60 ನಿಮಿಷದಲ್ಲಿ 1.76 ಲಕ್ಷ ಕಾರು ಬುಕಿಂಗ್, ದಾಖಲೆ ಬರೆದ ಮಹೀಂದ್ರ ಥಾರ್ ರಾಕ್ಸ್!

By Chethan KumarFirst Published Oct 3, 2024, 5:49 PM IST
Highlights

ಮಹೀಂದ್ರ ಥಾರ್ ರಾಕ್ಸ್ ಕಾರು ಬಿಡುಗಡೆಯಾದ ಬಳಿಕ ಹಲವು ದಾಖಲೆ ಬರೆದಿದೆ. ಜನರು ಇದೀಗ ಥಾರ್ ರಾಕ್ಸ್ ಕಾರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಪರಿಣಾಮ ದಾಖಲೆಯೊಂದು ನಿರ್ಮಾಣವಾಗಿದೆ.

ನವದೆಹಲಿ(ಅ.03) ಮಹೀಂದ್ರ ಬಿಡುಗಡೆ ಮಾಡಿರುವ ಥಾರ್ ರಾಕ್ಸ್ ಕಾರು ಜನರ ನೆಚ್ಚಿನ ವಾಹನವಾಗಿ ಹೊರಹೊಮ್ಮಿದೆ. 5 ಡೋರ್ ಥಾರ್ ಜೀಪ್ ಭಾರಿ ಬೇಡಿಕೆ ಪಡೆದುಕೊಂಡಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಆನ್ ರೋಡ್-ಆಫರ್ ರೋಡ್ ಪ್ರಯಾಣಕ್ಕೆ ಹೇಳಿ ಮಾಡಿಸಿದ ಜೀಪ್ ಎಂದೇ ಗುರುತಿಸಿಕೊಂಡಿರುವ ಮಹೀಂದ್ರ ಥಾರ್ ರಾಕ್ಸ್ ಇದೀಗ ಹೊಸ ದಾಖಲೆ ಬರೆದಿದೆ. ರಾಕ್ಸ್ ಬುಕಿಂಗ್ ಆರಂಭಗೊಂಡ 60 ನಿಮಿಷದಲ್ಲಿ ಬರೋಬ್ಬರಿ 1.76 ಲಕ್ಷ ಕಾರು ಬುಕ್ ಆಗಿದೆ. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ ಗರಿಷ್ಠ ಬುಕಿಂಗ್ಸ್ ಪಡೆದ ಕಾರು ಅನ್ನೋ ದಾಖಲೆಗೆ ಪಾತ್ರವಾಗಿದೆ.

ಮಹೀಂದ್ರ ಥಾರ್ ರಾಕ್ಸ್ ಕಾರು ಈಗಾಗಲೇ ಬಿಡುಗಡೆಯಾಗಿದೆ. ಆದರೆ ಕಾರಿನ ಬುಕಿಂಗ್ ಇಂದಿನಿಂದ ಆರಂಭಗೊಂಡಿದೆ. ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಗೆ ಬುಕಿಂಗ್ ಆರಂಭಗೊಂಡಿದೆ. ಆರಂಭಿಕ 60 ನಿಮಿಷದಲ್ಲಿ 1,76,28 ಕಾರುಗಳು ಬುಕ ಆಗಿವೆ. ಇದು ಇತರ ಯಾವುದೇ ಬ್ರ್ಯಾಂಡ್ ಕಾರುಗಳಿಗೆ ಹೋಲಿಸಿದರೆ ಅತ್ಯಂತ ಗರಿಷ್ಠ ಬುಕಿಂಗ್ ಆಗಿದೆ.

Latest Videos

ಕೇವಲ 12.99 ಲಕ್ಷ ರೂಪಾಯಿ: ಮನೆಗೆ ತನ್ನಿ ದೇಶ ಹೆಮ್ಮೆಯ 5 ಡೋರ್ ಮಹೀಂದ್ರ ಥಾರ್ ರಾಕ್ಸ್!

