Feb 20, 2023, 6:19 PM IST
ಬೆಂಗಳೂರು (ಫೆ.20): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಐಜಿಪಿ ಡಿ. ರೂಪಾ ಮೌದ್ಗಿಲ್ ಅವರು ಕೂಡ ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವ ಶಕ್ತಿ ನನ್ನನ್ನು ತಡೆಯುತ್ತೆ ನೋಡ್ತೀನಿ ಎಂದು ಹೇಳುವ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಮ್ಮೆ ರೂಪಾ ಗುಡುಗಿದ್ದಾರೆ.
ಐಜಿಪಿ ಡಿ. ರೂಪ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸೀಂಧೂರಿ ಅವರ ನಡುವೆ ನಡೆಯುತ್ತಿರುವ ಜಗಳದ ಕುರಿತು ರೋಹಿಣಿ ಸಿಂಧೂರಿ ಅವರು ಇಂದು ಬೆಳಗ್ಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದರು. ಇದರ ಬೆನ್ಲಲ್ಲೇ ಐಜಿಪಿ ಡಿ.ರೂಪ ಅವರಿಂದಲೂ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಲಾಗಿದೆ. ಜಾಲಹಳ್ಳಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗೆ ಸುಮಾರು 2 ಕೋಟಿ ರೂ. ಮೌಲ್ಯದ ಪೀಠೋಪಕರಣಗಳನ್ನು ಇಟಲಿಯಿಂದ ತರಿಸಿಕೊಳ್ಳಲಾಗಿದೆ. ಬಾಗಿಲಿನ ಹಿಂಜಸ್ ಒಂದಕ್ಕೇ ಬರೋಬ್ಬರು 6 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೋಹಿಣಿ ಸಂಧೂರಿ ಅವರು ನೀಡಿದ ದೂರಿನಲ್ಲಿ 26 ಲಕ್ಷ ಜರ್ಮನ್ ಅಪ್ಲೈಯನ್ಸಸ್ ಬಳಸಿದ್ದಾರೆ ಎಂದು ಹೇಳಿದ್ದಾರೆ.
ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುತ್ತೇನೆ: ಆಕೆ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲ ಎನ್ನುವುದು ಗೊತ್ತು. ಯಾವುದೇ ಸಂಸ್ಥೆಯು ತನಿಖೆ ಮಾಡಿದರೂ ಅವರಿಗೆ ರೋಹಿಣಿ ಸಿಂಧೂರಿ ಅವರ ಚಾಟಿಂಗ್ ಮಾಡಿರುವ ಬಗ್ಗೆ ಸಾಕ್ಷಿಗಳನ್ನು ಒದಗಿಸುತ್ತೇನೆ. ಅವರು ಸರ್ವಿಸ್ ಕಂಡಕ್ಟ್ ರೂಲ್ ವೈಲೇಷನ್ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿಯೇ ದೂರು ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ವೈಯಕ್ತಿಕ ವಿಚಾರಗಳು ಇಲ್ಲ ಎಂದು ತಿಳಿದಿದ್ದಾರೆ.