ಅನುಭವ ಮಂಟಪ ನಡಿಗೆ: ಸಭೆಗೆ ಬರಬೇಕಿದ್ದ ಸ್ವಾಮೀಜಿಗಳ ದಿಕ್ಕು ತಪ್ಪಿಸಿದ್ದಾರು..?

Jun 13, 2022, 4:08 PM IST

ಬೀದರ್ (ಜೂ. 13):  ಪೀರ್‌ಪಾಷಾ ಬಂಗ್ಲಾ ದರ್ಗಾದ (Peer Pasha Bungalow) ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿರುವ ಫೋಟೋಗಳು ಇತ್ತೀಚೆಗೆ ವೈರಲ್‌ ಆಗಿದ್ದವು. ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಅನುಭವ ಮಂಟಪದ ಮೂಲಕಟ್ಟಡ ಎಂಬ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಸಮಾವೇಶ ಯಾವುದೇ ಗದ್ದಲ, ಗೊಂದಲ ಹಾಗೂ ಅಹಿತಕರ ಘಟನೆ ಇಲ್ಲದೆ ಮುಕ್ತಾಯವಾಗಿದೆ. 

ಪೀರ್ ಬಾಷಾ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್! ಅನುಭವ ಮಂಟಪ ಅಲ್ಲವೆಂದ ಪಟ್ಟದೇವರು

 ಪೀರ ಪಾಶಾ ಬಂಗ್ಲಾನೇ ಮೂಲ ಅನುಭವ ಮಂಟಪ ಎನ್ನುವ ಕೂಗಿನ ಹಿನ್ನೆಲೆಯಲ್ಲಿ ಆಯೋಜಿತ ಬಸವಕಲ್ಯಾಣ ನಗರದಲ್ಲಿ ಮಠಾಧೀಶರ ನಡೆ ಅನುಭವ ಮಂಟಪದ ಕಡೆ ಸಮಾವೇಶಕ್ಕೆ ಮಠಾಧೀಶ ಸಂಖ್ಯೆ ನಿರೀಕ್ಷಿಸಿದಂತೆ ಇರದಿದ್ದರೂ ಸರ್ಕಾರದ ಗಮನ ಸೆಳೆಯುವ ಮಟ್ಟಿಗೆ ಜೋರಾಗಿತ್ತು. ಕಾರ್ಯಕ್ರಮ ವಿಫಲಗೊಳಿಸಲು ಕೆಲವರು ಪ್ರಯತ್ನಿಸಿದ್ದರು. ಶಿವಮೊಗ್ಗ, ಆಲಮೇಲದಿಂದ ಬರುವ ಸ್ವಾಮೀಜಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಶ್ರೀಗಳಿಗೆ ರಾತ್ರಿ ಪೋನ್‌ ಮಾಡಿ ಸಮಾವೇಶ ರದ್ದಾಗಿದೆ ಎಂದು ಹೇಳಿದ್ದಾರೆ ಎಂದು ತಡೋಳಾ-ಮೆಹಕರ್‌ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ಬಸವಕಲ್ಯಾಣದಲ್ಲಿರುವ ಪೀರ್‌ ಪಾಷಾ ದರ್ಗಾವೇ ಬಸವಾದಿ ಶರಣರ ಮೂಲ ಅನುಭವ ಮಂಟಪವಾಗಿದ್ದು, ಅದರೊಳಗೆ ಪುರಾತತ್ವ ಇಲಾಖೆಯಿಂದ ಸಂಶೋಧನೆ ನಡೆಸಬೇಕು ಎಂದು ಒತ್ತಾಯಿಸಿರುವ ವಿವಿಧ ಮಠಾಧೀಶರು, ಇದಕ್ಕೆ ದಸರಾ ಹಬ್ಬದವರೆಗೆ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.