Bhairadevi Movie Review: ಭೈರಾದೇವಿಯಲ್ಲಿ ದೆವ್ವ ವರ್ಸಸ್‌ ದೇವಿ, ಮೂವಿ ಹೇಗಿದೆ?

Published : Oct 03, 2024, 09:58 PM ISTUpdated : Oct 04, 2024, 07:53 AM IST
Bhairadevi Movie Review: ಭೈರಾದೇವಿಯಲ್ಲಿ ದೆವ್ವ ವರ್ಸಸ್‌ ದೇವಿ, ಮೂವಿ ಹೇಗಿದೆ?

ಸಾರಾಂಶ

ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ನಟಿಸಿರೋ ಸಿನಿಮಾ ಭೈರಾದೇವಿ. ಟ್ರೇಲರ್‌ನಲ್ಲೇ ನಡುಕ ಹುಟ್ಟಿಸಿದ ಈ ಸಿನಿಮಾ ನಿಜಕ್ಕೂ ಹೇಗಿದೆ?  

ರಾಧಿಕಾ ಕುಮಾರಸ್ವಾಮಿ (Radhika Kumaraswamy) ಸತತ ಸೋಲಿಂದ ಹೈರಾಣಾಗಿದ್ದಾರೋ ಏನೋ ಗೊತ್ತಿಲ್ಲ, ಇತ್ತೀಚೆಗೆ ಅವರೊಂದು ಸ್ಟೇಟ್‌ಮೆಂಟ್‌ ಕೊಟ್ಟಿದ್ದರು. ಭೈರಾದೇವಿ ಸಿನಿಮಾವನ್ನು ಪ್ರೇಕ್ಷಕ ಒಪ್ಪಿಕೊಳ್ಳಲಿಲ್ಲ ಅಂದ್ರೆ ಇನ್ನು ಮೇಲೆ ನಟಿಸೋದಿಲ್ಲ ಅಂತ. ಹೀಗಾಗಿ ಈಗ ಒಂದೋ ಪ್ರೇಕ್ಷಕರು ಎದೆ ಗಟ್ಟಿ ಮಾಡಿಕೊಳ್ಳಬೇಕು, ಇಲ್ಲವೇ ರಾಧಿಕಾ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಇಲ್ಲವೇ ಮೂರನೆಯ ಹಾಗೂ ಕೊನೇಯ ಪಾಯಿಂಟು ಸಿನಿಮಾ ಚೆನ್ನಾಗಿರಬೇಕು. ಮೂವಿ ಸಖತ್ತಾಗಿದ್ದರೆ ಆಡಿಯನ್ಸ್‌ ಖುಷಿ ಆಗೋದ್ರಲ್ಲಿ ಅನುಮಾನ ಇಲ್ಲ. ಅವರು ಖುಷಿ ಆದ್ರು ಅಂದ್ರೆ ರಾಧಿಕಾ ಅವರಿಗೂ ಖುಷಿಯಾಗಿ ಅವರು ಆಮೇಲಿಂದ ಸಿನಿಮಾ ಬಿಟ್ಹೋಗ್ತೀನಿ ಅಂತೆಲ್ಲ ನೊಂದುಕೊಂಡು ಮಾತಾಡಲ್ಲ. ಸೋ, ಸಿನಿಮಾ ಚೆನ್ನಾಗಿರಲಿ ಅಂತಲೇ ನಾವೆಲ್ಲ ಹಾರೈಸೋದು ಬಹಳ ಮುಖ್ಯ. ಅಂದಹಾಗೆ ಸಿನಿಮಾ ರಿಲೀಸ್‌ ಆಗೋಗಿದೆ.

ರಿಸಲ್ಟ್‌ ಏನು ಅಂತ ಇವತ್ತು, ನಾಳೆಯಲ್ಲೇ ಗೊತ್ತಾಗುತ್ತೆ. ಏಕೆಂದರೆ 'ದೇವರ' ಸಿನಿಮಾ ಅಂದುಕೊಂಡಷ್ಟೇನೂ ಓಡ್ತಾ ಇಲ್ಲ. ಬೇರೆ ಹೇಳಿಕೊಳ್ಳುವಂಥ ಸಿನಿಮಾ ಥಿಯೇಟರ್‌ನಲ್ಲಿಲ್ಲ. ಸೋ ರೀಸೆಂಟಾಗಿ ಹಿಟ್ ಕಂಡ ಗಣೇಶ್‌ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ರೀತಿ ಈ ಸಿನಿಮಾವೂ ಹಿಟ್‌ ಆಗುವ ಅವಕಾಶವಂತೂ ಇದ್ದೇ ಇದೆ. 

ಇನ್ನು ಈ ಸಿನಿಮಾ ಕತೆಯ ವಿಚಾರಕ್ಕೆ ಬಂದ್ರೆ ಇದರಲ್ಲಿ ಅಘೋರಿ ಕಥೆ ಇದೆ. ರಾಧಿಕಾ ವೀರಾವೇಶದಿಂದ ಅಘೋರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಥಿಯೇಟರ್‌ನಲ್ಲಿ ಈ ಹಾಡು ಪ್ಲೇ ಆಗುವಾಗ ಇತ್ತೀಚೆಗೆ ಪ್ರೇಕ್ಷಕರೊಬ್ಬರಿಗೆ ಮೈಮೇಲೆ ದೇವಿಯ ಆವಾಹನೆ ಆಗಿದೆ. ಅಂದಮೇಲೆ ಹಾಡು ಸಖತ್ ಪವರ್‌ಫುಲ್ಲಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಸಿನಿಮಾದಲ್ಲಿ ಕಾಶಿಯ ದರ್ಶನವೂ ಆಗುತ್ತೆ. ಜೊತೆಗೆ ಅಘೋರಿಗಳ ಲೈಫ್‌ಸ್ಟೈಲಿನ ಪರಿಚಯವೂ ಆಗುತ್ತದೆ. ಯಾವ ತೆಲುಗು ಸಿನಿಮಾಕ್ಕೂ ಕಡಿಮೆ ಇಲ್ಲದ ಹಾಗೆ ಬಹಳ ರಿಚ್ ಆಗಿ ಅಘೋರಿ ಲೈಫನ್ನು ತೋರಿಸಿದ್ದಾರೆ. ಇನ್ನೊಂದು ಮಜಾ ಅಂದರೆ ರಂಗಾಯಣ ರಘು ಅವರ ಕಾಮಿಡಿ. 

