ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ

By Mahmad Rafik  |  First Published Nov 1, 2024, 9:43 PM IST

ಈ ವ್ಯವಹಾರ ಆರಂಭಿಸಿ ತಿಂಗಳಿಗೆ 2 ಲಕ್ಷ ರೂ. ಗಳಿಸಬಹುದು. ಸುಧಾರಿತ ತಂತ್ರಜ್ಞಾನದ ಯಂತ್ರ ಬಳಸಿದ್ರೆ ಹೆಚ್ಚಿನ ಲಾಭ ನಿಮ್ಮದಾಗೋದರಲ್ಲಿ ಸಂದೇಹವಿಲ್ಲ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಲಾಭ ಗಳಿಸಿ.


ಬೆಂಗಳೂರು: ಇಂದು ಪ್ರತಿಯೊಬ್ಬರು ತಮ್ಮದೇ ಆದ ಸ್ವಂತ ವ್ಯವಹಾ ಆರಂಭಿಸಬೇಕು ಎಂದು ಕನಸು ಕಾಣುತ್ತಾರೆ. ಆದ್ರೆ ಯಾವ ವ್ಯವಹಾರ ಆರಂಭಿಸಬೇಕು ಎಂಬುದರ ಬಗ್ಗೆ ಗೊಂದಲದಲ್ಲಿರುತ್ತಾರೆ. ಇಂದು ನಾವು ಹೇಳುವ ಬ್ಯುಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿವರೆಗೂ ಹಣ ನಿಮ್ಮದಾಗಿಸಿಕೊಳ್ಳಬಹುದು. ಈ ವ್ಯವಹಾರ ಆರಂಭಿಸಲು ಸುಧಾರಿತ ತಂತ್ರಜ್ಞಾನವುಳ್ಳ ಯಂತ್ರದ ಅವಶ್ಯಕತೆ ಇರುತ್ತದೆ. ಈ ಯಂತ್ರ ಒಂದು ಬಾರಿ ಅಳವಡಿಸಿದ್ರೆ ಇದರ ನಿರ್ವಹಣೆಯೂ ದುಬಾರಿಯಾಗಿರುವುದಿಲ್ಲ.

ಇಂದು ನಾವು ಹೇಳುತ್ತಿರೋದು ಕಡಲೆಹಿಟ್ಟಿನ ಬ್ಯುಸಿನೆಸ್. ಭಾರತದ ಪ್ರತಿ ಅಡುಗೆ ಮನೆಯಲ್ಲಿ ಕಡಲೆಹಿಟ್ಟು ಬಳಕೆಯಾಗುತ್ತದೆ. ಬಜ್ಜಿ, ಪಕೋಡಾ, ಸಾಂಬಾರ್, ಕರ್ರಿ, ಬೂಂದಿ, ಬೇಕರಿ ತಿಂಡಿ ಹೀಗೆ ಕಡಲೆಹಿಟ್ಟು ಬಳಸಿ ಬಗೆ ಬಗೆಯ ರುಚಿಕರ ಆಹಾರ ಸಿದ್ಧಪಡಿಸಲಾಗುತ್ತದೆ. ತ್ವಚೆಯ ರಕ್ಷಣೆಗಾಗಿ ಕಡಲೆಹಿಟ್ಟಿನ ಫೇಸ್‌ಪ್ಯಾಕ್ ಸಹ ಬಳಸಲಾಗುತ್ತದೆ. ಆದ್ದರಿಂದ ಮಳೆ, ಬಿಸಿಲು, ಚಳಿ ಏನೇ ಇರಲಿ, ಎಲ್ಲಾ ಕಾಲದಲ್ಲೂ ಕಡಲೆಹಿಟ್ಟು ಬೇಡಿಕೆಯನ್ನು ಹೊಂದಿರುತ್ತವೆ. ಹಾಗಾಗಿ ಕಡಲೆಹಿಟ್ಟು ತಯಾರಿಸುವ ಬ್ಯುಸಿನೆಸ್ ಆರಂಭಿಸಿದ್ರೆ ಹೆಚ್ಚು ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು ವಾಸಿಸುವ ಪ್ರದೇಶದಲ್ಲಿ ಈ ರೀತಿಯು ಯಾವುದೇ ಫ್ಯಾಕ್ಟರಿ ಇರದಿದ್ದರೆ ಖಂಡಿತವಾಗಿ ಈ ಬ್ಯುಸಿನೆಸ್ ಆರಂಭಿಸಬಹುದು. ಸ್ಥಳೀಯ ಮಾರುಕಟ್ಟೆಯಿಂದ ಆರ್ಡರ್ ಪಡೆದುಕೊಂಡು ವ್ಯವಹಾರ ಆರಂಭಿಸಿ ಹಂತ ಹಂತವಾಗಿ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳು ಹೇರಳವಾಗಿವೆ. 