ಈಗಾಗಲೇ ಮಹೀಂದ್ರ ಕೂಡ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿ ಮಾಡಲು ಭಾರಿ ತಯಾರಿ ಮಾಡಿಕೊಳ್ಳುತ್ತಿದೆ. ಥಾರ್ ರಾಕ್ಸ್‌ಗೆ ಬಂದಿರುವ ಪ್ರತಿಕ್ರಿಯೆ ಹಾಗೂ ಬುಕಿಂಗ್ಸ್‌ನಿಂದ ಮಹೀಂದ್ರ ಹಿರಿ ಹಿರಿ ಹಿಗ್ಗಿದೆ. ಅಕ್ಟೋಬರ್ ತಿಂಗಳಲ್ಲಿ ಮಹೀಂದ್ರ ಕಾರುಗಳು ಮಾರಾಟದಲ್ಲಿ ದಾಖಲೆ ಬರೆದಿದೆ. ಟಾಟಾ, ಮಾರುತಿ ಸೇರಿದಂತೆ ದಿಗ್ಗಜರನ್ನೇ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿರುವ ಹ್ಯುಂಡೈಗಿತೆ ಕೆಲವೇ ಅಂತರದಲ್ಲಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲೇ ರಾಕ್ಸ್ ರಾಕಿಂಗ್ ಮಾಡುತ್ತಿರುವುದು ಮಾರಾಟದಲ್ಲಿ ಈ ಹಿಂದಿನ ಎಲ್ಲಾ ದಾಖಲೆ ಪುಡಿಯಾಗುವ ಸಾಧ್ಯತೆ ಇದೆ.

ದಸರಾ ಹಬ್ಬಕ್ಕೆ ಥಾರ್ ರಾಕ್ಸ್ ಡೆಲಿವರಿ ಆರಂಭಗೊಳ್ಳಲಿದೆ. ಮಹೀಂದ್ರ ಥಾರ್ ರಾಕ್ಸ್ ಬೆಲೆ 12.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 22.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮಹೀಂದ್ರ ಥಾರ್ ಇದೇ ರೀತಿಯ ಮಾರಾಟ ಕಂಡಿತ್ತು. ಇದೀಗ ರಾಕ್ಸ್ ಈ ಎಲ್ಲಾ ದಾಖಲೆ ಮುರಿಯು ಸೂಚನೆ ನೀಡಿದೆ. 5 ಡೋರ್ ಕಾರಣದಿಂದ ಇದೀಗ ಮಹೀಂದ್ರ ಥಾರ್ ರಾಕ್ಸ್ ಕಾರಿನ ಬೇಡಿಕೆ ಹೆಚ್ಚಾಗುತ್ತಿದೆ.

ಬರೋಬ್ಬರಿ 12 ಲಕ್ಷ ರೂ ಡಿಸ್ಕೌಂಟ್, ಟಾಟಾ, ಮಹೀಂದ್ರ ಸೇರಿ ಕೆಲ ಕಾರಿಗೆ ಭಾರಿ ರಿಯಾಯಿತಿ ಘೋಷಣೆ!

ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ತಿಂಗಳ ಉತ್ಪಾದನೆಯನ್ನೂ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಮಹೀಂದ್ರ ಮುಂದಾಗಿದೆ. ರಾಕ್ಸ್ ಪ್ರತಿ ತಿಂಗಳು 6,500 ಕಾರುಗಳನ್ನು ಡೆಲಿವರಿ ಮಾಡುವ ಗುರಿ ಇಟ್ಟುಕೊಂಡಿದೆ. ಇನ್ನು ಮಹೀಂದ್ರ ಥಾರ್ ಪ್ರತಿ ತಿಂಗಳು 9,500 ಕಾರುಗಳನ್ನು ಡೆಲಿವರಿ ಮಾಡಲು ಮುಂದಾಗಿದೆ. ಈ ಎರಡು ಕಾರುಗಳು ದೇಶದ ಕಾರು ಮಾರುಕಟ್ಟೆಯನ್ನು ಆಳುವ ಸಾಧ್ಯತೆ ಇದೆ. ಇದೀಗ ಬಹುತೇಕರ ನೆಚ್ಚಿನ ಕಾರಾಗಿರುವ ಥಾರ್ ಸ್ಪರ್ಧಾತ್ಮಕ ಬೆಲೆಯಲ್ಲೂ ಲಭ್ಯವಿದೆ. ಸಹಜವಾಗಿ ಕಾರು ಖರೀದಿಸುವ ಗ್ರಾಹಕರು ಮೊದಲ ಆಯ್ಕೆಯಾಗಿ ಥಾರ್ ಬಯಸುತ್ತಿದ್ದಾರೆ.
 

click me!