ಸೀರಿಯಸ್ ಸನ್ನಿವೇಶದಲ್ಲಿ ಬುಲೆಟ್‌ನ ಹಾಗೆ ಅವರ ಹಾಸ್ಯ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಹಾಗಂತ ಇದರಲ್ಲಿ ಅಘೋರಿ ಲೈಫ್‌ ಮಾತ್ರ ಇಲ್ಲ. ರಾಧಿಕಾ ಅವರ ಮತ್ತೊಂದು ಅವತಾರವೂ ಇದೆ. ಅದೇನು ಅನ್ನೋದನ್ನು ಸ್ಕ್ರೀನ್‌ ಮೇಲೇ ನೋಡ್ಬೇಕು. ಅಷ್ಟಕ್ಕೂ ಈ ಸಿನಿಮಾ ಯಾಕೆ ನೋಡಬೇಕು ಅನ್ನೋರಿಗೆ ನಾಲ್ಕೈದು ರೀಸನ್ ಹೇಳಬಹುದು. ಮೊದಲನೇ ಕಾರಣ ಮನರಂಜನೆ ಮೋಸ ಇಲ್ಲ. ಎರಡನೇದು ಒಬ್ಬರಿಗಿಂತ ಒಬ್ಬರು ಸಖತ್ತಾಗಿ ನಟಿಸಿದ್ದಾರೆ. ಮೂರನೇ ರೀಸನ್ನು ಕಥೆ ಕುರ್ಚಿ ತುದೀಲಿ ಕೂರಿಸೋ ಥರ ಇದೆ. ನಾಲ್ಕನೇದು ವೈಬ್‌ ಚೆನ್ನಾಗಿದೆ. ಇನ್ವಾಲ್ವ್‌ಮೆಂಟ್‌ ಎಲ್ಲೂ ಮಿಸ್ ಆಗಲ್ಲ. ಐದನೇ ಹಾಗೂ ಫೈನಲ್‌ ರೀಸನ್‌ ಇದರಲ್ಲಿ ಕಥೆಯೊಳಗೆ ಇರೋ ಇನ್ನೊಂದು ಕಥೆ, ಮೇಲಿಂದ ಮೇಲೆ ಬರೋ ಟ್ವಿಸ್ಟ್ ಆಂಡ್ ಟರ್ನ್‌ ಇಷ್ಟ ಆಗಿಯೇ ಆಗುತ್ತೆ.

ಸುದೀಪ್‌ ಡೆಡಿಕೇಶನ್‌ಗೆ ಮತ್ತೆ ಫಿದಾ ಆದ ಅಭಿಮಾನಿಗಳು! 'ಬಿಲ್ಲ ರಂಗ ಭಾಷ'ಗಾಗಿ ಹೀಗೂ ತಯಾರಿ?

ಹಾಗಾದ್ರೆ ಸಿನಿಮಾದಲ್ಲಿ ನೆಗೆಟಿವ್ ಏನಿಲ್ವಾ ಅಂದ್ರೆ ಇಲ್ಲ ಅನ್ನಕ್ಕಾಗಲ್ಲ. ಸಿನಿಮಾ ಅಲ್ಲಲ್ಲಿ ಕೊಂಚ ಲ್ಯಾಗ್ ಆಗಿದೆ. ಹಾಡುಗಳ ಸ್ಪೇಸ್ ಹೆಚ್ಚಾಯ್ತು. ಕೆಲವೊಂದು ಅನಗತ್ಯ ವಿಷಯಗಳಿವೆ. ಅದಕ್ಕೆ ಜಾಸ್ತಿ ಸ್ಕ್ರೀನ್‌ ಸ್ಪೇಸ್‌ ಇದೆ. ಆದರೆ ಇದೆಲ್ಲ ಬಹಳ ಸಣ್ಣ ರೀಸನ್‌ಗಳಷ್ಟೆ. ಉಳಿದ ಹಾಗೆ ಸಿನಿಮಾನ ಥಿಯೇಟರ್‌ನಲ್ಲಿ ಕೂತು ಎನ್‌ಜಾನ್‌ ಮಾಡೋದಕ್ಕೆ ಏನೂ ಅಡ್ಡಿ ಇಲ್ಲ. ಜೊತೆಗೆ ರಾಧಿಕಾ ಸಿನಿಮಾರಂಗದಿಂದಲೇ ಹೊರನಡೀತೇನೆ ಅನ್ನೋದೆಲ್ಲ ನಡಿಯಲ್ಲ ಅನ್ನೋದನ್ನು ಈ ಸಿನಿಮಾ ಹೇಳುತ್ತೆ. ಸೋ, ಎನ್‌ಜಾಯ್‌ ದ ಮೂವಿ.

ನಟಿ ಶ್ರೀದೇವಿಗೆ 16 ವರ್ಷ ಇದ್ದಾಗಲೇ ಲವ್ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್: ಮದುವೆ ಪ್ರಪೋಸ್‌ಗೆ ಹೋದಾಗ..
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?