CSK ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೆ RCB ಸಂಭಾವ್ಯ ತಂಡ ಪ್ರಕಟ..! ಎರಡು ಮಹತ್ವದ ಬದಲಾವಣೆ..?

First Published May 18, 2024, 1:16 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 68ನೇ ಪಂದ್ಯದಲ್ಲಿಂದು ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮಾಡು ಇಲ್ಲವೇ ಮಡಿ ಎನಿಸಿಕೊಂಡಿರುವ ಈ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟವಾಗಿದೆ. ಆರ್‌ಸಿಬಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
 

1. ವಿರಾಟ್ ಕೊಹ್ಲಿ:

ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಸದ್ಯ 661 ರನ್ ಸಿಡಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.

2. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ತಂಡದ ನಾಯಕ ಫಾಫ್, ಉತ್ತಮ ಆರಂಭ ಪಡೆಯುತ್ತಿದ್ದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಫಾಫ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬೇಕಿದೆ.

3. ಗ್ಲೆನ್ ಮ್ಯಾಕ್ಸ್‌ವೆಲ್:

ಇಂಗ್ಲೆಂಡ್ ಮೂಲದ ಕ್ರಿಕೆಟಿಗ ವಿಲ್ ಜ್ಯಾಕ್ಸ್ ತಂಡ ತೊರೆದಿರುವುದರಿಂದ ಇದೀಗ ಮ್ಯಾಕ್ಸ್‌ವೆಲ್ ತಂಡಕೂಡಿಕೊಳ್ಳಲಿದ್ದಾರೆ. ಈ ಆವೃತ್ತಿಯಲ್ಲಿ ಮ್ಯಾಕ್ಸಿ ವಿಫಲವಾಗಿದ್ದರೂ, ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ದ ಮ್ಯಾಕ್ಸ್‌ವೆಲ್ ಅಬ್ಬರಿಸಿದ್ದರು. ಮ್ಯಾಕ್ಸ್‌ವೆಲ್ ಹಳೆಯ ವೈಪಲ್ಯ ಮರೆತು ತಂಡಕ್ಕೆ ಆಸರೆಯಾಗಬೇಕಿದೆ.

4. ರಜತ್ ಪಾಟೀದಾರ್:

ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ರಜತ್ ಪಾಟೀದಾರ್. ಕಳೆದ 7 ಇನಿಂಗ್ಸ್‌ಗಳ ಪೈಕಿ 5 ಇನಿಂಗ್ಸ್‌ಗಳಲ್ಲಿ ಸ್ಪೋಟಕ 50+ ರನ್ ಬಾರಿಸಿರುವ ಪಾಟೀದಾರ್ ಅಬ್ಬರಿಸಿದರೆ, ಸಿಎಸ್‌ಕೆ ಬೌಲರ್‌ಗಳು ತಬ್ಬಿಬ್ಬಾಗೋದು ಗ್ಯಾರಂಟಿ.

5. ಕ್ಯಾಮರೋನ್ ಗ್ರೀನ್:

ಆಸೀಸ್ ಮೂಲದ ಆಲ್ರೌಂಡರ್ ಕ್ಯಾಪರೋನ್ ಗ್ರೀನ್ ಕಳೆದ ಪಂದ್ಯದಲ್ಲಿ ಅದ್ಭುತ ಆಲ್ರೌಂಡ್ ಆಟ ಆಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಗ್ರೀನ್ ಇಂದು ಕೂಡಾ ಜವಾಬ್ದಾರಿಯುತ ಆಟ ಆಡಬೇಕಿದೆ.

6. ದಿನೇಶ್ ಕಾರ್ತಿಕ್:

ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್, ಚೆನ್ನೈ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಡಿಕೆ ಮತ್ತೊಮ್ಮೆ ಸಿಎಸ್‌ಕೆ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ.

7. ಅನೂಜ್ ರಾವತ್:

ಚೆನ್ನೈ ಎದುರಿನ ಮೊದಲ ಪಂದ್ಯದಲ್ಲಿ ಅನೂಜ್ ರಾವತ್ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಮಹಿಪಾಲ್ ಲೋಮ್ರಾರ್ ಬದಲಿಗೆ ರಾವತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

8. ಸ್ವಪ್ನಿಲ್ ಸಿಂಗ್:

ಆರ್‌ಸಿಬಿ ತಂಡದ ಲಕ್ಕಿ ಚಾರ್ಮ್ ಎನಿಸಿಕೊಂಡಿರುವ ಸ್ವಪ್ನಿಲ್ ಸಿಂಗ್, ಮೊದಲ ಓವರ್‌ನಲ್ಲೇ ತಂಡಕ್ಕೆ ವಿಕೆಟ್ ಕಬಳಿಸಿಕೊಡುತ್ತಿದ್ದಾರೆ. ಅಗತ್ಯವಿದ್ದರೆ ಸ್ವಪ್ನಿಲ್ ಸಿಕ್ಸರ್‌ ಕೂಡಾ ಸಿಡಿಸಬಲ್ಲರು.

9. ಕರ್ಣ ಶರ್ಮಾ:

ಆರ್‌ಸಿಬಿ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಕರ್ಣ್ ಶರ್ಮಾ ಕೂಡಾ ಮಹತ್ವದ ಘಟ್ಟದಲ್ಲಿ ತಂಡಕ್ಕೆ ವಿಕೆಟ್ ಕಬಳಿಸುವ ಮೂಲಕ ಆಸರೆಯಾಗುತ್ತಿದ್ದಾರೆ. ಕರ್ಣ್ ಮೇಲೆ ಈ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

10. ಮೊಹಮ್ಮದ್ ಸಿರಾಜ್:

ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್, ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇದೀಗ ಸಿರಾಜ್ ಮತ್ತೊಮ್ಮೆ ಕರಾರುವಕ್ಕಾದ ದಾಳಿ ನಡೆಸಬೇಕಿದೆ.

11. ಲಾಕಿ ಫರ್ಗ್ಯೂಸನ್:

ಕಿವೀಸ್ ಮೂಲದ ವೇಗಿ ಲಾಕಿ ಫರ್ಗ್ಯೂಸನ್ ಕೂಡಾ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದಾರೆ. ಲಾಕಿ ಇನ್ನೊಮ್ಮೆ ಶಿಸ್ತುಬದ್ಧ ದಾಳಿ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ.

12. ಯಶ್ ದಯಾಳ್:

ಇನ್ನು ಇಂಪ್ಯಾಕ್ಟ್ ಬೌಲರ್‌ ಆಗಿ ಎಡಗೈ ವೇಗಿ ಯಶ್ ದಯಾಳ್ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಯಶ್ ದಯಾಳ್ ಕೇವಲ 20 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು.

Latest Videos

click me!