Hijab Row: ಹಿಜಾಬ್ ವಿವಾದ ಶುರುವಾಗಿದ್ದೆಲ್ಲಿಂದ.? ಉಡುಪಿ ಕಾಲೇಜು ಪ್ರಿನ್ಸಿಪಾಲ್ ಮಾತು

Feb 11, 2022, 3:34 PM IST

ಉಡುಪಿ (ಫೆ. 11): ನಗರದ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನಲ್ಲಿ ಹಿಜಾಬ್‌ (Hijab) ಧರಿಸುವ ಪಟ್ಟು ಹಿಡಿದಿರುವ 6 ಮಂದಿ ವಿದ್ಯಾರ್ಥಿಗಳು ಹಿಜಾಬ್‌ಗಾಗಿ ಪಟ್ಟು ಹಿಡಿದಾಗಿನಿಂದ ಈ ವಿವಾದ ಮುನ್ನೆಲೆಗೆ ಬಂತು. ಈ ವಿವಾದ ಹೇಗೆ ಶುರುವಾಯ್ತು..? ನಡೆದಿದ್ದೇನು.? ಎಂದು ಪ್ರಿನ್ಸಿಪಾಲ್ ರುದ್ರೇಗೌಡ ಮಾತನಾಡಿದ್ದಾರೆ. 

Hijab Row: ಟ್ವೀಟ್‌ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ, ತನಿಖೆ ನಡೆಸುತ್ತೇವೆ: ಗೃಹ ಸಚಿವ

'12 ಮಂದಿ ವಿದ್ಯಾರ್ಥಿಗಳು ಹಿಜಾಬ್‌ಗೆ ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ನಾವು ಅವರ ಪೋಷಕರನ್ನು ಕರೆಸಿ ಮಾತನಾಡಿದೆವು. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಇದೆ. ಚೆನ್ನಾಗಿ ಓದಿ, ಈ ವಿವಾದ ಬೇಡ ಎಂದು ತಿಳಿ ಹೇಳಿದವು. ಕ್ಯಾಂಪಸ್ ಒಳಗೆ ಈ ಹಿಂದೆ ಅನುಮತಿ ಕೊಟ್ಟಿದ್ದೆವು. ಆದರೆ ತರಗತಿ ಒಳಗೆ ಅವಕಾಶ ಕೊಟ್ಟಿರಲಿಲ್ಲ. ಈ ವಿದ್ಯಾರ್ಥಿಗಳು ತರಗತಿಗೆ ಸರಿಯಾಗಿ ಬರುತ್ತಿರಲಿಲ್ಲ' ಎಂದು ಪ್ರಿನ್ಸಿಪಾಲ್ ರುದ್ರೇಗೌಡ ಹೇಳಿದ್ದಾರೆ.