ಕೊರೊನಾ ನಿಯಮ ಉಲ್ಲಂಘಿಸಿ ನರ್ಸರಿ ಓಪನ್; ಸುವರ್ಣ ನ್ಯೂಸ್ ವರದಿಯಿಂದ ಮಾನ್ಯತೆಯೇ ರದ್ದು..!

Jun 4, 2020, 6:46 PM IST

ಬೆಂಗಳೂರು (ಜೂ. 06): ಕೊರೊನಾ ಭೀತಿಯ ನಡುವೆಯೇ ವಿಜಯಪುರದಲ್ಲಿ ನರ್ಸರಿ ಶಾಲೆಯನ್ನು ಗುಟ್ಟಾಗಿ ಓಪನ್ ಮಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದ ಸುವರ್ಣ ನ್ಯೂಸ್ ಸ್ಥಳಕ್ಕೆ ಧಾವಿಸಿ ಅಲ್ಲಿನ ಚಿತ್ರಣವನ್ನು ವರದಿ ಮಾಡಿದ್ದು ಇದೀಗ ನರ್ಸರಿ ಮಾನ್ಯತೆ ರದ್ದಾಗಿದೆ. 

ಶಾಲೆಗಳ ಪುನಾರಂಭ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತನೆ

ಕೊರೊನಾ ಆದೇಶವನ್ನು ಉಲ್ಲಂಘನೆ ಮಾಡಿ ನರ್ಸರಿ ಶಾಲೆಯನ್ನು ನಡೆಸಲಾಗುತ್ತಿತ್ತು. ಮಕ್ಕಳ ಸುರಕ್ಷತೆ ಬಗ್ಗೆ ಗಮನವನ್ನು ಕೊಟ್ಟಿರಲಿಲ್ಲ. ಈ ಬಗ್ಗೆ ಸುವರ್ಣ ನ್ಯೂಸ್ ಇಂದು ವರದಿಯನ್ನು ಬಿತ್ತರಿಸಿತ್ತು. ವರದಿ ಬಳಿಕ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವ ಆದೇಶ ಶಿಕ್ಷಣ ಇಲಾಖೆ ನೀಡಿದ್ದು, ಆದೇಶ ಪ್ರತಿಯಲ್ಲಿ ಸುವರ್ಣ ನ್ಯೂಸ್ ವರದಿಯನ್ನು ಉಲ್ಲೇಖಿಸಲಾಗಿದೆ. ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್!