Latest Videos

undefined

ಈ ಬ್ಯುಸಿನೆಸ್ ಆರಂಭಿಸಲು ವಿಸ್ತಾರವಾದ ಪ್ಲಾಂಟ್ ಅವಶ್ಯಕತೆ ಇದೆ. 20 HP ಸಾಮಾರ್ಥ್ಯದ ಯಂತ್ರದಿಂದ ಇಂದು ಗಂಟೆಗೆ ಸುಮಾರು 220 ಕೆಜಿಯಷ್ಟು ಹಿಟ್ಟು ತಯಾರಿಸಬಹುದು. ದಿನಕ್ಕೆ 8-10 ಗಂಟೆ ಕೆಲಸ ಮಾಡಿದರೆ 2 ಟನ್‌ವರೆಗೆ ಹಿಟ್ಟು ಉತ್ಪಾದಿಸಬಹುದು. ಕಾನ್ಪುರದ ಅಂಶುಲ್ ಅರೋರಾ ಎಂಬವರು ಈ ಬ್ಯುಸಿನೆಸ್ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಹಾಗಾದ್ರೆ ಅಂಶುಲ್ ಏನು ಹೇಳುತ್ತಾರೆ ಎಂಬುದನ್ನು ನೋಡೋಣ ಬನ್ನಿ. 

5 HP ಮೋಟಾರ್ ಸಾಮಾರ್ಥ್ಯದ ಯಂತ್ರದಿಂದ ಗಂಟೆಗೆ ಕನಿಷ್ಠ 75 ಕೆಜಿ ಹಿಟ್ಟು ಬರುತ್ತದೆ. ಅದೇ ನೀವು 20 HP ಯಂತ್ರ ಅಳವಡಿಸಿದ್ರೆ 220 ಕೆಜಿಯವರೆಗೆ ಹಿಟ್ಟು ಉತ್ಪಾದಿಸಬಹುದು. ಇದೇ ಯಂತ್ರದಲ್ಲಿ ಅಕ್ಕಿ, ಗೋಧಿಯನ್ನು  ಸಹ ಹಿಟ್ಟು ಮಾಡಬಹುದು. ಒಂದೇ ಯಂತ್ರದಿಂದ ಎರಡಕ್ಕಿಂತ ಹೆಚ್ಚು ಪ್ರೊಡಕ್ಟ್ ಬರುತ್ತದೆ. ಹಾಗೆಯೇ ಈ ಯಂತ್ರ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ನಲ್ಲಿಯೇ ಕೆಲಸ ಮಾಡುತ್ತದೆ. 1 ಕೆಜಿ ಹಿಟ್ಟು ತಯಾರಾಗಲು 30-35 ಪೈಸೆಯಷ್ಟು ವಿದ್ಯುತ್ ಬಳಕೆಯಾಗುತ್ತದೆ ಎಂದು ಅಂಶುಲ್ ಅರೋರಾ ಹೇಳುತ್ತಾರೆ. 

ಇದನ್ನೂ ಓದಿ: ಊರಿನಲ್ಲಿದ್ದುಕೊಂಡು ಲಕ್ಷಾಧಿಪತಿ ಆಗಲು ಈ 5 ವ್ಯವಹಾರ ಆರಂಭಿಸಿ

ದೊಡ್ಡ ಪ್ರಮಾಣದಲ್ಲಿ ಅಂದ್ರೆ ದಿನಕ್ಕೆ 2 ಟನ್‌ವರೆಗೆ ಹಿಟ್ಟು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿವರೆಗೂ ಹಣ ಗಳಿಸಬಹುದಾಗಿದೆ. ಅಂಶಲು ಅವರ ಪ್ರತಿದಿನದ ಆದಾಯ 7 ರಿಂದ 8 ಸಾವಿರ ರೂಪಾಯಿ ಆಗಿದ್ದು, 1 ಕೆಜಿ ಹಿಟ್ಟಿನ ಮೇಲೆ 3 ರೂ.ವರೆಗೆ ಲಾಭ ಸಿಗುತ್ತದೆ ಎಂದು ಅಂಶಲು ವಿವರಿಸುತ್ತಾರೆ.

ಆರಂಭದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಹಿಟ್ಟು ಮಾರಾಟ ಮಾಡಬಹುದಾಗಿದೆ. ನಗರ ಪ್ರದೇಶಗಳಿಗೂ ತೆರಳಿ ದೊಡ್ಡ ಅಂಗಡಿಗಳು, ಹೋಟೆಲ್, ಬೇಕರಿ ಅಂತಹ ಸ್ಥಳದಿಂದಲೂ ಆರ್ಡರ್ ಪಡೆಯಬಹುದು. Instagram, Facebook ಮೂಲಕ ನಿಮ್ಮ ಉತ್ಪನ್ನದ ಬಗ್ಗೆ ಜಾಹೀರಾತು ನೀಡಬಹುದು. ಆನ್‌ಲೈನ್ ಮಾರ್ಕೆಟಿಂಗ್‌ನಿಂದ ಆರ್ಡರ್‌ಗಳು ಬರಲು ಆರಂಭಿಸಿದ್ರೆ ನಿಮ್ಮನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ.

ಇದನ್ನೂ ಓದಿ: 1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ

click me!