ವಿರೋಧಿಗಳಿಗೆ ದೊಡ್ಡ ಮಟ್ಟದ ಇಂಪ್ಯಾಕ್ಟ್ ತೋರಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ವಾಗತ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ನಗರದ ಅಲ್ಲಿಪುರ ಮಠದಿಂದಲೇ ದೊಡ್ಡ ಮೆರವಣಿಗೆ ಜೆಸಿಬಿ ಮೂಲಕ ಹಾರ ಹಾಕಿ ಅಭಿಮಾನಿಗಳು ಹೂಮಳೆಯನ್ನೇ ಸುರಿಸಿದ್ದಾರೆ.
ಬಳ್ಳಾರಿ(ಅ.03): ಬರೋಬ್ಬರಿ 13 ವರ್ಷಗಳ ಕಾಲ ವನವಾಸ ಅನುಭವಿಸಿ ಇದೇ ಮೊದಲ ಬಾರಿಗೆ ಬಳ್ಳಾರಿಗೆ ನಗರಕ್ಕೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿಗೆ ಅಭಿಮಾನಿಗಳು ಜೆಸಿಬಿಯಿಂದ ಬೃಹತ್ ಹಾರ ಹಾಕಿ ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದ್ದಾರೆ.
ವಿರೋಧಿಗಳಿಗೆ ದೊಡ್ಡ ಮಟ್ಟದ ಇಂಪ್ಯಾಕ್ಟ್ ತೋರಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ವಾಗತ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ನಗರದ ಅಲ್ಲಿಪುರ ಮಠದಿಂದಲೇ ದೊಡ್ಡ ಮೆರವಣಿಗೆ ಜೆಸಿಬಿ ಮೂಲಕ ಹಾರ ಹಾಕಿ ಅಭಿಮಾನಿಗಳು ಹೂಮಳೆಯನ್ನೇ ಸುರಿಸಿದ್ದಾರೆ.
undefined
ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅಸ್ತು: ಬಾಸ್ ಈಸ್ ಬ್ಯಾಕ್ ಎಂದ ಫ್ಯಾನ್ಸ್
ಜನಾರ್ದನ ರೆಡ್ಡಿ ಬರುವ ಮಾರ್ಗ ದೂದ್ದಕ್ಕೂ ಬರುವ ವೃತ್ತಗಳಲ್ಲಿ ಹೂವಿನ ಮಳೆ ಸುರಿಸಲಾಗಿದೆ. ಬ್ಯಾಂಡ್, ತಾಷ್ಯಾ, ಗೊರವ ಕುಣಿತ, ತಮಟೆ ವಾದ್ಯ, ಸುಮಂಗಲಿಯರ ಆರತಿ ಹೀಗೆ ಹತ್ತಾರು ಕಲಾ ತಂಡಗಳಿಂದ ರೆಡ್ಡಿಗೆ ಭರ್ಜರಿ ಸ್ವಾಗತ ದೊರಕಿದೆ.
ಅಲ್ಲಿಪುರ ಮಠದಲ್ಲಿ ಪೂಜೆ ಮೆರವಣಿಗೆ ಬಳಿಕ ಸಂಜೆ ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜನಾರ್ದನ ರೆಡ್ಡಿ ಮನೆ ಸೇರಲಿದ್ದಾರೆ. ಸಂಡೂರು ಉಪಚುನಾವಣೆ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಸ್ವಾಗತ ಕೋರಲಾಗ್ತಿದೆ.