ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಕೆಜಿಎಫ್‌ ಸ್ಟಾರ್‌ ಯಶ್‌ ಹೀರೋಯಿನ್‌!

First Published | May 7, 2024, 8:25 PM IST

ಸಿನಿಮಾ ಕ್ಷೇತ್ರದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ಆಗುತ್ತಾರೋ, ವಿಚ್ಛೇದನ ಅಷ್ಟೇ ಸೈಲೆಂಟ್‌ ಆಗಿ ಆಗುತ್ತದೆ. ಅದರಂತೆ, ನಾಲ್ಕು ವರ್ಷಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿದ್ದ ಹೀರೋಯಿನ್‌ ಈಗ ತಾವು ವಿಚ್ಛೇದನ ಪಡೆದುಕೊಂಡಿರುವುದಾಗಿ ಖಚಿತಪಡಿಸಿದ್ದಾರೆ.

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

Bhama Single Mother

ಹೌದು, ಯಶ್‌ ಅಭಿನಯದ ಮೊದಲಾಸಲ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿದ್ದ ಮುದ್ದುಮುಖದ ಬೆಡಗಿ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Tap to resize

ಪತಿಯಿಂದ ಬೇರೆಯಾಗಿರುವುದನ್ನು ನಟಿ ಭಾಮಾ ಖಚಿತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮಲಯಾಳಿಗಳ ನೆಚ್ಚಿನ ನಟಿ ಭಾಮಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಾನು ಸಿಂಗಲ್ ಮದರ್ ಎಂದು ಸ್ಪಷ್ಟಪಡಿಸಿದ್ದಾರೆ.

ಭಾಮಾ ಮತ್ತು ಅರುಣ್ ಜಗದೀಶ್ 2020ರಲ್ಲಿ  ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯ ನಂತರ ಭಾಮಾ ಚಿತ್ರರಂಗದಿಂದ ದೂರವೇ ಉಳಿದಿದ್ದರು.


ಇದಕ್ಕೂ ಮುನ್ನ ಭಾಮಾ ತನ್ನ ಪತಿಯೊಂದಿಗೆ ಮಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಭಾಮಾ ಇತ್ತೀಚೆಗೆ ಅಷ್ಟೊಂದು ಚಿತ್ರಗಳನ್ನು ಹಂಚಿಕೊಂಡಿರಲಿಲ್ಲ.

ತನ್ನ ಪತಿಯ ಚಿತ್ರಗಳನ್ನು ತೆಗೆದುಹಾಕಿದ ನಂತರ, ನಟಿ ತನ್ನ ಹೆಸರನ್ನು ಭಾಮಾ ಅರುಣ್‌ರಿಂದ, ಭಾಮಾ ಎಂದು ಬದಲಾಯಿಸಿದ್ದರು. ಆದರೆ, ಬೇರ್ಪಟ್ಟ ಸುದ್ದಿಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

"ನಾನು ಸಿಂಗಲ್‌ ಮದರ್‌ ಆಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. "ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ" ಎಂದು ಮಗುವಿನೊಂದಿಗೆ ಪೋಸ್ಟ್‌ನಲ್ಲಿ ಭಾಮಾ ಬರೆದುಕೊಂಡಿದ್ದಾರೆ.

ಆದರೆ ಭಾಮಾ ಅಧಿಕೃತವಾಗಿ ಪತಿಯಿಂದ ಬೇರ್ಪಟ್ಟಿದ್ದಾರೆಯೇ ಎಂಬುದನ್ನು ಪೋಸ್ಟ್ ಸ್ಪಷ್ಟಪಡಿಸಿಲ್ಲ. ಭಾಮಾ ಕೊನೆಯದಾಗಿ 2017 ರಲ್ಲಿ ಕನ್ನಡ ಚಿತ್ರ ರಾಗಾದಲ್ಲಿ ನಟಿಸಿದ್ದರು.

2007 ರಲ್ಲಿ ನಿವೇದ್ಯಂ ಚಿತ್ರದ ಮೂಲಕ ಭಾಮಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಭಾಮಾ ತಮಿಳು, ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಅರುಣ್‌ ಜಗದೀಶ್‌ ಅವರನ್ನು 2020ರ ಜನವರಿಯಲ್ಲಿ ಭಾಮಾ ವಿವಾಹವಾಗಿದ್ದರು. ವಿವಾಹದ ಬಳಿಕ ಸಿನಿಮಾದಿಂದ ಅವರು ದೂರವಾಗಿದ್ದರು.

ಭಾಮಾ ಕುರುಪ್‌ ಅವರ ಹುಟ್ಟೂರು ಕೊಟ್ಟಾಯಂನಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿತ್ತು. ಆದರೆ, ನಾಲ್ಕೇ ವರ್ಷಗಳಲ್ಲಿ ಮದುವೆ ಮುರಿದುಬಿದ್ದಿದೆ,

ಭಾಮಾ ಕುರುಪ್‌ ಹಾಗೂ ಅರುಣ್‌ ಜಗದೀಶ್‌ ಅವರ ವಿಚ್ಛೇದನಕ್ಕೆ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.

ಭಾಮಾ ತನ್ನ ಮದುವೆಯ ದಿನದಂದು ಸೀಮಟ್ಟಿ ಟೆಕ್ಸ್‌ಟೈಲ್ಸ್‌ನಿಂದ ಕಸ್ಟಮ್‌ಮೇಡ್‌ ಕೆಂಪು-ಚಿನ್ನದ ಕಾಂಚೀಪುರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದು ಸಾಕಷ್ಟು ಹೈಲೈಟ್‌ ಆಗಿತ್ತು.

ಭಾಮಾ ಕುರುಪ್‌ ಹಾಗೂ ಅರುಣ್‌ ಜಗದೀಶ್‌ ಮೊದಲು ಪರಿಚಯವಿರಲಿಲ್ಲ. ಕುಟುಂಬದ ಸ್ನೇಹಿತರದಿಂದ ಇವರು ಪರಿಚಯವಾಗಿದ್ದರು. ಬಳಿಕ ಅರೇಂಜ್ಡ್‌ ಮ್ಯಾರೇಜ್‌ ಆಗಿದ್ದರು.

ಕೆನಡಾದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದ ಅರುಣ್‌ ಜಗದೀಶ್‌, ದುಬೈನಲ್ಲಿ ತಮ್ಮ ಉದ್ಯಮವನ್ನು ನೋಡಿಕೊಂಡು ಅಲ್ಲಿಯೇ ಸೆಟಲ್‌ ಆಗಿದ್ದರು.

Latest Videos

click me!