ಮಂಡ್ಯ: ಗಂಗಾರತಿ ಮಾದರಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ಪ್ರಾಯೋಗಿಕ ಚಾಲನೆ

Published : Oct 03, 2024, 10:41 PM IST
ಮಂಡ್ಯ: ಗಂಗಾರತಿ ಮಾದರಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ಪ್ರಾಯೋಗಿಕ ಚಾಲನೆ

ಸಾರಾಂಶ

ಇಂದಿನಿಂದ ಪ್ರಾಯೋಗಿಕ ಕಾವೇರಿ ಆರತಿಗೆ ವಿದ್ಯುಕ್ತ ಚಾಲನೆ ನೀಡಿದ್ದು ಅರ್ಚಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಆರತಿ ಪೂಜಾ ಕಾರ್ಯಕ್ರಮಗಳು ಜರುಗಿವೆ. ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆದಿದೆ. 

ಮಂಡ್ಯ(ಅ.03):  ಗಂಗಾರತಿ ಮಾದರಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ಇಂದು ಪ್ರಾಯೋಗಿಕವಾಗಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸ್ನಾನಘಟದಲ್ಲಿ ಬಳಿ ಪ್ರಾಯೋಗಿಕ ಆರತಿಗೆ ಚಾಲನೆ ನೀಡಲಾಗಿದೆ. 

ಇಂದಿನಿಂದ ಪ್ರಾಯೋಗಿಕ ಕಾವೇರಿ ಆರತಿಗೆ ವಿದ್ಯುಕ್ತ ಚಾಲನೆ ನೀಡಿದ್ದು ಅರ್ಚಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಆರತಿ ಪೂಜಾ ಕಾರ್ಯಕ್ರಮಗಳು ಜರುಗಿವೆ. ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆದಿದೆ. 

ಹರಿದ್ವಾರ, ವಾರಣಾಸಿಗೆ ರಾಜ್ಯದ ನಿಯೋಗ ಭೇಟಿ, ಹೇಗಿರಲಿದೆ ಗೊತ್ತಾ ಕಾವೇರಿ ಆರತಿ..?

ಇಂದಿನಿಂದ 5 ದಿನಗಳ ಕಾಲ ಕಾವೇರಿಗೆ ಪ್ರಾಯೋಗಿಕ ಆರತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ವಿಜಯಲಕ್ಷ್ಮಿ ಡಿಸಿ ಡಾ‌. ಕುಮಾರ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಹಲವರು ಭಾಗಿಯಾಗಿದ್ದರು. 
ಪ್ರಾಯೋಗಿಕ ಆರತಿ ಬಳಿಕ ಸರ್ಕಾರದಿಂದ ಅಧಿಕೃತ ಕಾವೇರಿ ಆರತಿಗೆ ಚಾಲನೆ ನೀಡಲಾಗುತ್ತದೆ. 

PREV
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