ವಯಸ್ಸಾದ ಮಹಿಳೆಯನ್ನು ಮದುವೆಯಾಗುವುದರ ಪ್ರಯೋಜನಗಳೇನು?

By Suvarna News  |  First Published Nov 28, 2024, 9:17 PM IST

ಹೊಸ ಜನರೇಷನ್‌ನಲ್ಲಿ ಸಂಬಂಧಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ: ಹುಡುಗಿ ಹುಡುಗನಿಗಿಂತ ದೊಡ್ಡವಳಾಗಿದ್ದರೆ ಮದುವೆಯಾಗಬಹುದೇ? ತನಗಿಂತ ದೊಡ್ಡವಳೊಂದಿಗೆ ಮದುವೆಯಾಗುವುದರ ಪ್ರಯೋಜನಗಳೇನು? ಹೊಸ ತಲೆಮಾರಿನ ಹುಡುಗ ಹುಡುಗಿಯ ಫ್ಯಾಂಟಸಿ ಏನೆಂದು ನೋಡೋಣ.


ಸಾಮಾನ್ಯವಾಗಿ ಮದುವೆಗಳಲ್ಲಿ ಹುಡುಗನ ವಯಸ್ಸು ಹುಡುಗಿಯ ವಯಸ್ಸಿಗಿಂತ ಹೆಚ್ಚಿರುತ್ತದೆ. ಹುಡುಗನ ವಯಸ್ಸು 21, ಹುಡುಗಿಯ ವಯಸ್ಸು 18 ತುಂಬಿರಬೇಕು ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗರು ವಯಸ್ಸಿನಲ್ಲಿ ತನಗಿಂತ ದೊಡ್ಡವಳದ ಯುವತಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.ಇನ್ನು ಕೆಲವರು ವಯಸ್ಸನ್ನೂ ಲೆಕ್ಕಿಸದೆ ಮದುವೆಯಾಗುತ್ತಿದ್ದಾರೆ. ಈ ಟ್ರೆಂಡಿ ಲವ್‌ನಲ್ಲಿ ಅವರು ಹೆಚ್ಚು ಹೇಳುತ್ತಿರುವುದು ಏನೆಂದರೆ, ಏಜ್‌ ಜಸ್ಟ್ ಎ ನಂಬರಮ್ಮ, ಆಲ್ ದಟ್ ಮ್ಯಾಟರ್ಸ್ ಲವ್ ಆಗಿದೆ ಅಂತಾ.

ನಮ್ಮ ಹಿರಿಯರ ಪ್ರಕಾರ ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು. ಹುಡುಗಿಯರು ಚಿಕ್ಕವಯಸ್ಸಿನಲ್ಲೇ ಪ್ರಬುದ್ಧರಾಗುತ್ತಾರೆ. ಹೀಗಾಗಿ ಹುಡುಗಿಯರನ್ನು ಅವಳಿಗಿಂತ ದೊಡ್ಡವನೊಂದಿಗೆ ಮದುವೆ ಮಾಡುತ್ತಾರೆ. ಆದರೆ ಇತ್ತೀಚಿನ ಜನರೇಷನ್ ಯುವಕ ಯುವತಿ ಮದುವೆ ಬಗ್ಗೆ ಯೋಚಿಸುವ ರೀತಿಯೇ ಬದಲಾಗಿದೆ. ಇದೀಗ ಹುಡುಗರ ತನಗಿಂತ ದೊಡ್ಡವಳೊಂದಿಗೆ ಮದುವೆ ಬಯಸುತ್ತಿದ್ದಾರಂತೆ ಅದಕ್ಕೆ ಕಾರಣಗಳು ಇವೆ.

Latest Videos

undefined

ಸ್ವಂತ ಮಗ ಅಖಿಲ್‌ಗಾಗಿ ನಾಗಚೈತನ್ಯನಿಗೆ ಬೇಧಭಾವ ಮಾಡಿದ್ರಾ ಮಲತಾಯಿ ಅಮಲಾ ಅಕ್ಕಿನೇನಿ!

