ಪೋಷಕರ ನಿರ್ಲಕ್ಷದಿಂದ 6 ತಿಂಗಳ ಮಗುವಿನ ಅಂಗಾಗ ಕಚ್ಚಿ ತಿಂದ ಇಲಿ, ಐಸಿಯುವಿನಲ್ಲಿ ಕಂದ!

By Chethan KumarFirst Published Oct 3, 2024, 6:52 PM IST
Highlights

6 ತಿಂಗಳ ಪುಟ್ಟ ಕಂದಮ್ಮ, ಮುಖ, ಕೈ ಕಾಲು, ಜನನಾಂಗ ಸೇರಿದಂತೆ ಇಡೀ ದೇಹವನ್ನೇ ಇಲಿಗಳು ಕಚ್ಚಿ ತಿಂದಿದೆ.ಒಂದು ಕೈಯ ನಾಲ್ಕು ಬೆರಳುಗಳಿಲ್ಲ, ಮತ್ತೊಂದು ಕೈಯ ಬೆರಲಿನಲ್ಲಿ ಏನೂ ಉಳಿದಿಲ್ಲ. ಪೋಷಕರ ನಿರ್ಲಕ್ಷ್ಯದಿಂದ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಇತ್ತ ಪೋಷಕರು ಅರೆಸ್ಟ್ ಆಗಿದ್ದಾರೆ. 

ನ್ಯೂಯಾರ್ಕ್(ಅ.03) ಮಗುವಿನ ಆರೈಕೆ ಅತ್ಯಂತ ಮಹತ್ವದ್ದು. ಒಂದು ಸೆಕೆಂಡ್ ಕಣ್ಣು ತಪ್ಪುವಂತಿಲ್ಲ, ಆಹಾರ ಜೊತೆಗೆ ಆರೈಕೆ ಅತ್ಯಂತ ಸವಾಲು. ಆದರೆ ಮಗುವಿನ ಪ್ರೀತಿ,ನಗುವಿನಲ್ಲಿ ಪೋಷಕರ ಆಯಾಸ, ಶ್ರಮ ಎಲ್ಲವೂ ನಗಣ್ಯ. ಆದರೆ ಇಲ್ಲೊಂದು ಘಟನೆ ನಡೆದಿದೆ. ಇದು ಊಹಿಸಲು ಸಾಧ್ಯವಾಗುತ್ತಿಲ್ಲ. ಪೋಷಕರ ನಿರ್ಲಕ್ಷ್ಯದಿಂದ ಮನೆಯಲ್ಲಿ ಇಲಿಗಳ ರಾಶಿ ತುಂಬಿ ಹೋಗಿದೆ. ಇದೇ ಇಲಿಗಳು ಮಲಗಿದ್ದ 6 ತಿಂಗಳ ಕಂದನ ಕಚ್ಚಿ ತಿಂದಿದೆ. ಕೈಬೆರಳು, ಮುಖ, ಕಿವಿ, ಅಂಗಾಂಗ, ಕಾಲು ಸೇರಿದಂತೆ ದೇಹದ 50 ಕಡೆ ಇಲಿ ಕಚ್ಚಿ ತಿಂದಿದೆ. ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಗುವಿನ ಆರೋಗ್ಯ ಅತ್ಯಂತ ಗಂಭೀರವಾಗಿದೆ. ಈ ಘಟನೆ ಸಂಬಂಧ ಮಗುವಿನ ಪೋಷಕರು ಹಾಗೂ ಓರ್ವ ಸಂಬಂಧಿಯನ್ನು ಬಂಧಿಸಲಾಗಿದೆ. 

ಡೇವಿಡ್ ಹಾಗೂ ಎಂಜಲ್ ಶೋನೊಬಮ್ ದಂಪತಿಗೆ ಮುದ್ದಾಗ ಗಂಡು ಮಗು ಜನಿಸಿದೆ. ಆದರೆ ಇವರ ಮನೆ ನೋಡಿದರೆ ಸ್ಮಶಾನಕ್ಕಿಂತ ನರಕ. ಈ ಮನೆಯಲ್ಲಿ ದಂಪತಿಗಳ ಸಂಬಂಧಿ ಮಹಿಳೆಯೊಬ್ಬರು ನೆಲೆಸಿದ್ದಾರೆ. ಕನಿಷ್ಠ ಮಗು ಹುಟ್ಟಿದ ಮೇಲಾದರೂ ಮಗವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕಿತ್ತು. ಆದರೆ ದಂಪತಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರ ಪರಿಣಾಮ ಮನೆಯ ತುಂಬ ಇಲಿಗಳು ಸೇರಿಕೊಂಡಿದೆ. ಇತ್ತ 6 ತಿಂಗಳ ಪುಟ್ಟ ಕಂದಮ್ಮ ಮಲಗಿದ್ದಾಗ ಈ ಇಲಿಗಳು ಮಗುವಿನ ದೇಹವನ್ನು ಕಚ್ಚಿ ತಿಂದಿದೆ. ಮಗು ಅಳುತ್ತಿದ್ದರೂ ಪೋಷಕರಿಗೇ ಗೊತ್ತೆ ಆಗಿಲ್ಲ. 

