ಮಗಳ ಮೊದಲ ಫೋಟೋ ಹಂಚಿಕೊಂಡು, ಪುತ್ರಿಯ ಹೆಸರು ಬಹಿರಂಗಪಡಿಸಿದ ರಣವೀರ್-ದೀಪಿಕಾ!

By Gowthami K  |  First Published Nov 1, 2024, 9:03 PM IST

ದೀಪಾವಳಿ ಹಬ್ಬದಂದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ, ದುವಾ ಎಂದರೆ 'ಪ್ರಾರ್ಥನೆ' ಎಂದರ್ಥ.


ಬೆಳಕಿನ ಹಬ್ಬ ದೀಪಾವಳಿ ದಿನ ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವಳ ಸುಂದರವಾದ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ. 

ದಂಪತಿ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ದಂಪತಿಗಳು ತಮ್ಮ ಸಂತೋಷ ಮತ್ತು ಕೃತಜ್ಞತೆಯನ್ನು Instagram ನಲ್ಲಿ ವ್ಯಕ್ತಪಡಿಸಿದ್ದಾರೆ, ದುವಾ ಎಂದರೆ ಪ್ರಾರ್ಥನೆ ಎಂದು ಬಹಿರಂಗಪಡಿಸಿದ್ದಾರೆ.

Tap to resize

Latest Videos

undefined

ಕೇವಲ ₹5 ಲಕ್ಷದೊಳಗೆ ಫ್ಯಾಮಿಲಿಗೆ ಸೂಪರ್ ಮೈಲೇಜ್ ಕಾರುಗಳು!

ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿರುವ ದಂಪತಿ, ದುವಾ ಪಡುಕೋಣೆ ಸಿಂಗ್ ಒಂದು ಪ್ರಾರ್ಥನೆ ಎಂದರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ. ದೀಪಿಕಾ ಮತ್ತು ರಣವೀರ್," ಎಂದು ಅವರು ಬರೆದಿದ್ದಾರೆ. ಈಗ ತಮ್ಮ ಹೆಣ್ಣು ಮಗುವಿನ ಪಾದಗಳ  ಚಿತ್ರವನ್ನು ಹಂಚಿಕೊಂಡಿದ್ದಾರೆ, ಮಗಳಿಗೆ ಎಥ್ನಿಕ್ ವೇರ್‌ ಡ್ರೆಸ್ ಹಾಕಿದ್ದರು.  

ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು 83 ನಂತಹ ಚಿತ್ರಗಳಲ್ಲಿ ಸಹ-ನಟರಾಗಿರುವ ಇವರಿಬ್ಬರು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.

ಬಚ್ಚನ್ ಕುಟುಂಬದ ಏಕೈಕ ಉತ್ತರಾಧಿಕಾರಿ ಆರಾಧ್ಯಾ ಬಚ್ಚನ್ ಎಷ್ಟು ಶ್ರೀಮಂತೆ?

ಸೆಪ್ಟೆಂಬರ್ 8 ರಂದು ಜನಿಸಿದ ನಂತರ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಮಗಳ ಮೊದಲ ಫೋಟೋ ಇದಾಗಿದೆ. ದೀಪಿಕಾ ಅವರ ಪೋಸ್ಟ್ ರಾಹಾ ಅವರ ತಾಯಿ ಆಲಿಯಾ ಭಟ್ ಅವರ ಗಮನವನ್ನು ಸೆಳೆಯಿತು , ಅವರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ  ಹಾರ್ಟ್ ಹಾಕಿದ್ದಾರೆ. ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು "ಕ್ಯೂಟೆಸ್ಟ್" ಎಂದು ಕಾಮೆಂಟ್ ಮಾಡಿದ್ದಾರೆ.

2018 ರಲ್ಲಿ ವಿವಾಹವಾದ ದಂಪತಿಗಳು ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.ಮಗುವಿನ ಜನನದ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮೊದಲ ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿಯವರ ಬಹು ತಾರಾಗಣದ ಪೋಲೀಸ್ ನಾಟಕ ಸಿಂಘಂ ಎಗೇನ್‌ನಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಇದು ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್‌ನಲ್ಲಿ ದೀಪಿಕಾ ಅವರ ಚೊಚ್ಚಲ ಪ್ರವೇಶವಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್, ಅರ್ಜುನ್ ಕಪೂರ್ , ಅಕ್ಷಯ್ ಕುಮಾರ್ , ಕರೀನಾ ಕಪೂರ್ ಮತ್ತು ಟೈಗರ್ ಶ್ರಾಫ್ ಕೂಡ ನಟಿಸಿದ್ದಾರೆ. 

click me!