ಇಸ್ರೇಲ್. 1973ರ ಅಕ್ಟೋಬರ್ ನಲ್ಲಿ ಇಸ್ರೇಲ್ ಮೇಲೆ ಈಜಿಪ್ಟ್ ಮತ್ತು ಸಿರಿಯಾದ ಆಕ್ರಮಣ ನಡೆಸಿದ್ದವು. ಅದರ ಪರಿಣಾಮವಾಗಿ 30 ಲಕ್ಷ ಜನ ಸಂಖ್ಯೆ ಹೊಂದುದ್ದ ಇಸ್ರೇಲ್, 2700 ಸೈನಿಕರನ್ನು ಕಳೆದುಕೊಂಡಿತ್ತು. 19 ದಿನಗಳ ಆ ಯುದ್ಧದಲ್ಲಿಇಸ್ರೇಲಿನ ಸಾವಿರಾರು ಸಾವಿರಾರು ಜನ ಅಸುನೀಗಿದ್ದರು. 1979 ಮಾರ್ಚ್ 26ರಂದು, ಅಮೆರಿಕಾದ (America) ವೈಟ್ ಹೌಸ್ನಲ್ಲಿ ಈಜಿಪ್ಟ್ ಮತ್ತು ಇಸ್ರೇಲ್ ಮಧ್ಯೆ ಒಪ್ಪಂದವಾಗಿತ್ತು. ಆ ಶಾಂತಿ ಒಪ್ಪಂದದ ಅನುಸಾರವಾಗಿ ಇಸ್ರೇಲ್ ಸಿನೈ ಪರ್ಯಾಯ ದ್ವೀಪವನ್ನು ಈಜಿಪ್ಟಿಗೆ ಒಪ್ಪಿಸಿತು. ಇಲ್ಲಿಗೆ ಎಲ್ಲವೂ ಸರಿಯಾಗಿತ್ತು ಆದ್ರೆ. ಅಸಲಿ ಸಂಘರ್ಷ ಅಂತ ಶುರುವಾಗಿದ್ದೇ, ಇಂತಿಫದಾ ಅನ್ನೋ ಹೊಸ ಆಂದೋಲನ ಶುರುವಾಯ್ತು. ಇತ್ತೀಚಿಗೆ ಸದ್ದಿಲ್ಲದೆ ಅಡಗಿದ್ದ ಹಮಾಸ್ ಉಗ್ರರು ಈಗ ಇದ್ದಕ್ಕಿದ್ದ ಹಾಗೆ, ರಕ್ಕಸ ದಾಳಿ ನಡೆಸಿದ್ದಾರೆ. ಆ ದಾಳಿಗೆ ಇಸ್ರೇಲ್ ಉತ್ತರವನ್ನಂತೂ ಕೊಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರದಾಳಿಯಿಂದ ಇಸ್ರೇಲ್ ಪರಿಸ್ಥಿತಿ ಹೇಗಿದೆ? ಮಾಹಿತಿ ಬಿಚ್ಚಿಟ್ಟ ಇಸ್ರೇಲ್ ಕಾನ್ಸುಲ್ ಜನರಲ್!