ಹಮಾಸ್ ಶಾಂತಿ ಬಯಸಲ್ಲ..ಯುದ್ಧವೇ ಅವರ ಮುಖ್ಯ ಗುರಿ: ಅನಿವಾಸಿ ಭಾರತೀಯ ಅರುಣ್‌

Oct 19, 2023, 12:13 PM IST

ಇಸ್ರೇಲ್‌ ಮತ್ತು ಹಮಾಸ್ ನಡುವಿನ ಯುದ್ಧ ಇನ್ನೂ ಮುಂದುವರೆದಿದ್ದು, ಕಿರಯಾಥ್‌ ಘಾಟ್‌ನಿಂದ(Kiriyath ghat) ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕರಾದ ಅಜಿತ್‌ ಹನಮಕ್ಕನವರ್‌ ವರದಿಯನ್ನು ಮಾಡಿದ್ದಾರೆ. ಅನಿವಾಸಿ ಭಾರತೀಯರ ಜೊತೆ ಮಾತನಾಡಿದ್ದಾರೆ. ಭಾರತದಿಂದ ವಲಸೆ ಬಂದು ಇಲ್ಲಿ ಯಹೂದಿಗಳು(jews) ನೆಲೆಸಿದ್ದಾರೆ. ಅರುಣ್‌ ಮತ್ತು ಜೂಲಿ ಎಂಬುವವರು ಮಾತನಾಡಿದ್ದಾರೆ. ನಾನು 1964ರಲ್ಲಿ ಭಾರತದಿಂದ ಬಂದಿದ್ದೇವೆ, ಈ ಬಾರಿ ಹಮಾಸ್‌ನವರು ಇಸ್ರೇಲ್(Isreal) ಮೇಲೆ  ಮಾಡಿದ್ದು ದೊಡ್ಡ ತಪ್ಪು. ಹಮಾಸ್ ಉಗ್ರರು ಪುಟ್ಟ ಪುಟ್ಟ ಮಕ್ಕಳನ್ನ ಕೊಂದು ಹಾಕಿದ್ರು. ಹಮಾಸ್(Hamas) ಶಾಂತಿ ಬಯಸಲ್ಲ. ಯುದ್ಧವೇ ಅವರ ಮುಖ್ಯ ಗುರಿ. ನಾವೇನು ಮಾಡಲು ಆಗುತ್ತಿಲ್ಲ. ಇಸ್ರೇಲ್ ಇದನ್ನ ಬಯಸಿರಲಿಲ್ಲ. ಉಗ್ರರು ಕಂಡ ಕಂಡವರನ್ನ ಕೊಂದು ಹಾಕಿದ್ರು. ಇಸ್ರೇಲ್ ಇದನ್ನ ಸಹಿಸಲ್ಲ, ಸುಮ್ಮನೆ ಕೂರಲ್ಲ. ಇಲ್ಲಿ ನಿರಂತರ ರಾಕೇಟ್ ದಾಳಿ ನಡೆಯುತ್ತೆ. ಈ ದಾಳಿಗಳಿಂದ ನಮ್ಮ ನಮ್ಮದಿ ಹಾಳಾಗಿದೆ ಎಂದು ಅರುಣ್‌ ಹೇಳಿದ್ದಾರೆ. ಇನ್ನೂ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  News Hour: ಇಸ್ರೇಲ್ ಹಮಾಸ್‌ ಯುದ್ಧಭೂಮಿಗೆ ದೊಡ್ಡಣ್ಣ ಅಮೆರಿಕ ಎಂಟ್ರಿ!