ಚಂದ್ರಯಾನ-3 ರಹಸ್ಯ ಬೇಧಿಸಿದ ಇಸ್ರೋ: ಭಾರತದ ಹೊಸ ಬಾಹ್ಯಾಕಾಶ ಮೈಲಿಗಲ್ಲು

By Kannadaprabha NewsFirst Published Sep 30, 2024, 7:35 AM IST
Highlights

ಚಂದ್ರಯಾನ-3 ನೌಕೆ ಚಂದ್ರನ ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಇಸ್ರೋದ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಕುಳಿ ಸುಮಾರು 385 ಕೋಟಿ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. 

ನವದೆಹಲಿ: ಕಳೆದ ವರ್ಷ ಆ.23ರಂದು ಇಸ್ರೋದ ಚಂದ್ರಯಾನ 3 ನೌಕೆ ಇಳಿದ ದಕ್ಷಿಣ ಧ್ರುವ ಪ್ರದೇಶ, ಚಂದ್ರನ ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಚಂದ್ರಯಾನ -3 ನೌಕೆಯ ಭಾಗವಾಗಿದ್ದ ಪ್ರಜ್ಞಾನ್‌ ರೋವರ್‌ ಕಳುಹಿಸಿದ್ದ ದತ್ತಾಂಶಗಳ ಅನ್ವಯ, ನೌಕೆ ಇಳಿದ ಜಾಗವನ್ನು ನೆಕ್ಟೇರಿಯನ್‌ ಪೀರಿಯಡ್‌ ಎಂದು ಗುರುತಿಸಬಹುದು. ಅಂದರೆ 385 ಕೋಟಿ ವರ್ಷಗಳ ಹಿಂದೆ ಈ ಕುಳಿ ನಿರ್ಮಾಣ ಆಗಿರಬಹುದು. ಇದು ಚಂದ್ರನ ಇತಿಹಾಸದಲ್ಲೇ ಅತ್ಯಂತ ಹಳೆಯ ಕುಳಿಗಳ ಪೈಕಿ ಒಂದು ಎಂದು ಅಹಮದಾಬಾದ್‌ನ ಇಸ್ರೋದ ವಿಜ್ಞಾನಿಗಳ ತಂಡ ಅಂದಾಜಿಸಿದೆ. ಕ್ಷುದ್ರಗಳು ಅಪ್ಪಳಿಸಿದ ಕಾರಣ 300 ಕಿ.ಮೀ ಸುತ್ತಳೆಯ ಕುಳಿ ಸೃಷ್ಟಿಯಾಗಿತ್ತು ಎಂದು ವಿಜ್ಞಾನಿಗಳ ತಂಡ ಹೇಳಿದೆ.

Latest Videos

Chandrayaan 3: ಚಂದ್ರನ ಮೇಲೆ ವಿಕ್ರಮ್‌, ಪ್ರಗ್ಯಾನ್‌ ಇಳಿದ ಹಿಂದೆಂದೂ ಕಾಣದ ಚಿತ್ರ ಪ್ರಕಟಿಸಿದ ಇಸ್ರೋ!

2040ಕ್ಕೆ ಉಡಾವಣೆ । ₹2104 ಕೋಟಿ ವೆಚ್ಚ

ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಎಲ್ಲವೂ ಅಂದುಕೊಂಡರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್‌ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2104.06 ಕೋಟಿ ರು. ವೆಚ್ಚವಾಗಲಿದೆ.

2008ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ‘ಚಂದ್ರಯಾನ-1’ ಎಂಬ ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್‌ ಹಾಗೂ ರೋವರ್‌ ಇಳಿಸಲು ಚಂದ್ರಯಾನ-2 ಯೋಜನೆಯನ್ನು ಇಸ್ರೋ 2019ರಲ್ಲಿ ಹಮ್ಮಿಕೊಂಡಿತ್ತು. ಸಾಫ್ಟ್‌ವೇರ್‌ ದೋಷದಿಂದಾಗಿ ಅದು ವಿಫಲವಾಗಿತ್ತು. 2023ರಲ್ಲಿ ಚಂದ್ರಯಾನ-3 ಕೈಗೆತ್ತಿಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್‌ ಹಾಗೂ ರೋವರ್‌ ಅನ್ನು ಇಳಿಸಿತ್ತು.

ಚಂದ್ರನ ಮೇಲೂ ಕಂಪನವಾಗುತ್ತಾ? 250ಕ್ಕೂ ಹೆಚ್ಚು ಮೂನ್‌ಕ್ವೇಕ್ ದಾಖಲಿಸಿದ ಚಂದ್ರಯಾನ 3 ಮಿಷನ್‌

click me!