ಪ್ಯಾಕೆಟ್ ಹಾಲನ್ನು ಕುದಿಸುತ್ತೀರಾ.? ಈ ತಪ್ಪು ಇನ್ಮೇಲೆ ಮಾಡಬೇಡಿ!

First Published | Nov 28, 2024, 8:40 PM IST

ನೀವು ಪ್ಯಾಕೆಟ್ ಹಾಲು ಖರೀದಿ ಮಾಡುತ್ತೀರಾ..? ಅದನ್ನು ದಿನಕ್ಕೆ ಎಷ್ಟು ಸಲ ಕಾಯಿಸುತ್ತೀರಿ. ಹೆಚ್ಚು ಹೊತ್ತು ಕಾಯಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಪ್ಯಾಕೆಟ್ ಹಾಲು ಉಪಯೋಗಿಸ್ತಾರೆ. ಕಾರಣ ಈ ಪ್ಯಾಕೆಟ್ ಹಾಲು ಬಿಟ್ಟರೆ ನಮಗೆ ಬೇರೆ ಆಯ್ಕೆ ಇಲ್ಲ. ಬೆಳಿಗ್ಗೆ ಮಕ್ಕಳಿಗೆ ಹಾಲು, ಮನೆಯವರಿಗೆ ಟೀ, ಕಾಫಿ, ಮಧ್ಯಾಹ್ನ ಊಟಕ್ಕೆ ಮೊಸರು ಬೇಕೆಂದರೆ ಹಾಲು ಇರಲೇಬೇಕು. ಆದರೆ, ಈಗಿನ ಕಾಲದಲ್ಲಿ ಶುದ್ಧವಾದ ಹಸು ಹಾಗೂ ಎಮ್ಮೆ ಹಾಲು ಸಿಗುವುದಿಲ್ಲ. ಹೀಗಾಗಿ ಪ್ಯಾಕೆಟ್ ಹಾಲು ಉಪಯೋಗಿಸುತ್ತಾರೆ.

ಹಳ್ಳಿಗಳಲ್ಲಿ ಇರೋರಿಗೆ ಶುದ್ಧವಾದ ಹಸು, ಎಮ್ಮೆ, ಆಡು ಹಾಲು ಸಿಗುತ್ತದೆ. ಆದರೆ, ನಗರಗಳಲ್ಲಿ ಇರೋರಿಗೆ ಆ ಆಯ್ಕೆ ಇರಲ್ಲ. ಹಾಗಾಗಿ ಪ್ಯಾಕೆಟ್ ಹಾಲು ಉಪಯೋಗಿದುತ್ತೇವೆ. ಆದರೆ, ಈ ಹಾಲು ಉಪಯೋಗಿಸೋ ಮುಂಚೆ ತಿಳಿದುಕೊಳ್ಳಲೇಬೇಕಾದ ಒಂದು ವಿಷ್ಯ ಇದೆ. ಅದೇನು ನೋಡೋಣ..

Latest Videos


ಪ್ಯಾಕೆಟ್ ಹಾಲನ್ನು ಹೇಗೆ ಮಾಡುತ್ತಾರೆ?
ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಹಾಗೂ ಮಿಲ್ಕ್‌ ಪಾರ್ಲರ್‌ಗಳಲ್ಲಿ ಖರೀದಿ ಮಾಡುವ ಪ್ಯಾಕೆಟ್ ಹಾಲು ಪಾಶ್ಚರೀಕರಣ ಮಾಡಲಾಗಿರುತ್ತದೆ. ಈ ಹಾಲನ್ನು ಒಂದು ನಿರ್ದಿಷ್ಟ ಉಷ್ಣತೆಗೆ ಕಾಯಿಸಿ ಪ್ಯಾಕೆಟ್‌ಗಳಲ್ಲಿ ತುಂಬಿರುತ್ತಾರೆ.

ಕೆಲವು ಹಾಲಿನ ಪ್ಯಾಕೆಟ್‌ಗಳ ಮೇಲೆ ಯಾವ ಹಾಲನ್ನು ಯಾವುದಕ್ಕೆ ಬಳಸಬೇಕು ಅಂತ ಸ್ಪಷ್ಟವಾಗಿ ಬರೆದಿರುತ್ತದೆ. ಆದರೆ, ನಾವು ಹಾಲಿನ ಪ್ಯಾಕೆಟ್ ಮೇಲೆ ಏನೆಂದು ಬರೆಯಲಾಗಿದೆ ಎಂಬುದನ್ನು ನೋಡದೇ ಸ್ಟೌ ಹಚ್ಚಿ ಪಾತ್ರೆಯನ್ನುಟ್ಟು ಕಾಯಿಸುತ್ತೇವೆ. ಆದರೆ, ಈ ಪ್ಯಾಕೆಟ್ ಹಾಲನನ್ನು ಮತ್ತೆ ಮತ್ತೆ ಕಾಯಿಸಿದರೆ ಪ್ರಯೋಜನ ಇರಲ್ಲ.

ಈಗಾಗಲೇ ಒಮ್ಮೆ ಹಾಲನ್ನು ಪಾಶ್ಚರೀಕರಣ ಮಾಡುವಾಗ ನಿಗದಿತ ಮಿತಿವರೆಗೆ ಬಿಸಿಯಾಗಿ ಮಾಡಿ ಪ್ಯಾಕೆಟ್‌ನಲ್ಲಿ ತುಂಬಿರುತ್ತಾರೆ. ಈಗ ಅದೇ ಹಾಲನ್ನು ಮತ್ತೆ ಕಾಯಿಸಿದರೆ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಹಾಲಿನಲ್ಲಿರುವ ವಿಟಮಿನ್ ಬಿ12 ನಮ್ಮ ಶರೀರಕ್ಕೆ ಶಕ್ತಿ ನೀಡುತ್ತದೆ. ಅದನ್ನು ಕಾಯಿಸುತ್ತಾ ಹೋದಂತೆ ಅದು ನಾಶವಾಗುತ್ತದೆ.
 

ಶುದ್ಧ ಹಸಿಯಾದ ಹಾಲಿನಲ್ಲಿ ಕ್ರಿಪ್ಟೋಸ್ಪೋರಿಡಿಯಂ, ಕ್ಯಾಂಪಿಲೋಬ್ಯಾಕ್ಟರ್, ಬ್ರೂಸೆಲ್ಲಾ, ಲಿಸ್ಟೇರಿಯಾ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಕಾಯಿಸಿ ಕುಡಿದರೆ ಇವು ನಾಶವಾಗಿ, ಹಾಲು ಸುರಕ್ಷಿತವಾಗುತ್ತದೆ. ದಿನಾ ಹಾಲು ಕುಡಿಯುವವರು ಪ್ಯಾಕೆಟ್ ಹಾಲನ್ನು ಕಾಯಿಸಬೇಕಾಗಿಲ್ಲ. ಸ್ವಲ್ಪ ಬಿಸಿ ಮಾಡಿಕೊಂಡು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.  ಹಾಲಿನ ಪ್ಯಾಕೆಟ್ ಮೇಲೆ ಆ ಹಾಲನ್ನು ಹೇಗೆ ಬಳಸಬೇಕು ಅಂತ ಬರೆದಿರುತ್ತದೆ. ಅದರ ಪ್ರಕಾರ ಮಾತ್ರ ಆ ಹಾಲನ್ನು ಕಾಯಿಸಿಕೊಳ್ಳಬೇಕು. ಕೆಲವನ್ನು ಕುದಿಸದೆ, ಬಿಸಿ ಮಾಡಿದರೆ ಸಾಕು.

click me!