ಜಸ್ಟ್ ಒಂದೇ ದಿನದಲ್ಲಿ ಮುಕೇಶ್ ಅಂಬಾನಿಗೆ ಬರೋಬ್ಬರಿ 77 ಸಾವಿರ ಕೋಟಿ ರೂ ನಷ್ಟ!

By Chethan KumarFirst Published Oct 3, 2024, 10:28 PM IST
Highlights

ಕೇವಲ ಒಂದೇ ಒಂದು ದಿನದಲ್ಲಿ ಉದ್ಯಮಿ ಮುಕೇಶ್ ಅಂಬಾನಿ 77,606 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಶ್ರೀಮಂತ ಉದ್ಯಮಿ ಅಂಬಾನಿ ಈ ನಷ್ಟಕ್ಕೆ ಕಾರಣವೇನು?

ಮುಂಬೈ(ಅ.03) ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಸಾಮ್ರಾಜ್ಯಕ್ಕೆ ಅತೀ ದೊಡ್ಡ ಆತಂಕ ಎದುರಾಗಿದೆ. ಒಂದೇ ಒಂದು ದಿನದಲ್ಲಿ ಮುಕೇಶ್ ಅಂಬಾನಿ ಬರೋಬ್ಬರಿ 77,606 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಆದ ತಲ್ಲಣ. ರಿಲಯನ್ಸ್ ಇಂಡಸ್ಟ್ರಿ ಷೇರುಗಳು ಶೇಕಡಾ 4 ರಷ್ಟು ಕುಸಿತ ಕಂಡಿದೆ. ಇದರಿಂದ ಮುಕೇಶ್ ಅಂಬಾನಿ ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಕಟ್ಟಿದ ಉದ್ಯಮ ಸಾಮ್ರಾಜ್ಯದಲ್ಲಿ ಏಕಾಏಕಿ ಕುಸಿತ ಕಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರಿ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಆಯಿಲ್, ನ್ಯಾಚ್ಯುರಲ್ ಗ್ಯಾಸ್, ಎಫ್ಎಂಸಿಜಿ ಸೇರಿದಂತೆ ಹಲವು ರಿಲಯನ್ಸ್ ಷೇರಗಳು ಕುಸಿತ ಕಂಡಿದೆ. ಹಲವು ಕ್ಷೇತ್ರಗಳ ಷೇರುಗಳ ಕುಸಿತದಿಂದ ಮುಕೇಶ್ ಅಂಬಾನಿ ಒಂದೇ ದಿನದಲ್ಲಿ  77,606 ಕೋಟಿ ರೂಪಾಯಿ ಕಳೆದುಕೊಂಡಿದೆ. ಸದ್ಯ(ಅಕ್ಟೋಬರ್ 3) ರಿಲಯನ್ಸ್ ಇಂಡಸ್ಟ್ರಿ ಮಾರ್ಕೆಟ್ ಮೌಲ್ಯ 19,04,762.79 ರೂಪಾಯಿಗೆ ಇಳಿಕೆಯಾಗಿದೆ.

Latest Videos

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !

ಮುಕೇಶ್ ಅಂಬಾನಿ ನಷ್ಟಕ್ಕೆ ಕಾರಣವೇನು?
ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿ ಪ್ರಮುಖ ಷೇರುಗಳಲ್ಲಾದ ಶೇಕಡಾ 4 ರಷ್ಟು ಕುಸಿತ ಈ ನಷ್ಟಕ್ಕೆ ಮೂಲ. ಇದಕ್ಕೆ ಮುಖ್ಯ ಕಾರಣ ಮದ್ಯ ಪ್ರಾಚ್ಯದೇಶದಲ್ಲಿ ನಡೆಯುತ್ತಿರುವ ಯುದ್ಧ. ಇಸ್ರೇಲ್, ಲೆಬೆನಾನ್, ಇರಾನ್ ಸೇರಿದಂತೆ ಸುತ್ತ ಮುತ್ತಲಿನ ದೇಶಗಳ ಯುದ್ಧದಿಂದ ಗ್ಯಾಸ್, ತೈಲ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದು ರಿಲಯನ್ಸ್ ಇಂಡಸ್ಟ್ರಿಯಲ್ಲಿ ರಿಲಯನ್ಸ್ ಆಯಿಲ್, ನ್ಯಾಚ್ಯುರಲ್ ಗ್ಯಾಸ್ ಮೇಲೂ ಹೊಡೆತ ನೀಡಿದೆ.

ಕಳೆದ ಮೂರು ದಿನಗಳಿಂದ ರಿಲಯನ್ಸ್ ಇಂಡಸ್ಟ್ರಿ ಷೇರುಗಳು ಕುಸಿತ ಕಾಣುತ್ತಲೇ ಇದೆ. ಬಿಎಸ್‌ಇ ಸೆನ್‌ಸೆಕ್ಸ್ ಶೇಕಡಾ 2.10 ರಷ್ಟು ಕುಸಿತ ಕಂಡಾಗ ರಿಲಯನ್ಸ್ ಷೇರುಗಳು ಶೇಕಡಾ 7.76ರಷ್ಟು ಕುಸಿತ ಕಂಡಿತ್ತು.  ರಿಲಯನ್ಸ್ ಇಂಡಸ್ಟ್ರೀ ಷೇರುಗಳ ಕುಸಿತ ಕಂಡಿದ್ದರೂ ಮಕೇಶ್ ಅಂಬಾನಿ ವೈಯುಕ್ತಿಕ ಆಸ್ತಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸದ್ಯ ಮುಕೇಶ್ ಅಂಬಾನಿ ಒಟ್ಟು ಆಸ್ತಿ 93,0836  ಕೋಟಿ ರೂಪಾಯಿ. ಇದರಿಂದ ಮುಕೇಶ್ ಈಗಲೂ ಏಷ್ಯಾದ ನಂಬರ್ 1 ಶ್ರೀಮಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!

ಹೆಜ್ಬೊಲ್ಲ, ಇರಾನ್, ಲೆಬೆನಾನ್ ಸೇರಿ ಕೆಲ ರಾಷ್ಟ್ರಗಳು ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇದರಿಂದ ತೈಲ ಮಾರುಕಟ್ಟೆಯಲ್ಲಿ ಭಾರಿ ಪರಿಣಾಮ ಬೀರಿದೆ. ಯುದ್ಧ ಹೀಗೆ ಮುಂದುವರಿದರೆ ಭಾರತ ಸೇರಿದಂತೆ ಹಲವು ದೇಶಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದರ ಮೊದಲ ಭಾಗವಾಗಿ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಲಾರಂಭಿಸಿದೆ.
 

click me!