ಕೋವಿಡ್ ಕೇಂದ್ರಕ್ಕೆ ಹೊಸ ಬಿಬಿಎಂಪಿ ಹೊಸ ಪ್ಲಾನ್; ಶಾಲೆಗಳೇ ಕೋವಿಡ್ ಕೇಂದ್ರಗಳು?

Jul 24, 2020, 4:10 PM IST

ಬೆಂಗಳೂರು (ಜು. 24): ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕೊರೊನಾ ಸೋಂಕಿತರ ರಕ್ಷಣೆಗೆ ಬಿಬಿಎಂಪಿ ಹರಸಾಹಸಪಡುತ್ತಿದೆ. ಕೋವಿಡ್ ಕೇಂದ್ರಕ್ಕೆ ಬಿಬಿಎಂಪಿ ಹೊಸ ಪ್ಲಾನ್ ಮಾಡುತ್ತಿದೆ. ಹೊಟೇಲ್ ಆಯ್ತು, ಈಗ ಶಾಲೆಗಳು ಕೋವಿಡ್ ಕೇಂದ್ರಗಳಾಗಲಿದೆ. ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಮಾರ್ಪಡಿಸಲು ಚಿಂತನೆ ನಡೆಸಲಾಗಿದೆ. ಆದರೆ ಇದಕ್ಕೆ ತಜ್ಞರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೋವಿಡ್ 19: ಸದ್ಯ ಬೆಂಗಳೂರಿನ ಚಿತ್ರಣವೇನು? ಬಿಬಿಎಂಪಿ ಹೆಲ್ತ್‌ ರಿಪೋರ್ಟ್‌ ಇದು!