ಜನರೇಶನ್ ತುಂಬಾ ಬದಲಾಗಿದೆ. ಹುಡುಗಿಯರು ಮುಗ್ಧರಾಗಿದ್ದರೆ ಚಿಕ್ಕವಯಸ್ಸಿನ ಹುಡುಗರನ್ನು ಇಷ್ಟಪಡುವುದು. ಹುಡುಗರು ಪ್ರಬುದ್ಧರಾಗಿದ್ದರೆ ದೊಡ್ಡ ಹುಡುಗಿಯರನ್ನು ಇಷ್ಟಪಡುವುದು ಸಾಮಾನ್ಯವಾಗಿದೆ.ಆದರೆ ಹಿಂದೆ ಹೀಗಿರಲಿಲ್ಲ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳನ್ನು ಅಥವಾ ಸಣ್ಣ ಯುವಕನನ್ನು ಮದುವೆಯಾದ್ರೆ ಸಮಾಜ ಮಾತನಾಡಿಕೂಳ್ಳುತ್ತಿತ್ತು. ಆದರಿಂದ ವಯಸ್ಸಾದ ಹುಡುಗಿಯರನ್ನು ಮದುವೆಯಾಗುವ ಟ್ರೆಂಡ್ ಬೆಳೆಯುತ್ತಿದೆ.

ಏನು ಪ್ರಯೋಜನ?
ವಯಸ್ಸಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಂಡರೆ ಸಂಬಂಧದಲ್ಲಿ ತಿಳುವಳಿಕೆ ಕೂಡ ಉತ್ತಮವಾಗಿರುತ್ತದೆ. ಅಲ್ಲದೆ ಆಕೆಗೆ ತನ್ನ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಇರುತ್ತದೆ. ತನಗೆ ಏನು ಬೇಕು ಎಂಬುದರ ಬಗ್ಗೆ ಉತ್ತಮ ತಿಳುವಳಿಕೆಯೂ ಇರುತ್ತದೆ. ಆದ್ದರಿಂದ ಪರಸ್ಪರ ತೊಂದರೆ ಕೊಡುವ ಸಾಧ್ಯತೆ ಕಡಿಮೆ. ಅವರು ನಿಮಗೆ ಆರ್ಥಿಕವಾಗಿಯೂ ಬೆಂಬಲ ನೀಡುತ್ತಾರೆ. ಅಥವಾ ಸ್ವತಂತ್ರ ಕೂಡ ನೀಡುತ್ತಾರೆ. ಇದರಿಂದ ನೀವು ಆರ್ಥಿಕವಾಗಿ ತೊಂದರೆ ಅನುಭವಿಸುವ ಅಗತ್ಯವಿಲ್ಲ. ಇದು ಆಶಯಕ್ಕಿಂತ ವಾಸ್ತವಿಕವಾಗಿದೆ. ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹುಡುಗಿ ನಿಮ್ಮ ಜೀವನದಲ್ಲಿ ಬರಬಹುದು. 

ಕಿಸಿಕ್ ಎಂದು ಅಲ್ಲು ಅರ್ಜುನ್ ಎದುರು ಕುಣಿದ ಶ್ರೀ ಲೀಲಾ; ಇದಕ್ಕೆ ಕೋಟಿ ಡಿಮ್ಯಾಂಡ್ ಮಾಡಿದ್ದು ನಿಜವೇ?

 ಇದು ಎಲ್ಲರಿಗೂ ಅನ್ವಯಿಸುವ ನಿಯಮವಿಲ್ಲ. ಯಾಕೆಂದರೆ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅಲ್ಲದೆ, ಈ ವಯಸ್ಸಿನ ಪರಿಣಾಮವು ಕೆಲವು ಮನೆಗಳಲ್ಲಿ ಇರುತ್ತದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ನೀವು ಅವರ ಬಗ್ಗೆ ಅತಿಯಾಗಿ ಕಾಳಜಿ ವಹಿಸುತ್ತಿದ್ದೀರಿ ಎಂದು ಹುಡುಗರು ಭಾವಿಸುವ ಸಾಧ್ಯತೆಯಿದೆ. ಅಂತಹ ಸಂಬಂಧಗಳು ಕೆಲಸ ಮಾಡಲು ಹಲವು ಅಂಶಗಳು ಸೂಕ್ತವಾಗಿರಬೇಕು. ನಿಮ್ಮ ಪರಿಸ್ಥಿತಿಗಳು ಮತ್ತು ನೀವು ಅರ್ಥಮಾಡಿಕೊಳ್ಳುವ ರೀತಿಯನ್ನು ಅವಲಂಬಿಸಿ.. ನೀವು ವಯಸ್ಸಾದವರಾದರೂ ದೊಡ್ಡ ಸಮಸ್ಯೆ ಇಲ್ಲ. ಈ ಸಂಬಂಧಗಳಲ್ಲಿ ಸಂವಹನ, ಹೊಂದಾಣಿಕೆ ಮತ್ತು ಗೌರವವೂ ಪ್ರಮುಖ ಪಾತ್ರ ವಹಿಸುತ್ತದೆ. 

click me!