Latest Videos

ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ

ಈ ದಂಪತಿಗಳಿಗೆ ಪುಟ್ಟ ಕಂದಮ್ಮ ಸೇರಿ ಮೂವರು ಮಕ್ಕಳು. ಇನ್ನಿಬ್ಬರು ಶಾಲೆಗೆ ಹೋಗುತ್ತಿದ್ದಾರೆ ರಾತ್ರಿ ಮಲಗಿದ್ದ ವೇಳೆ ಪೋಷಕರಿಗೆ ಏನಾಗುತ್ತಿದೆ ಅನ್ನೋದೇ ಗೊತ್ತಿಲ್ಲ. 6 ತಿಂಗಳ ಮಗುವಿನ ಮೇಲೆ ಇಲಿಗಳು ದಾಳಿ ಮಾಡಿದೆ. ಕೈಬೆರಳು, ಕಾಲು, ಕಿವಿ,ಮೂಗು, ಜನನಾಂಗ ಸೇರಿದಂತೆ ದೇಹದ 50 ಭಾಗದಲ್ಲಿ ದಾಳಿ ನಡೆಸಿ ಕಚ್ಚಿ ತಿಂದಿದೆ.

ಎಚ್ಚರಗೊಂಡು ನೋಡಿದಾಗ 6 ತಿಂಗಳ ಮಗು ಚೀರಾಡುತ್ತಾ ಆಸ್ವಸ್ಥಗೊಂಡಿದೆ. ಮತ್ತೆ ಮಗು ಅಳಲು ಸಾಧ್ಯವಾಗದೆ ಅಸ್ವಸ್ಥಗೊಂಡಿದೆ. ಡೇವಿಡ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಈ ವೇಳೆ ಪೊಲೀಸರು ಧಾವಿಸಿದ್ದಾರೆ. ಬಳಿಕ ಮಗುವನ್ನು ಎತ್ತಿಕೊಂಡು ಆಸ್ಪತ್ರೆ ದಾಖಲಿಸಿದ್ದಾರೆ. ಮಗುವಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗಾಗಳೇ ಇಲ್ಲದಿರುವ ಕಾರಣ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಇತ್ತ ಪೊಲೀಸರ ತಂಡ ಮಗುವಿನ ಪೋಷಕರಾದ ಡೇವಿಡ್ ಹಾಗೂ ಎಂಜಲ್ ಇಬ್ಬರನ್ನೂ ಬಂಧಿಸಿದೆ. ಇದೇ ವೇಳೆ ಮನೆಯಲ್ಲಿ ವಾಸವಿದ್ದ ಸಂಬಂಧಿ ಮಹಿಳೆಯನ್ನೂ ಪೊಲೀಸ್ ಬಂಧಿಸಿದೆ. 

ಮನೆಯನ್ನು ಶುಚಿಯಾಗಿಟ್ಟುಕೊಂಡಿಲ್ಲದ ಕಾರಣ ಇಲಿಗಳ ಕಾಟ ಹೆಚ್ಚಾಗಿದೆ. ಮಕ್ಕಳಿದ್ದರೂ ಈ ರೀತಿಯ ನಿರ್ಲಕ್ಷ್ಯವಹಿಸಿ ಮಗುವಿನ ಜೀವಕ್ಕೆ ಅಪಾಯತಂದಿಟ್ಟ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಗುವಿನಲ್ಲಿ ಜೀವ ಮಾತ್ರ ಉಳಿದುಕೊಂಡಿದೆ. ಇದೀಗ ಪೋಷಕರು ಪಶ್ಟಾತಾಪದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಈ ರೀತಿಯ ಘೋರ ಅಪರಾಧಕ್ಕೆ ತಕ್ಕೆ ಶಿಕ್ಷೆ ನೀಡುವಂತೆ ಹಲವರು ಅಗ್ರಹಿಸಿದ್ದಾರೆ.

ನವಜಾತ ಶಿಶುವನ್ನು ಕಸದಂತೆ ಚರಂಡಿಗೆ ಎಸೆದುಹೋದ ಪಾಪಿಗಳು!
 

click me!