ಒಂದೇ ದಿನ ಬೆಂಗಳೂರಲ್ಲಿ ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್..!

Jul 21, 2020, 5:33 PM IST

ಬೆಂಗಳೂರು(ಜು.21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡಿದ್ದರೂ ಸಹಾ ಕೊರೋನಾ ಅಬ್ಬರ ಮಾತ್ರ ಕಮ್ಮಿಯಾಗಿಲ್ಲ.

ಇದೇ ವೇಳೆ ರಾಜ್ಯರಾಜಧಾನಿಯಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ವರೆಗೆ 8,785 ಇದ್ದ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಇದೀಗ 9,797ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1012 ಹೊಸ ಕಂಟೈನ್ಮೆಂಟ್ ಝೋನ್‌ಗಳು ಹುಟ್ಟಿಕೊಂಡಿವೆ.

ಅನ್‌ ಲಾಕ್‌ ಆದ್ರೂ ಬೆಂಗಳೂರಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿ..!

ನಿನ್ನೆ ಅಂದರೆ ಸೊಮವಾರ ಒಂದೇ ದಿನ 1012 ರಸ್ತೆಗಳು ಸೀಲ್‌ಡೌನ್ ಆಗಿವೆ. ಬಿಬಿಎಂಪಿಯ 198 ವಾರ್ಡ್‌ಗಳಲ್ಲೂ ಕೊರೋನಾ ಮಹಾಮಾರಿಯ ಅಬ್ಬರ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.