ಏಕಾಏಕಿ ಮುಡಾ ಅಧಿಕಾರಿಗಳು ಭ್ರಷ್ಟ ಸಿಎಂ ಅವರ ಪ್ರಭಾವಕ್ಕೆ ಒಳಗಾಗಿ ಸೈಟುಗಳ ಖಾತೆ ರದ್ದು ಮಾಡಿರುವುದು ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸಿಬಿಐ ತನಿಖೆ ಆಗಲೇ ಬೇಕು ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡುವುದಾಗಿ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ
ಬೆಂಗಳೂರು(ಅ.03): ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾ ನಿವೇಶನಗಳ ವಾಪಸ್‌ಗೆ ಪತ್ರ ಬರೆದ 24 ಗಂಟೆಗಳಲ್ಲೇ 14 ಸೈಟುಗಳ ಖಾತೆ ರದ್ದುಪಡಿಸಿರುವುದು ಕಾನೂನುಬಾಹಿರವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಎಂದು ರಾಜ್ಯ ಬಿಜೆಪಿ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಸಿಎಂ ಅವರ ಪತ್ನಿ ಮುಡಾ ನಿವೇಶನಗಳ ವಾಪಸ್‌ಗೆ ಪತ್ರ ಬರೆದ 24 ಗಂಟೆಗಳಲ್ಲೇ 14 ಸೈಟುಗಳ ಖಾತೆ ರದ್ದುಪಡಿಸಿರುವುದು ಕಾನೂನುಬಾಹಿರವೆಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಅವರು ಭ್ರಷ್ಟ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು… pic.twitter.com/X3HtOXcizA
undefined
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಹೈಕೋರ್ಟ್ ಕೂಡ ತನಿಖೆಗೆ ಒಪ್ಪಿಗೆ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿ ತನಿಖೆ ಮಾಡುತ್ತಿದೆ. ಇದರ ನಡುವೆ ಜಾರಿ ನಿರ್ದೇಶನಾಲಯ ಕೂಡ ದೂರು ದಾಖಲಿಸಿಕೊಂಡಿದೆ.
ಸಿದ್ದರಾಮಯ್ಯ ತಪ್ಪು ಮಾಡಿದ್ದಕ್ಕೆ ಮುಖ ಎತ್ಕೊಂಡು ಓಡಾಡೋಕ್ಕೆ ಆಗ್ತಿಲ್ಲ: ರವಿಕುಮಾರ್ ವಾಗ್ದಾಳಿ
ಹೀಗಾಗಿರುವಾಗ ಏಕಾಏಕಿ ಮುಡಾ ಅಧಿಕಾರಿಗಳು ಭ್ರಷ್ಟ ಸಿಎಂ ಅವರ ಪ್ರಭಾವಕ್ಕೆ ಒಳಗಾಗಿ ಸೈಟುಗಳ ಖಾತೆ ರದ್ದು ಮಾಡಿರುವುದು ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸಿಬಿಐ ತನಿಖೆ ಆಗಲೇ ಬೇಕು ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಹೇಳಿದ್ದಾರೆ ಎಂದು ಹೇಳಿದೆ.