Ukraine Crisis: ರಷ್ಯಾ ಸುಳ್ಳು ಸುದ್ದಿಗೆ ಯಾರೂ ಹೆದರಬೇಡಿ: ಜನತೆಗೆ ಧೈರ್ಯ ತುಂಬಿದ ಝೆಲೆನ್‌ಸ್ಕೀ

Feb 26, 2022, 2:53 PM IST

ಉಕ್ರೇನ್‌ ರಾಜಧಾನಿಯತ್ತ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಕೀವ್‌ನಲ್ಲಿರುವ ಅಧ್ಯಕ್ಷನನ್ನು ಸೆರೆ ಹಿಡಿಯುವ ಸಾಧ್ಯತೆ ಇದೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕೀ ರಕ್ಷಣೆಗೆ ಅಮೆರಿಕಾ ಮುಂದಾಗಿದೆ. ಅವರ ಸ್ಥಳಾಂತರಕ್ಕೆ ಮುಂದಾಗಿದ್ದು, ದೇಶ ಬಿಡಲು ಝೆಲೆನ್‌ಸ್ಕೀ ಹಿಂದೇಟು ಹಾಕಿದ್ದಾರೆ. 

'ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಇಲ್ಲಿದ್ದೇವೆ. ನಾವು ರಷ್ಯಾವನ್ನು ಎದುರಿಸುತ್ತಿದ್ದೇವೆ, ರಷ್ಯಾದ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಎಂದು ಝೆಲೆನ್‌ಸ್ಕೀ, ಜನತೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.