ಶಹನಾಯಿ ಸಂಗೀತ ಬಹಳ ಪ್ರಸಿದ್ಧವವಾದ ಕಲೆಯಾಗಿದೆ. ಬಹಳಷ್ಟು ಸಾಧನೆ ಮಾಡಿದ ಭಜಂತ್ರಿಯವರು ಹಾವೇರಿಯವರು. ಅರ್ಜಿ ಹಾಕದೇ ಗುರುತಿಸಿ ಪ್ರಶಸ್ತಿ ನೀಡಿದರೆ ಸ್ವೀಕರಿಸುತ್ತೇನೆ ಎಂದಿದ್ದಾರೆ. ಬಹಳ ಸಾಧನೆ ಮಾಡಿದ ಭಜಂತ್ರಿಯವರಿಗೆ ಪ್ರಶಸ್ತಿ ನೀಡಿದ್ದೇವೆ. ಇವರಿಗೆ ಪ್ರಶಸ್ತಿ ನೀಡಿದ್ದು ಸರ್ಕಾರ ತನ್ನ ತಾನೇ ಗೌರವಿಸಿಕೊಂಡಂತೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ
ಇಂದು(ಗುರುವಾರ) ಮೈಸೂರು ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು ರಾಜರು ಕೂಡ ಕಲೆ, ಸಂಗೀತ, ಸಾಹಿತ್ಯ, ನೃತ್ಯ ಇವುಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರು. ಹೀಗಾಗಿ ಇಂದು ರಾಜ್ಯ ಸರ್ಕಾರ ಕೂಡ ಕಲೆ, ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದ ಸಿಎಂ ಸಿದ್ದರಾಮಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಚ್ಚಿನ ಸಹಕಾರ ನೀಡಿದರು. ಇದಕ್ಕೆ ರಾಜಮನೆತನ ಮೂಲ ಕಾರಣ. ಅದನ್ನೇ ನಾವು ಸರ್ಕಾರವಾಗಿ ಮುಂದುವರಿಸುತ್ತಿದ್ದೇವೆ. ಅಪಾರ ಗೌರವ ತಂದುಕೊಟ್ಟವರನ್ನು ಗುರುತಿಸುವುದು ಸರ್ಕಾರದ ಕರ್ತವ್ಯ ಎಂದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಅರಮನೆ ಆವರಣದಲ್ಲಿ ಆಯೋಜಿಸಿದ್ದ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ, ಪ್ರಶಸ್ತಿ ಪ್ರದಾನ ಮಾಡಿ ಸಾಧಕರನ್ನು ಗೌರವಿಸಿದರು.